ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಥಮ 14 ಪಥಗಳ ಹೆದ್ದಾರಿ ಮೊದಲ ಹಂತ ಲೋಕಾರ್ಪಣೆ

By Mahesh
|
Google Oneindia Kannada News

ನವದೆಹಲಿ, ಮೇ 27: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಥಮ 14 ಪಥಗಳ ಹೆದ್ದಾರಿಯ ಮೊದಲ ಹಂತವನ್ನು ಇಂದು ಲೋಕಾರ್ಪಣೆ ಮಾಡಿದರು.

ಸುಮಾರು 135 ಕಿಲೋ ಮೀಟರ್ ದೂರದ ದೆಹಲಿ-ಮೀರತ್‌ ಎಕ್ಸ್‌ಪ್ರೆಸ್‌ ಹೈವೇಯ ಮೊದಲ ಹಂತವನ್ನು ಭಾಗ್ ಪಥ್ ನಲ್ಲಿ ಉದ್ಘಾಟಿಸಿದ ನಂತರ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ ಪ್ರಯಾಣಿಸಿದ್ದು ವಿಶೇಷವಾಗಿತ್ತು.

ದೆಹಲಿ ಮತ್ತು ಮೀರತ್‌ ನಡುವಿನ 82 ಕಿ.ಮೀ. ಉದ್ದದ ಹೆದ್ದಾರಿ ಯೋಜನೆ ಇದಾಗಿದೆ. ಮೊದಲ 27.74 ಕಿ.ಮೀ. 14 ಪಥಗಳ ಹೆದ್ದಾರಿಯಾಗಿದ್ದು, ಉಳಿದಿದ್ದು 6 ಲೈನ್‌ಗಳನ್ನು ಒಳಗೊಂಡಿದೆ. ಒಟ್ಟು 4,975.17 ಕೋಟಿ ರೂಪಾಯಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೈವೇ ಸಿದ್ಧವಾಗುತ್ತಿದೆ.

Modi inaugurates Eastern Peripheral Expressway

11 ಫ್ಲೈಓವರ್‌‌ಗಳು, 5 ದೊಡ್ಡ ಬಿಡ್ಜ್‌ಗಳು, 24 ಸಣ್ಣ ಬಿಡ್ಜ್‌ಗಳು, 3 ರೈಲ್ವೆ ಬಿಡ್ಜ್‌ಗಳು ಮತ್ತು ಹಲವು ಅಂಡರ್‌ಪಾಸ್‌ಗಳನ್ನು ದೆಹಲಿ-ಮೀರತ್‌ ಎಕ್ಸ್‌ಪ್ರೆಸ್‌ ಹೈವೇ ಒಳಗೊಂಡಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಮೊದಲಿಗೆ 30 ತಿಂಗಳ ಯೋಜನೆಗೆ ಇದಾಗಿತ್ತು. ಆದರೆ, ಈಗ 30 ತಿಂಗಳ ಬದಲಿಗೆ 17 ತಿಂಗಳ ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ಮುಗಿಸುವ ಸಾಧ್ಯತೆಯಿದೆ. ಮೊದಲ ಹಂತದ ಕಾಮಗಾರಿ 910 ದಿನಗಳ ಬದಲಿಗೆ 500ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

14 ಪಥಗಳ ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿ -ಮೀರತ್ ನಡುವಿನ 6ಲೇನ್ ಎಕ್ಸ್ ಪ್ರೆಸ್ ವೇ ಹಾಗೂ 4+4 ದೆಹಲಿ ಮತ್ತು ಉತ್ತರಪ್ರದೇಶ ನಡುವಿನ ನಿಜಾಮುದ್ದೀನ್ ಸೇತುವೆಯೂ ಸೇರುತ್ತದೆ.

ಈಗ ದೆಹಲಿಯಿಂದ ಮೀರತ್‌ ಪ್ರಯಾಣಿಸಲು ಎರಡೂವರೆ ಗಂಟೆ ಸಮಯ ಹಿಡಿಯುತ್ತಿದ್ದು, ಈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ 45 ನಿಮಿಷದಲ್ಲೇ ಪ್ರಯಾಣಿಸಬಹುದು.

English summary
Prime Minister Narendra Modi inaugurated the 135 kilometre-long Eastern Peripheral Expressway on Sunday in Baghpat, built at a cost of Rs 11,000 crore. It is said to be the India's first smart and green highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X