ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಪ್ರಿಯ ರಾಜಕಾರಣಿಗಳ ಪೈಕಿ ಟ್ರಂಪ್ ಹಿಂದಿಕ್ಕಿದ ಮೋದಿ

|
Google Oneindia Kannada News

ನವದೆಹಲಿ, ಮೇ 08:ಲೋಕಸಭೆ ಚುನಾವಣೆ ವೇಳೆಯಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳತೊಡಗಿರುವ ಪ್ರಧಾನಿ ಮೋದಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ವಿಶ್ವ ನಾಯಕರ ಪೈಕಿ ಅಗ್ರಸ್ಥಾನಕ್ಕೇರಿದ್ದರು. ಈಗ ಎಲ್ಲಾ ಸಾಮಾಜಿಕ ಜಾಲತಾಣಗಳ ಜನಪ್ರಿಯ ಮುಖಂಡರ ಪೈಕಿ ನಂ.1 ಎನಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಾಮಾಜಿಕ ಜಾಲ ತಾಣ ವೇದಿಕೆಗಳಲ್ಲಿ ಮೋದಿ ಅವರಿಗೆ 110,912,648 ಮಿಲಿಯನ್ ಹಿಂಬಾಲಕರಿದ್ದಾರೆ ಎಂದು ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆ ಸೆಮ್ರಶ್(SEMrush) ವರದಿ ಮಾಡಿದೆ.

ಫೇಸ್ ಬುಕ್ ನಲ್ಲಿ ಡೋನಲ್ಡ್ ಟ್ರಂಪ್ ಹಿಂದಿಕ್ಕಿ ಮೋದಿ ನಂ.1 ಫೇಸ್ ಬುಕ್ ನಲ್ಲಿ ಡೋನಲ್ಡ್ ಟ್ರಂಪ್ ಹಿಂದಿಕ್ಕಿ ಮೋದಿ ನಂ.1

ಮೋದಿ ಅವರಿಗೆ ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟ್ರಾಗ್ರಾಮ್ 110.9 ಮಿಲಿಯನ್ ಹಿಂಬಾಲಕರಿದ್ದಾರೆ. ಈ ಮೂಲಕ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿದ್ದಾರೆ. ಟ್ರಂಪ್ 96 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಒಬಾಮಾ ಅವರಿಗೆ 182.7 ಮಿಲಿಯನ್ ಹೊಂದಿದ್ದಾರೆ.

PM Modi overtakes Trump, becomes second most followed politician globally

ಮೋದಿ ಅವರು ಫೇಸ್ ಬುಕ್ ನಲ್ಲಿ 43 ಮಿಲಿಯನ, ಟ್ವಿಟ್ಟರಲ್ಲಿ 47 ಮಿಲಿಯನ್ ಹಾಗೂ ಇನ್ಸ್ ಸ್ಟಾಗ್ರಾಮ್ ನಲ್ಲಿ 20 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ ಎಂದು ವರದಿ ಬಂದಿದೆ. ಆದರೆ, ಇವರೆಲ್ಲರೂ ಯೂನಿಕ್ ವಿಸಿಟರ್ಸ್ ಎಂದು ಹೇಳಲಾಗದು. ಒಮ್ಮೆ ಭೇಟೆ ಕೊಟ್ಟವರೇ ಮತ್ತೆ ಮತ್ತೆ ಭೇಟಿ ಕೊಡುವವರೇ ಅಧಿಕ ಎಂದು ತಿಳಿದು ಬಂದಿದೆ. ರಾಹುಲ್ ಗಾಂಧಿ ಅವರು 12 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಬಾರ್ಸನ್ ಕಾನ್ ವೊಲ್ಫ್ (BCW) ಸಂಸ್ಥೆಯ ಟ್ವಿಪ್ಲೋಮೆಸಿ ಅಧ್ಯಯನ ವರದಿಯಂತೆ 'ಫೇಸ್​ಬುಕ್​ನಲ್ಲಿ 2019ರ ಜಾಗತಿಕ ನಾಯಕರು' ಎಂಬ ಸಮೀಕ್ಷೆಯಲ್ಲಿ ಮೋದಿ ಅಗ್ರಸ್ಥಾನದಲ್ಲಿದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಸ್ಥಾನದಲ್ಲಿದ್ದಾರೆ.

English summary
Prime Minister Narendra Modi has become the second most-followed politician in the world with a social media audience of 110,912,648 million on social media platforms, a study by online visibility management and content marketing SaaS platform SEMrush said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X