ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ನಲ್ಲಿ ಟ್ರಂಪ್ ಹಿಂದಿಕ್ಕಿದ ಪ್ರಧಾನಿ ಮೋದಿ

By Mahesh
|
Google Oneindia Kannada News

ಬೆಂಗಳೂರು, ಮೇ 02: ಜನಪ್ರಿಯ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವನಾಯಕರ ಪೈಕಿ ಯುಎಸ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಕ್ಕಿದ್ದಾರೆ.

ಟ್ವಿಟ್ಟರ್ ನಲ್ಲಿ ಎಲ್ಲರಿಗಿಂತ ಮುಂದಿರುವ ಯುಎಸ್ ಅಧ್ಯಕ್ಷ ಡೋನಾಲ್ಡ್ ಅವರು ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿಗಿಂತ ಹಿಂದಿದ್ದಾರೆ.

ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವ ನಾಯಕರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ ಎಂದು ವರದಿಯೊಂದು ಹೇಳಿದೆ.

PM Modi Most Followed Leader On Facebook, Far Ahead Of Trump

ಪ್ರಧಾನಿ ಮೋದಿಯವರಿಗೆ ಫೇಸ್ ಬುಕ್ ನಲ್ಲಿ ಸರಿ ಸುಮಾರು 42.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಫೇಸ್ ಬುಕ್ ನಲ್ಲಿ 24.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಏಷ್ಯಾದಲ್ಲಿ ಟ್ವಿಟ್ಟರ್ ಗಿಂತ ಹೆಚ್ಚು ಫೇಸ್ ಬುಕ್ ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣವಾಗಿದ್ದು, ಮೋದಿ ಅವರ ಹಿಂಬಾಲಕರು ಹೆಚ್ಚಾಗಲು ಕಾರಣ ಎನ್ನಲಾಗಿದೆ. ಟ್ವಿಟ್ಟರ್ ನಲ್ಲಿ ಡೋನಾಲ್ಡ್ ಡ್ರಂಪ್ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕರಾಗಿದ್ದಾರೆ.

ಫೇಸ್ ಬುಕ್ ನಲ್ಲಿ ಟ್ರಂಪ್ ಅವರ ಪೋಸ್ಟ್ ಗಳಿಗೆ ಕಳೆದ ತಿಂಗಳಿನಿಂದ 204.9 ಮಿಲಿಯನ್ ಕಾಮೆಂಟ್ಸ್ ಬಂದಿವೆ. ಮೋದಿ ಅವರ ಪೋಸ್ಟ್ ಗಳಿಗೆ 113.6 ಮಿಲಿಯನ್ ಕಾಮೆಂಟ್ಸ್ ಬಂದಿವೆ.

English summary
US President Donald Trump may rule the roost on Twitter, but he lags far behind Prime Minister Narendra Modi on Facebook, according to a study published Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X