ಪ್ರಧಾನಿ ಮೋದಿ ವಿದ್ಯಾರ್ಹತೆ: ಕೇಜ್ರಿವಾಲ್ ಸಿಡಿಸಿದ ಬಾಂಬ್

Posted By:
Subscribe to Oneindia Kannada

ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗಿಂತಲೂ ಮಂಚೂಣಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿ ವಿದ್ಯಾರ್ಹತೆ ವಿಚಾರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ನರೇಂದ್ರ ಮೋದಿ ಶಿಕ್ಷಣದ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಅರವಿಂದ್ ಕೇಜ್ರಿವಾಲ್ ವಿವರ ಕೋರಿದ್ದರು. ಅದರಂತೆ, ದೆಹಲಿ ಮತ್ತು ಗುಜರಾತ್ ವಿವಿಗೆ ದಾಖಲೆ ಬಹಿರಂಗ ಪಡಿಸುವಂತೆ ಸಿಐಸಿ ಸೂಚಿಸಿತ್ತು. (ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿಗೆ ಉತ್ತರ)

ಇದಕ್ಕೆ ಮೋದಿ ಪ್ರತಿಭಾನ್ವಿತ ವಿದ್ಯಾರ್ಥಿ, ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ (ರಾಜ್ಯಶಾಸ್ತ್ರ) ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಗುಜರಾತ್‌ ವಿವಿ ಬಹಿರಂಗಗೊಳಿಸಿತ್ತು.

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ಮೋದಿ ಬಿಎ ಪದವಿಯನ್ನು ಬಹಿರಂಗಗೊಳಿಸುವಂತೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಗೆ ಪತ್ರ ಬರೆದಿದ್ದರು.

ಇದರ ಮುಂದುವರಿದ ಭಾಗವಾಗಿ ಕೇಜ್ರಿವಾಲ್ ಹೊಸ ಬಾಂಬ್ ಸಿಡಿಸಿದ್ದು, ಪ್ರಧಾನಮಂತ್ರಿ ಕಾರ್ಯಾಲಯ ಕೆಲವೊಂದು ಮಾಧ್ಯಮಗಳಿಗೆ ಮೋದಿ ವಿದ್ಯಾರ್ಹತೆ ವಿಚಾರದಿಂದ ದೂರ ಉಳಿಯಲು ಸೂಚಿಸಿದ್ದಾರೆಂದು ಹೇಳಿದ್ದಾರೆ. (ಕನ್ನಡ ಪತ್ರಿಕೆಯಲ್ಲಿ ಕೇಜ್ರಿ ಸರ್ಕಾರದ ಜಾಹೀರಾತು)

ತನ್ನ ಸಾಲು ಸಾಲು ಟ್ವೀಟ್ ಸಂದೇಶದಲ್ಲಿ ಖಾಸಗಿ ವಾಹಿನಿಗಳ ಹೆಸರನ್ನೂ ಬಹಿರಂಗ ಪಡಿಸಿರುವ ಕೇಜ್ರಿವಾಲ್, ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದಿದ್ದಾರೆ. ಕೇಜ್ರಿ ಬಹಿರಂಗ ಪಡಿಸಿರುವ ವಾಹಿನಿಗಳು ಯಾವುವು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮಾಧ್ಯಮ ಸಂಸ್ಥೆಗಳು

ಮಾಧ್ಯಮ ಸಂಸ್ಥೆಗಳು

ಮೋದಿ ಶೈಕ್ಷಣಿಕ ಪದವಿ ವಿವಾದದ ಬಗ್ಗೆ ಸೈಲೆಂಟಾಗಿ ಇರುವಂತೆ ಕೆಲವು ಮಾಧ್ಯಮ ಸಂಸ್ಥೆಗಳು ತಮ್ಮ ವರದಿಗಾರರಿಗೆ ಸೂಚಿಸಿವೆ. ದೆಹಲಿ ವಿವಿ, ಪ್ರಧಾನಿ ಮೋದಿಯ ಪದವಿಯ ಬಗ್ಗೆ ಯಾವುದೇ ವಿವರ ನೀಡದೇ, ಪಿಎಂ ಕಾರ್ಯಾಲಯ ಸಂಪರ್ಕಿಸುವಂತೆ ಆಪ್ ಕಾರ್ಯಕರ್ತರಿಗೆ ಸೂಚಿಸಿದೆ ಎಂದು ಕೇಜ್ರಿ ಆರೋಪಿಸಿದ್ದಾರೆ.

ದೆಹಲಿ ವಿವಿಗೆ ಪತ್ರ

ಪ್ರಧಾನಿ ಮೋದಿಯವರ ವಿದ್ಯಾರ್ಹತೆಯ ಮಾಹಿತಿ ಕೋರಿ ದೆಹಲಿ ವಿವಿ ಉಪಕುಲಪತಿಗೆ ಪತ್ರ ಬರೆದಿದ್ದೇನೆ.

ಮೋದಿ ವಿದ್ಯಾರ್ಹತೆ

ಮೋದಿ ಹೆಚ್ಚು ಓದಿಲ್ಲಾಂದ್ರೂ ಪರವಾಗಿಲ್ಲ, ಆದರೆ ಸುಳ್ಳು ಮಾಹಿತಿ ನೀಡಿದ್ದು ಕ್ರಿಮಿನಲ್ ಅಪರಾಧ ಮತ್ತು ವಿಶ್ವಾಸದ್ರೋಹ.

ಮಾಧ್ಯಮಗಳ ಹೆಸರನ್ನು ಬಹಿರಂಗ ಪಡಿಸಿದ ಕೇಜ್ರಿ

ಮೋದಿ ವಿದ್ಯಾರ್ಹತೆ ಕೆಣಕದಂತೆ ಖಾಸಗಿ ವಾಹಿನಿಯ ವರದಿಗಾರರಿಗೆ ಸೂಚಿಸಲಾಗಿದೆ. ಇದರಲ್ಲಿ ಮೋದಿ ಪರವಾಗಿರುವ ವಾಹಿನಿಗಳು ಸೇರಿದಂತೆ ಎನ್ಡಿಟಿವಿ ಮತ್ತು ಎಬಿಪಿ ನ್ಯೂಸ್ ಕೂಡಾ ಇದೆ.

ಮೋದಿ ಪದವೀಧರರಲ್ಲ

ದೆಹಲಿ ವಿವಿ ಶೈಕ್ಷಣಿಕ ದಾಖಲೆ ನೀಡುತ್ತಿಲ್ಲ, ಯಾಕೆ? ನನ್ನ ಮಾಹಿತಿಯ ಪ್ರಕಾರ ಅವರು ದೆಹಲಿ ವಿವಿಯಿಂದ ಪದವಿ ಪಡೆದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi qualification row: Some Private Media asked their reporter to silent on this issue, Delhi CM Arvind Kejriwal.
Please Wait while comments are loading...