• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದ 245ನೇ ಸ್ವಾತಂತ್ರ್ಯ ‌ದಿನಾಚರಣೆಗೆ ಶುಭಕೋರಿದ ಮೋದಿ

|
Google Oneindia Kannada News

ನವದೆಹಲಿ, ಜುಲೈ 4: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕ 245ನೇ ಸ್ವಾತಂತ್ರ್ಯ ‌ದಿನ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಮತ್ತು ಜನತೆಗೆ ಶುಭ ಕೋರಿದ್ದಾರೆ.

ಪ್ರಧಾನಮಂತ್ರಿ ಮೋದಿ ತಮ್ಮ‌ಟ್ವೀಟ್ ನಲ್ಲಿ "ಅಮೆರಿಕಾ ತನ್ನ 245 ನೇ ಸ್ವಾತಂತ್ರ್ಯ ದಿನ ಆಚರಿಸಿಕೊಳ್ಳುತ್ತಿರುವ ಅಂಗವಾಗಿ ಜೋ ಬೈಡನ್ ಮತ್ತು ಅಮೆರಿಕಾದ ಜನತೆಗೆ ಆತ್ಮೀಯ ಶುಭಾಶಯಗಳು. ಸದೃಢ ಪ್ರಜಾಪ್ರಭುತ್ವ ಹೊಂದಿರುವ ಭಾರತ ಮತ್ತು ಅಮೆರಿಕಾ ಸ್ವತಂತ್ರ ಮತ್ತು ಬಿಡುಗಡೆಯ ಮೌಲ್ಯಗಳನ್ನು ಹಂಚಿಕೊಂಡಿವೆ. ನಮ್ಮ ಕಾರ್ಯತಂತ್ರ ಪಾಲುದಾರಿಕೆಗೆ ನಿಜಕ್ಕೂ ಜಾಗತಿಕ ಮಹತ್ವವಿದೆ" ಎಂದು ಹೇಳಿದ್ದಾರೆ.

ಜುಲೈ 4ರಂದು ಅಮೆರಿಕಾದಲ್ಲಿ ಸ್ವಾತಂತ್ರ್ಯ ಹಬ್ಬಜುಲೈ 4ರಂದು ಅಮೆರಿಕಾದಲ್ಲಿ ಸ್ವಾತಂತ್ರ್ಯ ಹಬ್ಬ

ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯಗಳ ಒಕ್ಕೂಟವೂ ಸಹ ತಾನು ಸ್ವಾತಂತ್ರ್ಯ ಘೋಷಣೆ ಮಾಡಿದ ದಿನ ಜುಲೈ 4.

ಪೆನ್ಸಿಲ್ವೇನಿಯಾ ರಾಜ್ಯದ ಫಿಲಡೆಲ್ಫಿಯಾ ನಗರದಲ್ಲಿ ಈ ಸ್ವಾತಂತ್ರ್ಯ ಘೋಷಣೆ ಠರಾವು ಮೊದಲಿಗೆ ಹೊರಡಿಸಲಾಯಿತು.

ಅಂದಿನಿಂದ ಹದಿಮೂರು ಬ್ರಿಟಿಷ್‌ ಕಾಲೊನಿಗಳು ಕೊನೆಗೊಂಡು, ಆ ಜುಲೈ 4, 1776 ರಂದು ಅಮೆರಿಕಾ ಸಂಯುಕ್ತ ರಾಜ್ಯಗಳ ಒಕ್ಕೂಟ ಅಸ್ತಿತ್ವಕ್ಕೆ ಬಂತು!

ಜಾನ್‌ ಆಡಮ್ಸ್‌, ಬೆಂಜಮಿನ್‌ ಫ್ರಾಂಕ್ಲಿನ್‌, ರಾಬರ್ಟ್‌ ಲಿವಿಂಗ್‌ಸ್ಟನ್‌ ಮತ್ತು ಥಾಮಸ್‌ ಜೆಪರ್‌ಸನ್‌- ಇವರುಗಳು ರಚಿಸಿದ 'ಸ್ವಾತಂತ್ರ್ಯ ಘೋಷಣೆ"ಯ ಠರಾವು ಜುಲೈ 4ರಂದು ಜಾನ್‌ ಹ್ಯಾನ್‌ಕಾಕ್‌ ಅಧ್ಯಕ್ಷತೆಯಲ್ಲಿ ನಡೆದ ಪ್ರಧಾನ ಸಮಾವೇಶ(ಜನರಲ್ ಕಾಂಗ್ರೆಸ್)ದಲ್ಲಿ ಅನುಮೋದನೆಗೊಂಡು ಅಂದಿನಿಂದ ಸ್ವಾತಂತ್ರ್ಯ ದಿನಾಚರಣೆ ಮೊದಲುಗೊಂಡಿತು ಎಂದು ಇತಿಹಾಸ ತಿಳಿಸುತ್ತದೆ.

English summary
The Prime Minister, Narendra Modi has greeted the President of USA, His Excellency Joe Biden and the people of the USA on their 245th Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X