• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ ಮೋದಿ: ಕಾಂಗ್ರೆಸ್

|
Google Oneindia Kannada News

ನವದೆಹಲಿ, ಜೂನ್ 22: ಪ್ರಧಾನಿ ನರೇಂದ್ರ ಮೋದಿಯವರು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ಸುಕತೆ ಯಿಂದ ಆಚರಿಸಿದ್ದಾರೆ. ಆದರೆ ಮೋದಿ ಯೋಗವನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡುತ್ತಿರುವುದು ಅವರ ರಾಜಕೀಯ ಲಾಭಕ್ಕೆ ಎಂದು ಕಾಂಗ್ರೆಸ್ ದೂರಿದೆ.

'ಎಲ್ಲವನ್ನೂ ಬಿಟ್ಟು, ಕೇವಲ ಯೋಗದಿಂದ ದೇಶದ ಆರ್ಥಿಕತೆ ಪ್ರಗತಿ ಹೊಂದುವುದಿಲ್ಲ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.

ದೇವೇಗೌಡರ ಮನೆಯಿಂದ ದೆಹಲಿ ಲೋದಿ ಗಾರ್ಡನ್ ವರೆಗೆ ಯೋಗಾಯೋಗದೇವೇಗೌಡರ ಮನೆಯಿಂದ ದೆಹಲಿ ಲೋದಿ ಗಾರ್ಡನ್ ವರೆಗೆ ಯೋಗಾಯೋಗ

'ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಮಾಜವನ್ನು ಒಡೆಯುತ್ತಿದ್ದಾರೆ. ಇದನ್ನು ಯೋಗದಿಂದ ಪರಿಹರಿಸುವುದಕ್ಕೆ ಸಾಧ್ಯವಿಲ್ಲ. ಯೋಗ ನಿಮ್ಮ ದೇಹವನ್ನು ಆರೋಗ್ಯಕರವಾಗಿ ಇಡಬಹುದು. ಆದರೆ ಸಮಾಜವನ್ನಲ್ಲ. ಈ ದೇಶದ ಆರ್ಥಿಕತೆ ಪರಿಸ್ಥಿತಿಯನ್ನು ಸುಧಾರಿಸಲೂ ಅದಕ್ಕೆ ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ವಕ್ತಾರ ಪ್ರಮೋದ್ ತಿವಾರಿ ಹೇಳಿದ್ದಾರೆ.

"ಯಾವುದನ್ನೂ ತೋರ್ಗಾಣಿಕೆಗೆ ಮಾಡಬಾರದು ಯೋಗ ಒಂದು ವೈಯಕ್ತಿಕ ಸಂಗತಿ, ಅದನ್ನು ಆಚರಿಸುವವರೂ ವೈಯಕ್ತಿಕವಾಗಿ ಆಚರಿಸಬೇಕು. ತೋರಾಗ್ಣಿಕೆಗೆ ಮಾಡಬಾರದು. ಇದೇ ಯೋಗದ ಮೊದಲ ತತ್ವ. ಆದರೆ ಅದನ್ನು ಮೋದಿ ಪಾಲಿಸುತ್ತಿದ್ದಾರೆಯೇ?" ಎಂದು ತಿವಾರಿ ಪ್ರಶ್ನಿಸಿದ್ದಾರೆ.

English summary
Congress party accused that, 'Prime Minister Narendra Modi is promoting Yoga for his political gains, his intention is not right'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X