ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ನಾರಿಶಕ್ತಿ, ವಿಜ್ಞಾನ ಶಕ್ತಿ, ಸಹಕಾರದ ಬಗ್ಗೆ ಮೋದಿ ಮನದ ಮಾತು

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 25: ಪ್ರಧಾನಿ ನರೇಂದ್ರ ಮೊದಿ ಅವರು ತಮ್ಮ ತಿಂಗಳ ಮನದ ಮಾತು ಕಾರ್ಯಕ್ರಮದಲ್ಲಿ ನಾರಿಶಕ್ತಿ, ವಿಜ್ಞಾನ ಶಕ್ತಿ, ಆಪತ್ತಿನಲ್ಲಿ ನೆರವಾಗುವ ಸಹಕಾರ ಶಕ್ತಿ ಬಗ್ಗೆ ಮಾತನಾಡಿದರು. ಅಪ್ಡೇಟ್ಸ್ ಇಲ್ಲಿದೆ.

ಇದು ಮೋದಿ ಅವರು 41ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮವಾಗಿದೆ. ಏಕಕಾಲಕ್ಕೆ ಆಕಾಶವಾಣಿ, ದೂರದರ್ಶನ ಹಾಗೂ ನರೇಂದ್ರ ಮೋದಿ ಅವರ ಮೊಬೈಲ್ ಅಪ್ ನಲ್ಲಿ ಪ್ರಸಾರವಾಗಿದೆ.

PM Modi Mann Ki Baat Updates

Newest FirstOldest First
11:46 AM, 25 Feb

ರಾಯ್ ಪುರದಲ್ಲಿನ ಕಛ್ರಾ ಹಬ್ಬದ ಮೂಲಕ ಸ್ವಚ್ಛತೆಗಾಗಿ ನಾರಿಯರು ಶ್ರಮಿಸಿದ್ದು, ಸಾರ್ಥಕವಾಗಿದೆ.
11:46 AM, 25 Feb

ಬಜೆಟ್ ನಲ್ಲಿ ಗೋವರ್ಧನ ಯೋಜನೆ ಘೋಷಿಸಲಾಗಿದೆ. ಈ ಮೂಲಕ ಸಾವಯವ ಗೊಬ್ಬರ, ಗೋಮೂತ್ರ ಬಳಕೆಗೆ ಒತ್ತು ನೀಡಲಾಗಿದೆ. ಇದು ಗ್ರಾಮೀಣ ಭಾರತ ನೈರ್ಮಲೀಕರಣ, ಆದಾಯ ಹೆಚ್ಚಿಸಲು ಕಾರಣವಾಗಲಿದೆ
11:45 AM, 25 Feb

ದೇಶದಲ್ಲಿ ನಡೆಯುವ ಅನೇಕ ಅಪಘಾತಗಳು ಪ್ರಜ್ಞೆ ಇರದ ಕಾರಣ ಸಂಭವಿಸುತ್ತಿದೆ. ಇಂಥ ಸಂದರ್ಭದಲ್ಲಿ ನೆರವಾಗುವ ಸಹಕಾರ ನೀಡುವ ಅನಾಮಿಕ ವ್ಯಕ್ತಿಗಳಿಗೆ ನನ್ನ ನಮನ.
11:45 AM, 25 Feb

ಆರ್ಟಿಫಿಷಲ್ ಇಂಟೆಲೆಜನ್ಸ್ ಬಳಸಿ ಮಾನವರ ಕಲ್ಯಾಣ ಸಾಧ್ಯವಿದೆ. ದೇಶದಲ್ಲಿ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅನೇಕ ವಿಜ್ಞಾನಿಗಳ ಕೊಡುಗೆ ಇದೆ.
11:45 AM, 25 Feb

