ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಕಾಲದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ಕೆ ಜನರ ಮಾರ್ಕ್ಸ್ ಎಷ್ಟು?

|
Google Oneindia Kannada News

ನವದೆಹಲಿ, ಮೇ 30: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಆರಂಭದಿಂದ ಈಗಿನವರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಘೋಷಿಸಿದ ಯೋಜನೆಗಳ ಅನುಮೋದನೆಯ ರೇಟಿಂಗ್ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ದೇಶದಲ್ಲಿ ಅದಾಗ್ಯೂ, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ನಿರುದ್ಯೋಗದ ಬಗ್ಗೆ ದೀರ್ಘಕಾಲದ ಸಮಸ್ಯೆ ಎದುರಿಸಬೇಕಾಗಿದೆ ಎಂದು ಸೋಮವಾರ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ 64,000 ಜನರ ಪೈಕಿ ಶೇ.67ರಷ್ಟು ಜನರ ಪ್ರಕಾರ, ಪ್ರಧಾನಿ ಮೋದಿ ಸರ್ಕಾರವು ಎರಡನೇ ಅವಧಿಯಲ್ಲಿ ಎಲ್ಲ ನಿರೀಕ್ಷೆಗಳನ್ನು ಪೂರೈಸಿದೆ. ಈ ಶೇಕಡವಾರು ಪ್ರಮಾಣವು ಕಳೆದ ವರ್ಷ ಶೇ.51ರಷ್ಟಿತ್ತು. ಕೋವಿಡ್ -19 ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ 2020ರ ವೇಳೆ ಆಸ್ಪತ್ರೆಗಳು ಮತ್ತು ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರದ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಗ್ಗೆ ಶೇ.62ರಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಸಮೀಕ್ಷೆಯ ಕುರಿತು ಒಂದು ವರದಿ ಇಲ್ಲಿದೆ ಓದಿ.

ಭಾರತದಲ್ಲಿ ಪೆಟ್ರೋಲ್ ಏರಿಕೆಗೆ ಮೊಘಲರು, ಹಣದುಬ್ಬರಕ್ಕೆ ಅಕ್ಬರ್ ಕಾರಣವೇ?ಭಾರತದಲ್ಲಿ ಪೆಟ್ರೋಲ್ ಏರಿಕೆಗೆ ಮೊಘಲರು, ಹಣದುಬ್ಬರಕ್ಕೆ ಅಕ್ಬರ್ ಕಾರಣವೇ?

ಸರ್ಕಾರದ ಕೋವಿಡ್-19 ನಿರ್ವಹಣೆ ಬಗ್ಗೆ ಜನರ ಮೆಚ್ಚುಗೆ

ಸರ್ಕಾರದ ಕೋವಿಡ್-19 ನಿರ್ವಹಣೆ ಬಗ್ಗೆ ಜನರ ಮೆಚ್ಚುಗೆ

ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ನಿರ್ವಹಣೆಯಲ್ಲಿ ಸರ್ಕಾರವು ಸೂಕ್ತ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಸಮೀಕ್ಷೆಯು ಹೇಳುತ್ತದೆ. ಆದರೂ ಈ ವರ್ಷದ ಆರಂಭದಿಂದಲೂ ನಿರುದ್ಯೋಗದ ಬಗ್ಗೆ ಶೇ.7ರನಷ್ಟು ಜನರು ಕಳವಳ ವ್ಯಕ್ತಪಡಿಸಿದ್ದಾರೆ, ಈ ಸಮೀಕ್ಷೆ ವೇಳೆಯಲ್ಲಿ ಶೇ.47ರಷ್ಟು ಜನರು ಸರ್ಕಾರವು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅನುಮೋದನೆಯಿಂದ ಭರವಸೆ

ಕೇಂದ್ರ ಸರ್ಕಾರದ ಅನುಮೋದನೆಯಿಂದ ಭರವಸೆ

ದೇಶದಲ್ಲಿ ನಿರುದ್ಯೋಗವನ್ನು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರವು ನೀಡಿರುವ ಶೇ.37ರಷ್ಟು ಅನುಮೋದನೆಯು ಹೊಸ ಭರವಸೆಯನ್ನು ಹುಟ್ಟಿಸುತ್ತದೆ. ಇದು 2021ರಲ್ಲಿ ಶೇ.27 ಮತ್ತು 2020 ರಲ್ಲಿ ಶೇ.29ರಷ್ಟಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಜನರು ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೂ ಸಹ ನಗರ ಪ್ರದೇಶಗಳಲ್ಲಿ ಸಾವಿರಾರು ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡರು.

ಹಣದುಬ್ಬರ ನಿಯಂತ್ರಿಸುವುದಕ್ಕೆ ಕೇಂದ್ರ ಸರ್ಕಾರದ ಕ್ರಮ

ಹಣದುಬ್ಬರ ನಿಯಂತ್ರಿಸುವುದಕ್ಕೆ ಕೇಂದ್ರ ಸರ್ಕಾರದ ಕ್ರಮ

ಭಾರತದಲ್ಲಿ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಜಾರಿಗೊಳಿಸಿತು. ಇದು ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದ್ದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಗೋಧಿ ಮತ್ತು ಸಕ್ಕರೆಯ ರಫ್ತುಗಳನ್ನು ನಿರ್ಬಂಧಿಸಿತು. ಯಾವುದೇ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರಣಿ ಕ್ರಮಗಳನ್ನು ಜಾರಿಗೊಳಿಸಿತು.

ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿಲ್ಲ

ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿಲ್ಲ

ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಅಗತ್ಯವಸ್ತುಗಳ ಬೆಲೆಯಲ್ಲಿ ಯಾವುದೇ ರೀತಿ ಇಳಿಕೆಯಾಗಿಲ್ಲ ಎಂದು ಶೇ.73ರಷ್ಟು ಜನರು ಅಭಿಪ್ರಾಯ ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ಎಂಟು ವರ್ಷ ಪೂರೈಸಿರುವುದರ ಹಿನ್ನೆಲೆ ನಡೆಸಿದ ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಮತ್ತಷ್ಟು ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

* ದೇಶದಲ್ಲಿ ಶೇ.73ರಷ್ಟು ಜನರು ತಮ್ಮ ಮತ್ತು ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ

* ಶೇ.44ರಷ್ಟು ಮಂದಿ ದೇಶದಲ್ಲಿ ವಾಯು ಗುಣಮಟ್ಟ ಸುಧಾರಿಸುವಲ್ಲಿ ಮತ್ತು ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಸೂಕ್ತ ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದಿದ್ದಾರೆ.

* ಭಾರತದಲ್ಲಿ ಕೋಮು ಸೌಹಾರ್ದತೆಯನ್ನು ನಿರ್ವಹಿಸುವಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಶೇ.60ರಷ್ಟು ಜನರು ಒಪ್ಪಿಕೊಂಡಿದ್ದರೆ, ಶೇ.33ರಷ್ಟು ಜನರು ಅದನ್ನು ನಿರಾಕರಿಸಿದ್ದಾರೆ.

* ಭಾರತದಲ್ಲಿ ವ್ಯಾಪಾರ ಮಾಡುವುದು ತೀರಾ ಸುಲಭ ಎಂದು ಶೇ.50ರಷ್ಟು ಮಂದಿ ಹೇಳಿದ್ದಾರೆ.

English summary
PM Narendra Modi's government approval ratings is highest since start of Coronavirus pandemic: Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X