ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕಿಸಾನ್​ ಯೋಜನೆ: 10ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ

|
Google Oneindia Kannada News

ನವದೆಹಲಿ, ಜನವರಿ 01: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಡುಗಡೆ ಮಾಡಿದ್ದಾರೆ. ನರೇಂದ್ರ ಮೋದಿ 2022ರ ಹೊಸ ವರ್ಷದ ಮೊದಲ ದಿನವೇ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಪ್ರಧಾನಮಂತ್ರಿ ಕಿಸಾನ್​ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ 6000 ರೂ. ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡುತ್ತದೆ. ಅದರ 9 ಕಂತುಗಳ ಹಣವನ್ನು ರೈತರು ಇದುವರೆಗೆ ಸ್ವೀಕರಿಸಿದ್ದರು.

ಇದೇ ವೇಳೆ ಪ್ರಧಾನಿ ಮೋದಿ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) 14 ಕೋಟಿ ರೂ.ಗೂ ಹೆಚ್ಚು ಇಕ್ವಿಟಿ ಅನುದಾನವನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಸುಮಾರು 1.24 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ.

PM Modi Releases 10th Installment Of Financial Benefit Under PM-KISAN Scheme

ಈ ಯೋಜನೆಯಡಿ ದೇಶದ 10 ಕೋಟಿ ರೈತರ ಬ್ಯಾಂಕ್​ ಖಾತೆಗೆ ತಲಾ 2 ಸಾವಿರ ರೂ.ಜಮೆಯಾಗಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಕಿಸಾನ್ ಸಮ್ಮಾನ್​ ಯೋಜನೆಯ 10ನೇ ಕಂತನ್ನು ಬಿಡುಗಡೆ ಮಾಡಿರುವುದು ಮಾತ್ರವಲ್ಲದೆ, ಪ್ರಧಾನಿ ಮೋದಿ 351 ರೈತ ಉತ್ಪಾದನಾ ಸಂಸ್ಥೆಗಳಿಗೆ 14 ಕೋಟಿ ರೂಪಾಯಿ ಇಕ್ವಿಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಸುಮಾರು 1.24 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

ಜನವರಿ 1 ರಂದು ಪ್ರಧಾನಿ ಮೋದಿ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. ರೈತರಿಗೆ ಕಳುಹಿಸಿದ ಸಂದೇಶದಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2022 ರಂದು ಮಧ್ಯಾಹ್ನ 12 ಗಂಟೆಗೆ ಪಿಎಂ ಕಿಸಾನ್ ಯೋಜನೆಯಡಿ 10ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ.

ಭಾರತದ 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವರ್ಗಾಯಿಸಲಾಗಿದೆ. PM-KISAN ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂ. ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ.

ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. ಇದುವರೆಗೆ ಈ ಯೋಜನೆಯಡಿ 1.6 ಲಕ್ಷ ಕೋಟಿ ರೂ. ಹಣವನ್ನು ರೈತ ಕುಟುಂಬಗಳಿಗೆ ವರ್ಗಾಯಿಸಲಾಗಿದೆ.

ಸಾಧ್ಯವಾದಷ್ಟು , ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಆಧಾರ್‌ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಸೂಚಿಸಲಾಗಿದ್ದು, ಎಲ್ಲಾ ರಾಜ್ಯಗಳ ಪೈಕಿ , ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು ಆಧಾರ್‌ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ 2021ರ ವರ್ಷದ ಫೆಬ್ರುವರಿಯಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಸಹ ದೊರೆತಿದೆ.

ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ರಾಜ್ಯದಿಂದ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, 2018-19 ರಿಂದ ಜ.1, 2022 ರವರೆಗೆ 10 ನೇ ಕಂತಿನವರೆಗೆ ರಾಜ್ಯದ ಒಟ್ಟು 54 ಲಕ್ಷದ 52ಸಾವಿರ ರೈತ ಕುಟುಂಬಗಳಿಗೆ ಒಟ್ಟು 8707 ಕೋಟಿ 97ಲಕ್ಷ ರೂ.ಮೊತ್ತ ಬಿಡುಗಡೆಯಾದಂತಾಗಿದೆ‌.

