• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ವಿತರಣೆ; ಮೋದಿ ಶ್ಲಾಘನೆ

|
Google Oneindia Kannada News

ನವದೆಹಲಿ, ಜೂನ್ 21: ದೇಶದಲ್ಲಿ ಸೋಮವಾರ ದಾಖಲೆ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

"ಸೋಂಕಿನ ವಿರುದ್ಧ ಲಸಿಕೆ ನಮ್ಮ ಪ್ರಬಲ ಅಸ್ತ್ರ" ಎಂಬುದನ್ನು ಮತ್ತೆ ಉಲ್ಲೇಖಿಸಿರುವ ಮೋದಿ, "ಒಂದೇ ದಿನದಲ್ಲಿ ದಾಖಲೆಯ ಮಟ್ಟದಲ್ಲಿ ಕೊರೊನಾ ಲಸಿಕೆ ನೀಡಿರುವುದು ಸಂತೋಷಕರವಾಗಿದೆ. ಕೊರೊನಾ ವಿರುದ್ಧ ನಮ್ಮ ಹೋರಾಟ ಮುಂದುವರೆಯಬೇಕಿದೆ" ಎಂದು ಟ್ವೀಟ್ ಮಾಡಿದ್ದಾರೆ.

"ಲಸಿಕೆ ಪಡೆದುಕೊಂಡ ಎಲ್ಲರಿಗೂ ಶುಭಾಶಯ ಹಾಗೂ ಇದಕ್ಕೆ ಕಾರಣೀಕರ್ತರಾದ ಮುಂಚೂಣಿ ಕಾರ್ಯಕರ್ತರಿಗೆ ಧನ್ಯವಾದ, ವೆಲ್‌ ಡನ್ ಇಂಡಿಯಾ" ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

ಲಸಿಕೆ ಕುರಿತು ಪರಿಷ್ಕೃತ ಮಾರ್ಗಸೂಚಿ ಪರಿಚಯಿಸಿದ ಮೊದಲ ದಿನವೇ, ಅಂದರೆ ಸೋಮವಾರ 70 ಲಕ್ಷಕ್ಕೂ ಹೆಚ್ಚು ಕೊರೊನಾ ಲಸಿಕೆ ಡೋಸ್‌ ಅನ್ನು ಉಚಿತವಾಗಿ ನೀಡಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಅಭಿಯಾನ ಆರಂಭಿಸಿದೆ.

ಜನವರಿ 16ರಿಂದ ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾದ ಬಳಿಕ ಈವರೆಗೆ ನೀಡಲಾದ ಅತಿ ಹೆಚ್ಚಿನ ಸಂಖ್ಯೆಯ ಲಸಿಕೆ ಇದಾಗಿದೆ. ಈ ಮೂಲಕ ಒಟ್ಟು 28.7 ಕೋಟಿ ಲಸಿಕೆ ನೀಡಿರುವುದಾಗಿ ಮಾಹಿತಿ ನೀಡಿದೆ. ಏಪ್ರಿಲ್ 2ರಂದು 42,65,157 ಡೋಸ್‌ ಕೊರೊನಾ ಲಸಿಕೆ ನೀಡಿದ್ದೇ ಅತಿ ಹೆಚ್ಚಿನ ಕೊರೊನಾ ಲಸಿಕೆ ನೀಡಿದ ದಿನವಾಗಿತ್ತು.

"ಎಲ್ಲರಿಗೂ ಉಚಿತ ಲಸಿಕೆ ಅಭಿಯಾನವನ್ನು ಕೇಂದ್ರ ಸರ್ಕಾರ ಇಂದು ಆರಂಭಿಸಿದೆ. ಬಡವರು, ಮಧ್ಯಮ ವರ್ಗ ಮತ್ತು ಯುವಕರು ಈ ಅಭಿಯಾನದ ಫಲಾನುಭವಿಗಳಾಗಲಿದ್ದಾರೆ. ನಾವೆಲ್ಲರೂ ಲಸಿಕೆ ಪಡೆಯುವುದಾಗಿ ಪ್ರತಿಜ್ಞೆ ಮಾಡಬೇಕು. ನಾವೆಲ್ಲಾ ಜೊತೆಯಾಗಿ ಕೊರೊನಾ ಸೋಂಕನ್ನು ಸೋಲಿಸಬೇಕು" ಎಂದು ಇದೇ ಸಂದರ್ಭ ಮೋದಿ ಕರೆ ನೀಡಿದ್ದಾರೆ.

ಯೋಗ ತರಬೇತಿಗೆ ಎಂ-ಯೋಗ ಆ್ಯಪ್ ಘೋಷಿಸಿದ ಪ್ರಧಾನಿ ಮೋದಿಯೋಗ ತರಬೇತಿಗೆ ಎಂ-ಯೋಗ ಆ್ಯಪ್ ಘೋಷಿಸಿದ ಪ್ರಧಾನಿ ಮೋದಿ

ದೇಶದಲ್ಲಿ ಕೊರೊನಾ ಸೋಂಕಿನ ಹರಡುವಿಕೆ ತಡೆಗೆ ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಗಿತು.

ಏಪ್ರಿಲ್ 1ರಂದು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಮೂರನೇ ಹಂತದಲ್ಲಿ ಮೇ 1ರಿಂದ 18-44 ವಯೋಮಾನದವರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಜೂನ್ 21ರ ಸೋಮವಾರದಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ನೀಡಲು ಆರಂಭಿಸಲಾಗಿದೆ.

English summary
PM Narendra Modi today reiterated that "the vaccine remains our strongest weapon" in the fight against coronavirus as India administered over 70 lakh vaccine doses on monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X