'ಪ್ರಶ್ನೆಯಿಂದ ನುಣುಚಿಕೊಳ್ಳಲು ಸಾಗರ ವಿಮಾನದಲ್ಲಿ ಮೋದಿ ಹಾರಾಟ'

Posted By:
Subscribe to Oneindia Kannada

ಪ್ರಧಾನ ಮಂತ್ರಿ ಮೋದಿ ಸಾಗರ ವಿಮಾನದಲ್ಲಿ ಹಾರಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಅವರು (ಬಿಜೆಪಿ) ಗುಜರಾತ್ ನ ಜನರಿಗೆ ಏನು ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕೊಡದೆ ತಪ್ಪಿಸಿಕೊಳ್ಳುವುದಕ್ಕೆ ಇದನ್ನು ಬಳಸಿಕೊಳ್ಳಬಾರದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

'ಸಾಗರ ವಿಮಾನ'ದಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಪ್ರಯಾಣ

ಮೋದಿಯಾಗಲೀ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಆಗಲಿ ಗುಜರಾತ್ ನಲ್ಲಿ ಏಕಮುಖ ಅಭಿವೃದ್ಧಿ ಕೈಗೊಂಡಿದ್ದಾರೆ. ಐದರಿಂದ ಹತ್ತು ಜನರಲ್ಲಿ ಒಬ್ಬರಿಗೆ ಅನುಕೂಲವಾಗಿದೆ. ಎಲ್ಲರಿಗೂ ಏನು ತಲುಪಬೇಕಿತ್ತೋ ಅದನ್ನು ತಲುಪಿಸಿಲ್ಲ ಎಂದು ಮಂಗಳವಾರ ಅಹ್ಮದಾಬಾದ್ ನಲ್ಲಿ ವಾಗ್ದಾಳಿ ನಡೆಸಿದರು.

PM Modi distracting Gujarat development issue by sea plane

"ಗುಜರಾತ್ ನ ಜನ ಬಹಳ ಬುದ್ಧಿವಂತರು. ತಮ್ಮ ಚುನಾವಣೆ ಪ್ರಚಾರದಲ್ಲಿ ರೈತರು- ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಿಲ್ಲ ಎಂಬುದನ್ನು ಗಮನಿಸುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಈ ಅಂಶ ಒಳಗಿಂದ ಕೆಲಸ ಮಾಡುತ್ತಿದೆ. ಬಿಜೆಪಿ ಇಲ್ಲಿ ಭಾರೀ ಶಕ್ತಿಯೊಂದಿಗೆ ಬಡಿದಾಡುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ ಹಾಗೆ ಆಗಿಲ್ಲ" ಎಂದು ರಾಹುಲ್ ಹೇಳಿದರು.

ಗುಜರಾತ್: ಸಾಗರ ವಿಮಾನದಲ್ಲಿ ಮೋದಿ ಪ್ರಚಾರದ ಸರ್ಕಸ್

ನನಗೆ ಅವಕಾಶ ಸಿಕ್ಕಾಗ ದೇವಸ್ಥಾನಕ್ಕೆ ಹೋಗ್ತೀನಿ. ಕೇದಾರನಾಥಕ್ಕೂ ಹೋಗಿದ್ದೆ. ಅದೇನು ಗುಜರಾತ್ ನಲ್ಲಿ ಇದೆಯಾ? ಎಂದ ರಾಹುಲ್ ಗಾಂಧಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಸ್ಥಾನಕ್ಕೆ ಹೋಗ್ತಾರೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು.

"ನಾವು ಏನೇ ನಿರ್ಧಾರ ಮಾಡಿದರೂ ಗುಜರಾತ್ ನ ಜನರ ಜತೆಗೆ ಮಾತನಾಡಿಸ ನಂತರವೇ. ಗುಜರಾತ್ ಜನರ ಧ್ವನಿಯನ್ನು ಕೇಳದೆ ಯಾವುದನ್ನೂ ಏಕಮುಖವಾಗಿ ನಿರ್ಧಾರ ಮಾಡುವುದಿಲ್ಲ" ಎಂದು ಅವರು ಹೇಳಿದರು. ನರೇಂದ್ರ್ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕರು, ಮುಖಂಡರು ಬೈಗುಳ, ಅವಾಚ್ಯ ಶಬ್ದ ಬಳಸುವುದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat development question not answered by PM Narendra Modi, he distracting the people by sea plane, alleges AICC president Rahul Gandhi in Ahmadabad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