ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯ 10ಲಕ್ಷದ ಸೂಟ್ ಹರಾಜು: ದಾಖಲೆ ಮೊತ್ತದತ್ತ ಬಿಡ್

|
Google Oneindia Kannada News

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ಧರಿಸಿದ್ದ ಸೂಟ್ ದೇಶದೆಲ್ಲಡೆ ವ್ಯಾಪಕ ಚರ್ಚೆಗೊಳಗಾಗಿತ್ತು. ಚಾನ್ಸ್ ಸಿಕ್ಕಿದ್ದೇ ಸಾಕೆಂದು ವಿರೋಧ ಪಕ್ಷಗಳು ಮೋದಿ ವಿರುದ್ದ ಹರಿಹಾಯ್ದಿದ್ದೇ ಹಾಯ್ದಿದ್ದು.

ಸ್ವದೇಶಿ ಮಂತ್ರ ಪಠಿಸುವ ಮೋದಿ, ಬ್ರಿಟನ್ ನಿಂದ ಸೂಟ್ ಆಮದು ಮಾಡಿಕೊಂಡಿದ್ದಾರೆ. ಇವರದ್ದು ಢೋಂಗಿ ರಾಜಕೀಯ ಎಂದು ಕಾಂಗ್ರೆಸ್ ಯುವರಾಜರೂ ಲೇವಡಿ ನೀಡಿದ್ದರು. ಕಳೆದ ದೆಹಲಿ ಚುನಾವಣೆಯಲ್ಲೂ ಈ ವಿಷಯವನ್ನು ಆಮ್ ಆದ್ಮಿ ಮತ್ತು ಕಾಂಗ್ರೆಸ್ ವ್ಯವಸ್ಥಿತವಾಗಿ ಬಳಸಿಕೊಂಡಿತ್ತು ಕೂಡಾ.

ಈಗ ಈ ಎಲ್ಲಾ ಟೀಕೆಗೆ ನರೇಂದ್ರ ಮೋದಿ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಹತ್ತು ಲಕ್ಷ ಎನ್ನಲಾಗುತ್ತಿರುವ ಅಂದಾಜು ಮೌಲ್ಯದ ಈ ಸೂಟನ್ನು ಹರಾಜು ಹಾಕಲು ಮೋದಿ ನಿರ್ಧರಿಸಿದ್ದಾರೆ.

ಗುಜರಾತಿನ ಸೂರತ್ ನಲ್ಲಿ ಬುಧವಾರ (ಫೆ 18) ಆರಂಭವಾದ ಬಿಡ್ ಪ್ರಕ್ರಿಯೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ನಿಮ್ಮ ರಕ್ಷಣೆಗೆ ನಾವಿದ್ದೇವೆ:ಮೋದಿ ಅಭಯ)

ಇದರಿಂದ ಬಂದ ಹಣವನ್ನು ಗಂಗಾ ಶುದ್ದೀಕರಣ ಯೋಜನೆಗೆ ಸದ್ವಿನಿಯೋಗ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಏಳು ರಾಜ್ಯಗಳಿಗೆ ಜೀವನಾಡಿಯಾಗಿರುವ ಗಂಗಾನದಿ ಶುದ್ದೀಕರಣದ ಮಹತ್ವಾಕಾಂಕ್ಷೆ ಯೋಜನೆಯನ್ನು ಕೇಂದ್ರದ ಬಿಜೆಪಿ ಸರಕಾರ ಈಗಾಗಲೇ ಕೈಗೆತ್ತಿಕೊಂಡಿದೆ.

ನರೇಂದ್ರ ದಾಮೋದರ ಮೋದಿ ಎಂದು ಚಿನ್ನದ ದಾರದಿಂದ ಪೋಣಿಸಿದ್ದ ಈ ಸೂಟನ್ನು ಪ್ರಧಾನಿ ಮೋದಿ, ಅಮೆರಿಕಾದ ಅಧ್ಯಕ್ಷ ಒಬಾಮಾ ಜೊತೆ ಜನವರಿ 26ರಂದು ಧರಿಸಿದ್ದರು. ಈ ಸೂಟನ್ನು ಖರೀದಿಸಲು ಉದ್ಯಮಿಯೊಬ್ಬರು ಸೂರತ್ ನಲ್ಲಿ ದಾಖಲೆ ಮೊತ್ತಕ್ಕೆ ಬಿಡ್ ಸಲ್ಲಿಸಿದ್ದಾರೆ.

