ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!

|
Google Oneindia Kannada News

ನವದೆಹಲಿ, ಫೆಬ್ರವರಿ 23: ಒಂದು ವಾರಗಳ ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಫೆ.23) ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು. ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ನಡೆಯುವ ಸಭೆಯಲ್ಲಿ ಉಭಯ ನಾಯಕರೂ ಮಾತುಕತೆ ನಡೆಸಲಿದ್ದಾರೆ.

ಆಹಾ... ಎಷ್ಟು ಚೆಂದ! ಈ ಕುಟುಂಬಕ್ಕೆ ದೃಷ್ಟಿಯಾದೀತು ಜೋಕೆ..!ಆಹಾ... ಎಷ್ಟು ಚೆಂದ! ಈ ಕುಟುಂಬಕ್ಕೆ ದೃಷ್ಟಿಯಾದೀತು ಜೋಕೆ..!

ಕೆನಡಾದಲ್ಲಿ ಪ್ರತ್ಯೇಕ ಖಾಲಿಸ್ತಾನ್ ರಾಜ್ಯ ನಿರ್ಮಾಣಕ್ಕೆ ಭಾರತ ಬೆಂಬಲ ನೀಡುತ್ತಿರುವುದರಿಂದ ಪ್ರಧಾನಿ ಮೋದಿಯವರು, ಟ್ರುಡೋ ಅವರನ್ನು ಭೇಟಿ ಮಾಡಿಲ್ಲ ಎಂದು ಮಾಧ್ಯಮಗಳು ಗುಲ್ಲೆಬ್ಬಿಸಿದ್ದವು. ಆದರೆ ಭಾರತ ಭೇಟಿಯ ಆರನೇ ದಿನದಂದು ಮೋದಿಯವರು ಟ್ರುಡೋ ಅವರನ್ನು ಆಲಂಗಿಸಿ, ಉಭಯಕುಶಲೋಪರಿ ವಿಚಾರಿಸುತ್ತಿದ್ದ ದೃಶ್ಯ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಇದಕ್ಕೂ ಮುನ್ನ ಟ್ರುಡೋ ಮತ್ತವರ ಕುಟುಂಬವನ್ನು ಇಂದು ಭೇಟಿ ಮಾಡುತ್ತಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂದಿದ್ದ ಮೋದಿ, ಟ್ರುಡೋ ಅವರ ಮಕ್ಕಳನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದರು. 2015 ರಲ್ಲಿ ಕೆನಡಾ ಪ್ರವಾಸದಲ್ಲಿದ್ದ ಮೋದಿ ಟ್ರುಡೋ ಅವರ ಮಗಳ ಕಿವಿ ಹಿಂಡುತ್ತಿರುವ ಫೋಟೋವನ್ನೂ ಟ್ವಿಟ್ಟರ್ ಮೂಲಕ ನೆನಪಿಸಿದ್ದರು.

ಇದೀಗ ಇಬ್ಬರು ನಾಯಕರೂ ಭೇಟಿಯಾಗಿದ್ದು, ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

English summary
Prime Minister Narendra Modi meets Canadian Prime Minister Justin Trudeau at Delhi's Hyderabad House, to hold delegation level talks later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X