ಬೌಧಾಯನ, ಭಾಸ್ಕರಾಚಾರ್ಯ ಹಾಗೂ ಆರ್ಯಭಟರಂಥ ಗಣಿತಜ್ಞರು, ಸುಶ್ರುತ, ಚರಕರಂಥ ವೈದ್ಯರತ್ನಗಳು ಭಾರತದ ನೆಲದಲ್ಲಿ ಜನ್ಮಿಸಿದರು.
11:45 AM, 25 Feb

ಸರ್ ಜಗದೀಶ್ ಚಂದ್ರ ಬೋಸ್, ಹರಗೋವಿಂದ್ ಖುರಾನಾರಿಂದ ಸತ್ಯೇಂದ್ರ ನಾಥ್ ಬೋಸ್ ತನಕ ದಿಗ್ಗಜ ವಿಜ್ಞಾನಿಗಳು, ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದರು.

41ನೇ ಆವೃತ್ತಿಯ ಮನ್ ಕೀ ಬಾತ್

41ನೇ ಆವೃತ್ತಿಯ ಮನ್ ಕೀ ಬಾತ್

ಮಾರ್ಚ್ 02ರಂದು ರಂಗಿನ ಹಬ್ಬ ಹೋಳಿ ಆಚರಿಸಲಾಗುತ್ತದೆ. ಕೆಟ್ಟದ್ದನ್ನು ಸುಟ್ಟು ಒಳ್ಳೆಯ ಬಣ್ಣವನ್ನು ಬದುಕಿನಲ್ಲಿ ತುಂಬಿಕೊಳ್ಳುವ ಹಬ್ಬ ಇದಾಗಿದೆ. ದೇಶದ ಎಲ್ಲರಿಗೂ ಹೋಳಿ ಹಬ್ಬದ ಶುಭಹಾರೈಕೆ. ಮಹಾರಾಷ್ಟ್ರದ ಎಲಿಫೆಂಟಾದ ಗುಹೆಗಳಿಗೆ ಬೆಳಕು ಹರಿದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು

ವಿಪತ್ತಿನಲ್ಲಿ ನೆರವಾದರಿಗೆ ನಮನ

ಅಪಘಾತಗಳ ಸಂದರ್ಭದಲ್ಲಿ, ವಿಪತ್ತಿನಲ್ಲಿ ನೆರವಾಗುವ ಹೀರೋಗಳಿಗೆ ನನ್ನ ಅಭಿನಂದನೆಗಳು.ವಿಕೋಪದ ಸಂದರ್ಭಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅನೇಕ ಮಂದಿಗೆ ನಮನ ಎಂದರು.

ಮನ್ ಕೀ ಬಾತ್ ನ ಪ್ರಮುಖಾಂಶಗಳು

ಮನ್ ಕೀ ಬಾತ್ ನ ಪ್ರಮುಖಾಂಶಗಳನ್ನು ಬಿಜೆಪಿ ಖಾತೆಯಿಂದ ಟ್ವೀಟ್ ಮಾಡಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳು ಮಾನವ ಕಲ್ಯಾಣಕ್ಕಾಗಿ ಬಳಸಬೇಕು.

ಅರಬಿಂದೋ ಬಗ್ಗೆ ಮೋದಿ ಮಾತು

ನಾರಿಶಕ್ತಿ, ವಿಜ್ಞಾನ ಶಕ್ತಿ ಬಗ್ಗೆ ಮೋದಿ ಅವರು ತಮ್ಮ ಮನ್ ಕೀ ಬಾತ್ ನಲ್ಲಿ ಮಾತನಾಡಿದರು. ಜತೆ ಅರಬಿಂದೋ ಅವರನ್ನು ನೆನೆದರು.

ಮನ್ ಕೀ ಬಾತ್ ನ ಪ್ರಮುಖ ಅಂಶಗಳು

ಮನ್ ಕೀ ಬಾತ್ ನ ಪ್ರಮುಖ ಅಂಶಗಳು

English summary
Prime Minister Narendra Modi will addressed the nation in the monthly radio programme 'Mann Ki Baat', on Sunday(Feb 25). Catch all the updates here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X