ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಯಕ ಯೋಗಿ' ಅಣ್ಣ ಬಸವಣ್ಣನ ನೆನೆದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಮೇ 07: ಬಸವ ಜಯಂತಿಯ ಶುಭ ಸಂದರ್ಭದಲ್ಲಿ ಕಾಯಕ ಯೋಗಿ, ಸಾಮಾಜಿಕ ಕ್ರಾಂತಿ ಹರಿಕಾರ, 12ನೇ ಶತಮಾನದ ಚಿಂತಕ ಅಣ್ಣ ಬಸವಣ್ಣ ಅವರನ್ನು ಪ್ರಧಾನಿ ಮೋದಿ ಅವರು ಇಂದು ಸ್ಮರಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭವಾಗಿದ್ದರಿಂದ ಪ್ರಧಾನಿ ಸಚಿವಾಲಯದ ಬದಲಿಗೆ ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆ ಬಳಸಿ ಟ್ವೀಟ್ ಮಾಡಿದ್ದಾರೆ.

ಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿ ಬಸವ ಜಯಂತಿ 'ಆಚರಣೆ' ಗಿಂತ ವಿಚಾರ ಮೆರವಣಿಗೆಯಾಗಲಿ

ಭಗವಾನ್ ಬಸವೇಶ್ವರರ ಜಯಂತಿ ದಿನದಂದು ಅವರ ಕಾಯಕವನ್ನು ಸ್ಮರಿಸಬೇಕಿದೆ. ಎಲ್ಲರಲ್ಲೂ ಸಮಾನತೆ, ಸಹಬಾಳ್ವೆ, ಸಾಮಾಜಿಕ ನ್ಯಾಯ ದೊರಕಿಸಲು ಕ್ರಾಂತಿ ಮಾಡಿದ ಚಿಂತರಾಗಿದ್ದರು. ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ ಬಡವ, ಶ್ರಮಿಕ ವರ್ಗಕ್ಕೆ ನೆರವಾಗುವುದರ ಬಗ್ಗೆ ಒತ್ತು ನೀಡಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

PM Modi pays homage to Poet-Philosopher Basaveshwara

ಬಸವ ಜಯಂತಿಯ ಆಚರಣೆ ಮಾಡುವುದು ಎಂದರೆ ಕೇವಲ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಮಾಡುವುದಲ್ಲ, ಅವರ ವಿಚಾರಗಳ ಮೆರವಣಿಗೆ ಆಗಬೇಕು ಆ ವಿಚಾರಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಬಸವಜಯಂತಿಗೆ ಅರ್ಥ ಬರುವುದು ಎಂದು ಬಸವ ಅನುಯಾಯಿಗಳು ಹೇಳಿದ್ದಾರೆ.

ಕ್ರಾಂತಿಯೋಗಿ ಅಣ್ಣ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ? ಕ್ರಾಂತಿಯೋಗಿ ಅಣ್ಣ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ?

ಕೆಲ ವರ್ಷಗಳ ಹಿಂದೆ ಭಾರತದ 23 ಭಾಷೆಗಳಲ್ಲಿ ಹೊರ ತಂದಿರುವ ವಚನ ಸಂಪುಟವನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬಸವಣ್ಣನವರ ವಚನಗಳೂ ಸೇರಿದಂತೆ ಹಲವರ ವಚನಗಳಿದ್ದ ಈ ಸಂಪುಟವನ್ನು ಲೋಕಾರ್ಪಣೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮೊದಲ ಬಾರಿಗೆ ಬಸವಣ್ಣನವರ ಜಯಂತಿಯನ್ನು ಆಚರಣೆಗೆ ಚಾಲನೆ ನೀಡಲಾಗಿತ್ತು. ಡಿಜಿಟಲ್ ರೂಪದಲ್ಲಿ ವಚನ ಸಂಗ್ರಹ ಎಲ್ಲರಿಗೂ ಸಿಗುವಂತಾಗಿತ್ತು.

English summary
PM Narendra Modi on Tuesday paid homage to 12th century 'iconic thinker', poet-philosopher Basaveshwara on his birth anniversary today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X