• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಮೋದಿ: ಕೆಲವು ಚಿತ್ರಗಳು

|

ಬೆಂಗಳೂರು, ಫೆಬ್ರವರಿ 05 : ಮುಂದಿನ ವಿಧಾನ ಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ರಣಕಹಳೆ ಮೊಳಗಿಸಿದರು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಕನಸನ್ನು ನನಸಾಗಿಸುವುದಾಗಿ ಪಣತೊಟ್ಟರು. ಕರ್ನಾಟಕದಲ್ಲಿ 10 ಪರ್ಸೆಂಟ್ ಕಮಿಷನ್ ದಂದೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಲು ಬಿಜೆಪಿಗೆ ಅಧಿಕಾರ ನೀಡುವಂತೆ ಸೇರಿದ್ದ ಲಕ್ಷಾಂತರ ಕಾರ್ಯಕರ್ತರನ್ನು ಮನವಿ ಮಾಡಿದರು.

In Pics : ವಿಧಾನಸಭೆ ಚುನಾವಣೆಯ ಭರ್ಜರಿ ಸಿದ್ಧತೆಯಲ್ಲಿ ಬಿಜೆಪಿ

ಹಲವು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿಮುಖ್ಯಮಂತ್ರಿ ಎಸ್. ಎಂ,ಕೃಷ್ಣ ಮೋದಿ ಜತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಬಿಜೆಪಿಯ ಯಾತ್ರೆಯಲ್ಲಿ ಮುನ್ನೆಲೆಗೆ ಬಂದಿದ್ದು, ವಿಶೇಷವಾಗಿತ್ತು. ಮೋದಿಯವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಮೋದಿಯವರನ್ನು ಸ್ವಾಗತ ಕೋರುವುದು ಸೇರಿದಂತೆ ಬಿಜೆಪಿ ಯಾತ್ರೆ ಸಮಾರೋಪದ ಹಲವು ಚಿತ್ರಗಳು ಇಲ್ಲಿವೆ. ಇಷ್ಟೇ ಅಲ್ಲದೆ ದೇಶದಲ್ಲಿ ಭಾನುವಾರ ನಡೆದ ವಿಶೇಷ ಸುದ್ದಿಗಳ ಕೆಲವು ಚಿತ್ರಗಳೂ ಕೂಡ ನೀವು ನೋಡಬಹುದು.

ಪರಿವರ್ತನಾ ಯಾತ್ರೆ ಸಮಾರೋಪದ ಒಂದು ಚಿತ್ರಣ

ಪರಿವರ್ತನಾ ಯಾತ್ರೆ ಸಮಾರೋಪದ ಒಂದು ಚಿತ್ರಣ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಸಮಾರೋಪದ ಅಂತಿಮ ಘಟ್ಟದಲ್ಲಿ ಮೋದಿಯವರೊಂದಿಗೆ ಕೇಂದ್ರ ಸಚಿವ ಅನಂತ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾಣಿಸಿಕೊಂಡಿದ್ದು ಹೀಗೆ.

ಗೆಲುವಿನ ಚಿಹ್ನೆ ತೋರಿಸಿದ ಬಿಜೆಪಿ ಬೆಂಬಲಿಗರು

ಗೆಲುವಿನ ಚಿಹ್ನೆ ತೋರಿಸಿದ ಬಿಜೆಪಿ ಬೆಂಬಲಿಗರು

ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಮೋದಿ ಭಾಷಣದ ನಂತರ ವಿಕ್ಟರಿ ಚಿಹ್ನೆ ಹಾಗೂ ನರೇಂದ್ರ ಮೋದಿ ಭಾವಚಿತ್ರವನ್ನು ತೋರ್ಪಡಿಸಿ ಹರ್ಷ ವ್ಯಕ್ತಪಡಿಸುತ್ತಿರುವ ಬಿಜೆಪಿ ಬೆಂಬಲಿಗರು.

ಎಸ್.ಎಂ ಕೃಷ್ಣ ಮೋದಿಗೆ ಸ್ವಾಗತ ಕೋರುತ್ತಿರುವುದು

ಎಸ್.ಎಂ ಕೃಷ್ಣ ಮೋದಿಗೆ ಸ್ವಾಗತ ಕೋರುತ್ತಿರುವುದು

ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ವಾಗತಕೋರಿ ಬರಮಾಡಿಕೊಳ್ಳುತ್ತಿರುವ ದೃಶ್ಯ

ಇಟಲಿಯ ಫ್ಲಾವಿಯಾ ವರಿಸಿದ ತಮಿಳುನಾಡಿನ ಸುಬ್ರಹ್ಮಣಿ

ಇಟಲಿಯ ಫ್ಲಾವಿಯಾ ವರಿಸಿದ ತಮಿಳುನಾಡಿನ ಸುಬ್ರಹ್ಮಣಿ

ತಮಿಳುನಾಡಿನ ಸುಬ್ರಹ್ಮಣಿ ಎನ್ನುವವರು ಇಟಲಿಯ ವಧು ಫ್ಲಾವಿಯಾ ಅವರನ್ನು ಕನ್ಯಾಕುಮಾರಿಯ ನಾಗರ್ ಕೋಯಿಲ್ ನಲ್ಲಿ ಭಾನುವಾರ ಮದುವೆಯಾದರು.

ಮೊಘಲ್ ಗಾರ್ಡನ್ ಸಾರ್ವಜನಿಕರಿಗೆ ಮುಕ್ತ

ಮೊಘಲ್ ಗಾರ್ಡನ್ ಸಾರ್ವಜನಿಕರಿಗೆ ಮುಕ್ತ

ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಕಾಮಗಾರಿ ಈಗಾಗಲೇ ಮುಗಿದಿದ್ದು, ಮುಂದಿನ ವಾರದಲ್ಲಿ ಸಾರ್ವಜನಿಕರಿಗೆ ಪ್ರವೇಶಯಕ್ಕೆ ಯೋಗ್ಯವಾಗಲಿದೆ. ಮೊಘಲ್ ಗಾರ್ಡ್ ನ್ ಅಲ್ಲಿರುವ ಕಾರಂಜಿಯ ಮುಂದೆ ಪ್ರವಾಸಿಗರು ಫೋಟೊ ತೆಗೆಸಿಕೊಳ್ಳುತ್ತಿರುವುದು.

ನಟಿ ಪೂಜಾ ಹೆಗಡೆ ರಾಂಪ್ ವಾಕ್

ನಟಿ ಪೂಜಾ ಹೆಗಡೆ ರಾಂಪ್ ವಾಕ್

ಮುಂಬೈನಲ್ಲಿ ಭಾನುವಾರ ನಡೆದ ಲ್ಯಾಕ್ಮಿ ಫ್ಯಾನ್ ವೀಕ್ 2018 ರಲ್ಲಿ ಡಿಸೈನರ್ ರಿಧಿ ಮೆಹರಾ ತಯಾರಿಸಿದ ಡಿಸೈನರ್ ಉಡುಗೆ ತೊಟ್ಟು ಹೆಜ್ಜೆ ಹಾಕಿದ ನಟಿ ಪೂಜಾ ಹೆಗಡೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime minister Narendra modi has been launched election campaign for the upcoming Karnataka Assembly elections. Pm modi accused congress government has corrupt and Anarchy in the state eradication the present government. BJP achieved dream of congress mukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more