• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋಕ್ಷ ಸಿಗುವುದಾದರೆ ನಾನು ಪಾದಪೂಜೆ ಮಾಡುವೆ : ದೇವೇಗೌಡ

|
   Lok Sabha elections 2019 : ದೇವೇಗೌಡ: ಮೋಕ್ಷ ಸಿಗುವುದಾದರೆ ನಾನು ಪಾದಪೂಜೆ ಮಾಡುವೆ | Oneindia Kannada

   ಬೆಂಗಳೂರು, ಫೆಬ್ರವರಿ 25 : ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಐವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

   ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 'ಪಾದಪೂಜೆ ಮಾಡಿದರೆ ಮೋಕ್ಷ ಸಿಗುತ್ತೆ ಎನ್ನುವುದಾದರೆ ನಾನು ಪಾದಪೂಜೆ ಮಾಡುತ್ತಿದ್ದೆ' ಎಂದು ಹೇಳುವ ಮೂಲಕ ವ್ಯಂಗ್ಯವಾಡಿದರು.

   ಗಂಗಾ ತಟದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಪ್ರಧಾನಿ ಮೋದಿ

   ನಟ ಪ್ರಕಾಶ್ ರೈ, ಸಚಿವ ಡಿ.ಸಿ.ತಮ್ಮಣ್ಣ, ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಸಹ ಪ್ರಧಾನಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆದಿದ್ದನ್ನು ವ್ಯಂಗ್ಯವಾಡಿದ್ದಾರೆ. ಇದು ಚುನಾವಣಾ ನಾಟಕ ಎಂದು ಟೀಕಿಸಿದ್ದಾರೆ.

   ಅಚ್ಛೇ ದಿನ್ ಎಲ್ಲಿ?, ಮೋದಿಗೆ ಸಿದ್ದರಾಮಯ್ಯ ಟ್ವೀಟ್ ಬಾಣ!

   ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪ್ರಧಾನಿಯಾದ ಬಳಿಕ ಅವರು ಆರಂಭಿಸಿದ ಸ್ವಚ್ಛ ಭಾರತ್ ಅಭಿಯಾನಕ್ಕೆ ದೇಶಾದ್ಯಂತ ಭಾರಿ ಬೆಂಬಲ ಸಿಕ್ಕಿದೆ. ಪ್ರಯಾಗ್‌ ರಾಜ್‌ನಲ್ಲಿಅವರು ಪೌರ ಕಾರ್ಮಿಕರ ಪಾದ ತೊಳೆಯುವ ಮೂಲಕ ಅವರನ್ನು ಗೌರವಿಸಿದ್ದರು...

   ಮಂಗಳೂರಿನಲ್ಲಿ ಅನಾವರಣಗೊಂಡಿದೆ 'ನಮೋ ಕಿರು ಜಗತ್ತು'

   ದೇವೇಗೌಡರು ಹೇಳಿದ್ದೇನು?

   ದೇವೇಗೌಡರು ಹೇಳಿದ್ದೇನು?

   'ಪ್ರಧಾನಿ ಮೋದಿ ನಿನ್ನೆ ಕರ್ಮಚಾರಿಗಳಿಗೆ ಪಾದಪೂಜೆ ಮಾಡಿದ್ದರು. ನಾನು ಈ ಬಗ್ಗೆ ಟೀಕೆ ಮಾಡಲ್ಲ. ಮೋಕ್ಷ ಸಿಗತ್ತೆ ಅಂದ್ರೆ ನಾನು ಪಾದ ಪೂಜೆ ಮಾಡುತ್ತೇನೆ. ಮೋದಿ ಯಾಕೆ ಪೂಜೆ ಮಾಡಿದ್ರು ಅಂತ ಗೊತ್ತಿಲ್ಲ. ಪಂಡಿತರನ್ನೊಮ್ಮೆ ಈ ಬಗ್ಗೆ ಕೇಳಬೇಕು' ಎಂದು ಎಚ್.ಡಿ.ದೇವೇಗೌಡ ಹೇಳಿದರು.

   ಪ್ರಕಾಶ್ ರಾಜ್ ವಾಗ್ದಾಳಿ

   ಪ್ರಧಾನಿ ನರೇಂದ್ರ ಮೋದಿ ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದು ಚುನಾವಣಾ ಗಿಮಿಕ್ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಪ್ರೀತಿಯ ಸುಪ್ರೀಂ ಲೀಡರ್, ನೀವು ಎಲೆಕ್ಷನ್ ಗಿಮಿಕ್ ನಿಲ್ಲಿಸಿ' ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

   ಡಿ.ಸಿ.ತಮ್ಮಣ್ಣ ಏನು ಹೇಳಿದರು?

   ಡಿ.ಸಿ.ತಮ್ಮಣ್ಣ ಏನು ಹೇಳಿದರು?

   'ಪ್ರಧಾನಿ ಮೋದಿ ಯಾರದ್ದೋ ಪಾದ ತೊಳೆದ ಕೂಡಲೇ ಸೇವೆ ಆಗುವುದಿಲ್ಲ. ಸ್ನಾನ ಮಾಡಿಸಿ ಎದುರು ತಂದು ಕೂರಿಸಿ ಪಾದ ತೊಳೆಯೋದಲ್ಲ. ಇಲ್ಲಿ ಬಂದು ಬೆಂಗಳೂರಿನಲ್ಲಿ ಕಸ ಗುಡಿಸುವವರ ಪಾದ ತೊಳೆಯಲಿ. ಇಲ್ಲಿ ಮಲ ಹೊರುವವರು ಈಗಲೂ ಇದ್ದಾರೆ. ಅಂತಹವರ ಪಾದ ತೊಳೆಯಲಿ ಗೊತ್ತಾಗುತ್ತೆ' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಟೀಕಿಸಿದರು.

   ಗಣೇಶ್ ಹುಕ್ಕೇರಿ ಟ್ವೀಟ್

   ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ನರೇಂದ್ರ ಮೋದಿ ಕಾಲೆಳೆದಿದ್ದಾರೆ. ವಾಹ್ ಎಂಥ ನಟನೆ ಎಂದು ಟೀಕಿಸಿದ್ದಾರೆ.

   English summary
   Prime Minister of India Narendra Modi washed the feet of sanitation workers in Prayagraj. Who said what about this.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X