ಪ್ರಧಾನಿ ಮೋದಿ ಅವರಿಂದು ಬಿಡುಗಡೆ ಮಾಡಿರುವ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ 14 ಕೋಟಿ ಇಕ್ವಿಟಿ ಅನುದಾನದಲ್ಲಿ ಕರ್ನಾಟಕದ ಒಟ್ಟು 30 ಎಫ್‌ಪಿಓಗಳ ಒಟ್ಟು 12047 ಸದಸ್ಯರಿಗೆ 1 ಕೋಟಿ 21ಲಕ್ಷದ 42 ಸಾವಿರ ರೂ.ಅನುದಾನ ಬಿಡುಗಡೆಯಾಗಿದೆ.
ಈ 1,21,42000 ರೂ.ಅನುದಾನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಎಫ್‌ಪಿಓಗಳಿಗೆ 57 ಲಕ್ಷದ 74 ಸಾವಿರ ರೂ,ನಬಾರ್ಡ್‌ನ 11 ಎಫ್‌ಪಿಓಗಳಿಗೆ 43 ಲಕ್ಷದ 69ಸಾವಿರ ರೂ, ಎಸ್‌ಎಫ್‌ಎಸಿಯ 6 ಎಫ್‌ಪಿಓಗಳಿಗೆ 19 ಲಕ್ಷದ 19 ಸಾವಿರ ರೂ.ಅನುದಾನ ಇಕ್ವಿಟಿ ಗ್ರ್ಯಾಂಟಾಗಿದೆ.

ರೈತ ಉತ್ಪಾದಕರ ಸಂಸ್ಥೆ ಈಕ್ವಿಟಿ ಅನುದಾನ ಬಿಡುಗಡೆ ಕಾರ್ಯಕ್ರಮ ಭಾರತ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ Formation and Promotion of 10,000 Farmer Producer Organizations ಎಂದು ಘೋಷಿಸಲಾಗಿರುತ್ತದೆ.

ರಾಜ್ಯಕ್ಕೆ ವಿವಿಧ ಅನುಷ್ಠಾನ ಸಂಸ್ಥೆಗಳಿಂದ 185 ರೈತ ಉತ್ಪಾದಕರ ಸಂಸ್ಥೆ ( ಜಲಾನಯನ ಅಭಿವೃದ್ಧಿ ಇಲಾಖೆ -100 , SFAC - 25 , NABARD - 37 ಮತ್ತು NCDC - 23 ) ಗಳನ್ನು ರಚಿಸಲು ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಗುರಿಯನ್ನು ನೀಡಲಾಗಿದೆ.ಅಲ್ಲದೇ ಯೋಜನೆಯಡಿ ಇಲ್ಲಿಯವರೆಗೂ ಒಟ್ಟಾರೆ 152 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದ್ದು,ಜಲಾನಯನ ಅಭಿವೃದ್ಧಿ ಇಲಾಖೆ -99 SFAC - 21 , NABARD - 313 ) NCDC - 1 ಎಫ್‌ಪಿಓ ಆಗಿವೆ.

ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಗ್ರಹಿಸಲಾದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ .15 ಲಕ್ಷಗಳ ವರೆಗೆ ಮ್ಯಾಚಿಂಗ್ ಅನುದಾನವಾಗಿ ಇಕ್ವಿಟಿ ಗ್ರ್ಯಾಂಟ್ ನೀಡಲಾಗುತ್ತಿದೆ . ಈ ರೂ .15‌ಲಕ್ಷ ಇಕ್ವಿಟಿ ಗ್ರ್ಯಾಂಟ್‌ಗಳನ್ನು ಗರಿಷ್ಠ ಮೂರು ಹಂತಗಳಲ್ಲಿ ನೀಡಲಾಗುವುದು.

ಇದರಿಂದ ರೈತ ಉತ್ಪಾದಕರ ಸಂಸ್ಥೆಗಳ ಬಂಡವಾಳ ನಿಧಿ ಹೆಚ್ಚಾಗಿ ಇದು ವ್ಯವಹಾರ ಅಭಿವೃದ್ಧಿಗೆ ನೆರವಾಗುತ್ತದೆ . ಇನ್ನು ರೈತ ಉತ್ಪಾದಕರ ಸಂಸ್ಥೆಗಳು ಪಡೆದ ಇಕ್ವಿಟಿ ಗ್ರ್ಯಾಂಟ್ ಅನುದಾನದಲ್ಲಿ ಸದಸ್ಯರುಗಳಿಂದ ಸಂಗ್ರಹಿಸಿದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ. 2000ವರೆಗೆ ಸೀಮಿತಗೊಳಿಸಿ ಷೇರುಗಳನ್ನು ನೀಡಲಾಗುವುದು.ಮೊದಲ ಹಂತದಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 30 ರೈತ ಉತ್ಪಾದಕರ ಸಂಸ್ಥೆಗಳ 12047 ಸದಸ್ಯರುಗಳಿಗೆ 1 ಕೋಟಿ 21ಲಕ್ಷದ 42 ಸಾವಿರ ರೂ.ಅನುದಾನವನ್ನು ಪ್ರಧಾನ ಮಂತ್ರಿಗಳು ಇಂದು ಬಿಡುಗಡೆ ಮಾಡಿದ್ದಾರೆ.

English summary
Prime Minister Narendra Modi released the 10th installment of financial benefit under the Pradhan Mantri Kisan Samman Nidhi (PM-KISAN) scheme on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X