ಇದುವರೆಗೆ ಬಂದ ಬಿಡ್ ಮೊತ್ತವೆಷ್ಟು, ಖರೀದಿಸಲು ಮುಂದಾದ ಉದ್ಯಮಿಯಾರು? ಮುಂದೆ ಓದಿ

ಉಡುಗೊರೆಯಾಗಿ ಬಂದಿದ್ದ ಸೂಟ್

ಉಡುಗೊರೆಯಾಗಿ ಬಂದಿದ್ದ ಸೂಟ್

ಗುಜರಾತ್ ಮೂಲದ ಅನಿವಾಸಿ ಭಾರತೀಯ ಉದ್ಯಮಿ ರಮೇಶ್ ಕುಮಾರ್ ಭೀಕಾಭಾಯ್ ವಿರಾನಿ ಎನ್ನುವವರು ಈ ಸೂಟನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದರು. ವೈಬ್ರೆಂಟ್ ಗುಜರಾಜ್ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮೋದಿಯವರಿಗೆ ಈ ಸೂಟ್ ಉಡುಗೊರೆಯಾಗಿ ನೀಡಿದ್ದೆ. ಸೂಟನ್ನು ಉಡುಗೊರೆಯಾಗಿ ನೀಡಿ ಮಗನ ಮದುವೆಗೆ ಬರುವಂತೆ ಆಹ್ವಾನಿಸಿದ್ದೆ. ಮಾಧ್ಯಮದಲ್ಲಿ ಬರುವಂತೆ ಇದರ ಬೆಲೆ ಅಷ್ಟೇನೂ ಇಲ್ಲ, ಅಷ್ಟು ಮೊತ್ತ ಖರ್ಚು ಮಾಡಲು ನನ್ನ ಮಗನಿಗೂ ಧೈರ್ಯವಿಲ್ಲ ಎಂದು ಉದ್ಯಮಿ ವಿರಾನಿ ಈ ಸೂಟ್ ವಿವಾದಕ್ಕೊಳಗಾಗಿದ್ದ ವೇಳೆ ಸ್ಪಷ್ಟನೆ ನೀಡಿದ್ದರು.

ದಾಖಲೆ ಮೊತ್ತಕ್ಕೆ ಬಿಡ್ ಓಪನಿಂಗ್

ದಾಖಲೆ ಮೊತ್ತಕ್ಕೆ ಬಿಡ್ ಓಪನಿಂಗ್

ಮೋದಿ ಧರಿಸಿದ್ದ ಈ ಸೂಟನ್ನು ಸೂರತ್ ನಲ್ಲಿ ಹರಾಜು ಹಾಕಲಾಗುತ್ತಿದೆ. 51 ಲಕ್ಷ ರೂಪಾಯಿಯೊಂದಿಗೆ ಈ ಸೂಟಿಗೆ ಬಿಡ್ ಆರಂಭವಾಗಿದೆ. ಗುಜರಾತ್ ಉದ್ಯಮಿ ರಾಜುಭಾಯ್ ಅಗರ್ವಾಲ್ ಈ ಮೊತ್ತವನ್ನು ಬಿಡ್ ಮಾಡಿದ್ದಾರೆ. ಈ ಸೂಟ್ ಜೊತೆಗೆ ಮೋದಿಗೆ ಬಂದಿರುವ 450 ವಿವಿಧ ಉಡುಗೊರೆಗಳನ್ನೂ ಹರಾಜು ಹಾಕಲಾಗುತ್ತಿದೆ.

1.21 ಕೋಟಿಗೆ ನಿಂತಿರುವ ಬಿಡ್ ಮೊತ್ತ

1.21 ಕೋಟಿಗೆ ನಿಂತಿರುವ ಬಿಡ್ ಮೊತ್ತ

51 ಲಕ್ಷ ರೂಪಾಯಿಯೊಂದಿಗೆ ಆರಂಭವಾಗಿರುವ ಬಿಡ್, ಸದ್ಯ 1.21 ಕೋಟಿಗೆ ಬಂದು ನಿಂತಿದೆ. ಉದ್ಯಮಿ ಸುರೇಶ್ ಅಗರವಾಲ್ ಎನ್ನುವವರು ಒಂದು ಕೋಟಿಗೆ ಬಿಡ್ ಸಲ್ಲಿಸಿದ್ದರು. ಇದನ್ನು ಮೀರಿ ರಾಜೇಶ್ ಜುನೆಜಾ ಎನ್ನುವ ಮತ್ತೊಬ್ಬ ಉದ್ಯಮಿ 1.21 ಕೋಟಿಗೆ ಬಿಡ್ ಸಲ್ಲಿಸಿದ್ದಾರೆ. ಇದೇ ಶುಕ್ರವಾರದವರೆಗೆ (ಫೆ 20) ಈ ಸೂಟಿಗೆ ಬಿಡ್ ಸಲ್ಲಿಸಬಹುದಾಗಿದೆ. ಇದು ಇನ್ನೂ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆ ಇಲ್ಲದಿಲ್ಲ.

ಉಳಿದ ಉಡುಗೊರೆಯೂ ಹರಾಜಿನಲ್ಲಿ

ಉಳಿದ ಉಡುಗೊರೆಯೂ ಹರಾಜಿನಲ್ಲಿ

ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡ ಸಮಯದಲ್ಲಿ ಮತ್ತು ಇತರ ವಿದೇಶಿ ಅತಿಥಿಗಳು ದೆಹಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ್ದ ಸುಮಾರು 450 ವಿವಿಧ ಉಡುಗೊರೆಗಳನ್ನೂ ಹರಾಜಿಗೆ ಹಾಕಲಾಗುತ್ತಿದೆ. ಈ ಬಿಡ್ ಪ್ರಕ್ರಿಯೆ ಶುಕ್ರವಾರ ಮುಕ್ತಾಯಗೊಳ್ಳಲಿದೆ.

ಗಂಗಾ ನದಿ ಯೋಜನೆಗೆ

ಗಂಗಾ ನದಿ ಯೋಜನೆಗೆ

ಈ ಹರಾಜಿನ ಮೂಲಕ ಬರುವ ಹಣವನ್ನು 'ನಮಾಮಿ ಗಂಗೆ ಟ್ರಸ್ಟ್' ಮೂಲಕ ಗಂಗಾನದಿ ಶುದ್ದೀಕರಣಕ್ಕೆ ದೇಣಿಗೆ ರೂಪದಲ್ಲಿ ನೀಡಲು ಪ್ರಧಾನಮಂತ್ರಿ ಕಾರ್ಯಾಲಯ ನಿರ್ಧರಿಸಿದೆ.

English summary
Surat businessman Rajesh Juneja bids Rs 1.21 crore for Prime Minister Narendra Modi's pinstripe suit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X