ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶ ಪ್ರವಾಸಕ್ಕೆ ಟೀಕೆ: ಪ್ರಧಾನಿ ಮೋದಿ ಮಾಸ್ಟರ್ ಪ್ಲಾನ್

|
Google Oneindia Kannada News

ತನ್ನ ನಿರಂತರ ವಿದೇಶ ಪ್ರವಾಸವನ್ನೇ ವಿರೋಧ ಪಕ್ಷಗಳು ದಾಳವಾಗಿ ಉಪಯೋಗಿಸಿ ಕೊಳ್ಳುತ್ತಿರುವುದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯ ನರೇಂದ್ರ ಮೋದಿಗೆ ಹೊಸ ಐಡಿಯಾ ನೀಡಿದೆ ಎಂದು ವರದಿಯಾಗಿದೆ.

ಆ ಮೂಲಕ ವಿರೋಧ ಪಕ್ಷಗಳ ಬಾಯಿಮುಚ್ಚಿಸಲು ಪ್ರಧಾನಿ ಮುಂದಿನ ದಿನಗಳಲ್ಲಿ ಹೊಸ ಕಾರ್ಯತಂತ್ರ ರೂಪಿಸಲಿದ್ದಾರೆನ್ನುವ ಖಚಿತ ಮಾಹಿತಿ ಲಭ್ಯವಾಗಿದೆ.

PM decided to send his hologram speech for his upcoming foreign trips, a spoof article.

ಅಧಿಕಾರಕ್ಕೆ ಬಂದ ಒಂದು ವರ್ಷ ಪೂರೈಸುವುದಕ್ಕೆ ಮುನ್ನವೇ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿರುವ ಮೋದಿ, ವಿರೋಧ ಪಕ್ಷಗಳಿಂದ ಮತ್ತೆ ಸಾಮಾಜಿಕ ತಾಣದ ಮೂಲಕವೂ ಟೀಕೆಗೆ ಒಳಗಾಗಿದ್ದರು.

ಇದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ವರ್ಚಸ್ಸು ಕಮ್ಮಿಯಾಗದ ಹಾಗೆ ಮತ್ತು ವಿರೋಧ ಪಕ್ಷದ ಬಾಯಿ ಮುಚ್ಚಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ ಎಂದು ತಿಳಿದುಬಂದಿದೆ. (3 ದೇಶಗಳ ಪ್ರವಾಸ ಫಲ ನೀಡಿದೆ: ನರೇಂದ್ರ ಮೋದಿ)

ಲೋಕಸಭಾ ಚುನಾವಣೆಗೆ ಬಿಜೆಪಿ ಬಳಸಿದ ಯಶಸ್ವೀ ತಂತ್ರವೊಂದಾದ 3D ಹೋಲೋಗ್ರಾಂ ತಂತ್ರವನ್ನು ಪ್ರಧಾನಿ ಕಾರ್ಯಾಲಯ ಮತ್ತೆ ಬಳಸಿಕೊಳ್ಳಲು ಮುಂದಾಗಿದೆ ಎನ್ನುವುದು ಈಗ ಸಿಕ್ಕಿರುವ ಖಚಿತ ಮಾಹಿತಿ.

ಪ್ರಧಾನಿಯವರ ಯುರೋಪ್ ಮತ್ತು ಕೆನಡಾ ಪ್ರವಾಸದ ವೇಳೆಯೇ ಈ ತಂತ್ರವನ್ನು ಬಳಸಿಕೊಳ್ಳಲು ಕಾರ್ಯಾಲಯ ನಿರ್ಧರಿಸಿತ್ತಂತೆ. ಆದರೆ, ಮೋದಿ ಕೊನೆ ಗಳಿಗೆಯಲ್ಲಿ ಇದಕ್ಕೆ ಅನುಮತಿ ನೀಡಿರಲಿಲ್ಲ ಎನ್ನುವುದು ಪ್ರಧಾನಿ ಕಾರ್ಯಾಲಯದ ಮಾಹಿತಿ.

ತನ್ನ ಕಾರ್ಯಾಲಯ ನೀಡಿದ ಈ ಉಪಯುಕ್ತ ಐಡಿಯಾಗೆ ಪ್ರಧಾನಿ ಫಿದಾ ಆಗಿದ್ದಾರೆ. ಈಗಾಗಲೇ ಅಖೈರು ಆಗಿರುವ ವಿದೇಶ ಪ್ರವಾಸಕ್ಕೆ ತನ್ನ ಬದಲು ಪ್ರತಿನಿಧಿಯನ್ನು ಕಳುಹಿಸಿ 3D ಹೋಲೋಗ್ರಾಂ ತಂತ್ರಜ್ಞಾನದ ಮೂಲಕ ಭಾಷಣ ಮಾಡಿ ಸಂದೇಶ ರವಾನಿಸಲು ನಿರ್ಧರಿಸಲಾಗಿದೆ.

PM decided to send his hologram speech for his upcoming foreign trips, a spoof article.

ಮುಂದಿನ ವಿದೇಶ ಪ್ರವಾಸದ ವೇಳೆ ಪ್ರಧಾನಿಯವರ ಖುದ್ದು ಹಾಜರಾತಿ ಇರದೇ ಇರುವುದರಿಂದ ಅನಿವಾಸಿ ಭಾರತೀಯರಿಗೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆಗಳಿಸುವಂತಹ ಭಾಷಣ ರೂಪಿಸಲು ಹೊಸ ಐಡಿಯಾಲಜಿ ಇರುವ ಯವಕರನ್ನು ನಿಯೋಜಿಸಲು ಪ್ರಧಾನಿ ಕಾರ್ಯಾಲಯ, ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸೂಚಿಸಿದೆ ಎನ್ನಲಾಗುತ್ತಿದೆ.

ಪ್ರಧಾನ ಮಂತ್ರಿ ಕಾರ್ಯಾಲಯದ ಈ ಹೊಸ ಟೆಕ್ನಾಲಜಿ ಮುಂದಿನ ದಿನದಲ್ಲಿ ಯಾವ ರೂಪದಲ್ಲಿ ಕಾರ್ಯರೂಪಕ್ಕೆ ಬರಲಿದೆ ಮತ್ತು ಎಷ್ಟರ ಮಟ್ಟಿಗೆ ಯಶಸ್ಸು ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. (ಕಾಲ್ಪನಿಕ ಲೇಖನ, ಕೃಪೆ : ಫಸ್ಟ್ ಪೋಸ್ಟ್)

English summary
Prime Minister decided to send his hologram speech for his upcoming foreign trips, a spoof article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X