ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ 'ಶ್ರಾವಣ ಬಂತು' ನಾಡಿಗೆ, ಮೋದಿ ಮಾತಿನಲ್ಲಿ ಕೇಳಿ ಬಂತು!

|
Google Oneindia Kannada News

ಬೆಂಗಳೂರು, ಜುಲೈ 28: ' ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ, ಬಂತು ಬೀಡಿಗೆ....' ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಶ್ರಾವಣ ಮಾಸದ ಸೊಬಗು ವರ್ಣಿಸುವ ಈ ಕವನದ ಸಾಲುಗಳು ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಮೋಡಿ ಮಾಡಿದೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಂದು ಎರಡನೇ ಬಾರಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮೋದಿ ನಡೆಸಿಕೊಟ್ಟರು. ಮೋದಿ "ಮನದ ಮಾತಿನಲ್ಲಿ" ಬೇಂದ್ರೆ ಅಜ್ಜನ ಕವನದ ಸಾಲು ಕೇಳಿ ಬಂದಿದ್ದು ವಿಶೇಷ.

ಪ್ರಧಾನಿ ಅವರು ಶ್ರಾವಣ ಮಾಸದ ಬಗ್ಗೆ ಮಾತನಾಡುವಾಗ, "ದೇಶದಲ್ಲಿ ಶ್ರಾವಣ ಮಾಸವನ್ನು ಹೇಗೆಲ್ಲ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ, ವಿವಿಧ ಸಂಸ್ಕೃತಿ, ಭಾಷೆಗಳಲ್ಲಿ ಮಳೆಗಾಲವನ್ನು ಕೊಂಡಾಡಲಾಗಿದೆ" ಎಂದರು.

ಮೋದಿ ಮೊದಲ ಮನ್‌ ಕೀ ಬಾತ್‌, ನೀರು ಉಳಿಸುವ ಸಂಕಲ್ಪ ಮೋದಿ ಮೊದಲ ಮನ್‌ ಕೀ ಬಾತ್‌, ನೀರು ಉಳಿಸುವ ಸಂಕಲ್ಪ

ನಂತರ ಶ್ರೀಮಾನ್ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಶ್ರಾವಣ ಕುರಿತ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ ಎಂದು ಶ್ರಾವಣ ಬಗ್ಗೆ ಬೇಂದ್ರೆ ಬರೆದ ಕವನದ ಎರಡು ಸಾಲನ್ನು ಮೋದಿ ವಾಚಿಸಿದರು.

PM Modi Quotes Kannada Poet Dr Bendres Poem On Shravana

"ಮಳೆಗಾಲ ಸೌಂದರ್ಯ, ಸಂತಸ, ಸಂಭ್ರಮವನ್ನು ಕೊಂಡಾಡಿ ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಅವರು ಶ್ರಾವಣ ತಿಂಗಳ ಮಹತ್ವವನ್ನು ಈ ರೀತಿ ವಿವರಿಸಿದ್ದಾರೆ" ಎಂದು ಮೋದಿ ಹೇಳಿದರು.

ಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನ

ಮೋದಿ ಹೇಳಿದ ಬೇಂದ್ರೆಯವರ ಶ್ರಾವಣ ಕವನದ ಎರಡು ಸಾಲು:
ಹೊಳಿಗೆ ಮತ್ತೆ ಮಳಿಗೆ
ಆಗ್ಯೇದ ಲಗ್ನI ಅದರಾಗ ಭೂಮಿ ಮಗ್ನI
(होडिगे मडिगे आग्येद लग्ना | अदराग भूमि मग्ना )
Meaning that the relationship between drizzling rain and stream of water is wondrous and earth gets bedazzled by such spectacle!

ಶ್ರಾವಣಾ ಕವನದ ಪೂರ್ಣ ಸಾಲುಗಳು ನಿಮಗಾಗಿ:
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||ಪಲ್ಲವಿ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||ಅನುಪಲ್ಲವಿ||
1
ಶ್ರಾವಣಾ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ
ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆ ಹಗಲು |
ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
ಹೊಳಿಗೆ ಮತ್ತೆ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ

2
ಶ್ರಾವಣಾ ಬಂತು ಊರಿಗೆ | ಕೇರಿ ಕೇರಿಗೆ
ಹೊಡೆದ ಝೂರಿಗೆ
ಜೋಕಾಲಿ ಏರಿ | ಆಡರ್ಯಾವ ಮರಕ ಹಾರಿ |
ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ||
ಶ್ರಾವಣಾ ಬಂತು.
3
ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡು | ನಿಂತಾವ ಹರ್ಷಗೊಂಡು

5
ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಷಿಣ ಒಡೆಧ್ಹಾಂಗ
ಹೊಮ್ಮುತಾವ | ಬಂಗಾರ ಚಿಮ್ಮತಾವ |
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |

5
ನಾಡೆಲ್ಲ ಏರಿಯ ವಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||

ಶ್ರಾವಣಾ ಬಂತು
ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟ ಸಂತೋಷ
ಕುಣಿತದ | ತಾನsನ ದಣಿತದ |
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು.

ಇದಕ್ಕೂ ಮುನ್ನ ಚಂದ್ರಯಾನ-2 ಯೋಜನೆಯ ಯಶಸ್ವಿಯಾಗಿ ನಡೆಸಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದರು, ಇದಲ್ಲದೆ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಮಕ್ಕಳು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರನ್ನು ಹೊಗಳಿದರು.

English summary
PM Modi quotes Kannada poet Dattatreya Ramachandra Bendre's poem on Shravana(Sawan month) in his second Mann Ki Baat programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X