ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಕೇಸಿಗೆ ಮರುಜೀವ: ಅಡ್ವಾಣಿ ವಿರುದ್ದ ಮೋದಿ ಕುತಂತ್ರದ ಫಲ!

25 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಮರುಜೀವ, ಅಡ್ವಾಣಿ ವಿರುದ್ದ ಪ್ರಧಾನಿ ಮೋದಿಯ ವ್ಯವಸ್ಥಿತ ತಂತ್ರದ ಫಲ ಎಂದು ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಗಂಭೀರ ಆರೋಪ.

|
Google Oneindia Kannada News

ನವದೆಹಲಿ/ಪಾಟ್ನಾ, ಏ 20 (ಪಿಟಿಐ) : ಕಾಲು ಶತಮಾನಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಮರುಜೀವ ನೀಡಿದ ಬೆನ್ನಲ್ಲೇ, ಇದೊಂದು ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ವಿರುದ್ದ ಪ್ರಧಾನಿ ಮೋದಿಯ ವ್ಯವಸ್ಥಿತ ತಂತ್ರ ಎಂದು ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

ತನ್ನ ಸುಪರ್ದಿಯಲ್ಲಿರುವ ಸಿಬಿಐ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತನಗೆ ಬೇಕಾದ ಹಾಗೇ ಕುಣಿಸುತ್ತಿದ್ದಾರೆ. 25ವರ್ಷದ ಹಿಂದಿನ ಕೇಸಿಗೆ ಮರುಜೀವ ಸಿಗಬೇಕೆಂದರೆ ಅದು ಮೋದಿ, ಅಡ್ವಾಣಿ ವಿರುದ್ದ ನಡೆಸಿದ ಸಂಚಿನ ಫಲ ಅಲ್ಲದೇ ಇನ್ನೇನು ಎಂದು ಲಾಲೂ ಪ್ರಸಾದ್ ಯಾದವ್ ವ್ಯಾಖ್ಯಾನಿಸಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದೊಂದು ಗೊತ್ತುಗುರಿಯಿಲ್ಲದ ಹಾಸ್ಯಾಸ್ಪದ ಹೇಳಿಕೆ ಎಂದು ತಿರುಗೇಟು ನೀಡಿದೆ. (ಆರೋಪ ಸಾಬೀತಾದಲ್ಲಿ ಅಡ್ವಾಣಿಗೆ 5ವರ್ಷ ಜೈಲು)

ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಸೇವಕರು ಮತ್ತು ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಬಾಳಾಠಾಕ್ರೆ, ವಿನಯ್ ಕತಿಯಾರ್ ಸೇರಿದಂತೆ ಹದಿಮೂರು ಮುಖಂಡರ ಮೇಲೆ ಸಿಬಿಐ ದೋಷಾರೂಪ ಪಟ್ಟಿ ಸಲ್ಲಿಸಿತ್ತು.

ದೋಷಾರೂಪ ಪಟ್ಟಿ ಸಲ್ಲಿಸಿದ ಎಂಟು ವರ್ಷದ ನಂತರ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಅಲಹಾಬಾದ್ ಕೋರ್ಟಿನಲ್ಲಿ ಸಿಬಿಐ ಅರ್ಜಿ ದಾಖಲಿಸಿತ್ತು, ಆದರೆ ಸಿಬಿಐ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು.

ಅಲಹಾಬಾದ್ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಸಿಬಿಐ 2011ರಲ್ಲಿ (ಮನಮೋಹನ್ ಸಿಂಗ್ ಅವಧಿ) ಸುಪ್ರೀಂ ಮೆಟ್ಟಲೇರಿತ್ತು. ಇದಾದ ಆರು ವರ್ಷದ ನಂತರ ಸಿಬಿಐ ಅರ್ಜಿಯನ್ನು ಎತ್ತುಹಿಡಿದಿರುವ ಸುಪ್ರೀಂ, ಅರ್ಜಿಗೆ ಮರುಜೀವ ನೀಡಿದೆ.
ಲಾಲೂ ಪ್ರಸಾದ್ ಯಾದವ್ ಹೇಳಿಕೆ, ಮುಂದೆ ಓದಿ..

 ಸಿಬಿಐ ಸುಪ್ರೀಂಕೋರ್ಟಿನಲ್ಲಿ ಹೇಳಿದ್ದು

ಸಿಬಿಐ ಸುಪ್ರೀಂಕೋರ್ಟಿನಲ್ಲಿ ಹೇಳಿದ್ದು

ಅಡ್ವಾಣಿ ಮತ್ತು ಇತರ ಮುಖಂಡರು ಬಾಬ್ರಿ ಮಸೀದಿ ಧ್ವಂಸಕ್ಕೆ ಯಾವ ರೀತಿ ಪಿತೂರಿ ನಡೆಸಿದ್ದಾರೆ ಎನ್ನುವುದರ ಬಗ್ಗೆ ವಿಚಾರಣೆ ನಡೆಸಬೇಕೆಂದು ಸಿಬಿಐ ಬುಧವಾರ (ಏ 19) ಸುಪ್ರೀಂಕೋರ್ಟಿನಲ್ಲಿ ಹೇಳಿದೆ. ಇದೊಂದು ಮೋದಿ ನಡೆಸುತ್ತಿರುವ ಸಂಚು - ಲಾಲೂ ಪ್ರಸಾದ್ ಯಾದವ್.

 ಅಡ್ವಾಣಿ ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿ

ಅಡ್ವಾಣಿ ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿ

ಅಡ್ವಾಣಿ ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಸ್ಪರ್ಧಾಕಣದಲ್ಲಿ ಅಡ್ವಾಣಿ ಇರಬಾರದೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಬಿಐ ಮೂಲಕ ನಡೆಸಿದ ಸಂಚಿನ ಫಲದಿಂದಾಗಿ ಬಾಬ್ರಿ ಕೇಸ್ ಮರುಜೀವ ಪಡೆದುಕೊಂಡಿದೆ - ಲಾಲೂ ಪ್ರಸಾದ್.

 ಮೋದಿಯಿಂದ ಸಿಬಿಐ ದುರ್ಬಳಕೆ

ಮೋದಿಯಿಂದ ಸಿಬಿಐ ದುರ್ಬಳಕೆ

ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿಯವರ ಕನಸಿಗೆ ಮೋದಿ ತಣ್ಣೀರೆರೆಚಿದ್ದಾರೆ. ಇದೊಂದು ಮೋದಿ ಆಡುತ್ತಿರುವ ರಾಜಕೀಯದ ಆಟ ಎಂದು ಯಾರಿಗಾದಾರೂ ಅರ್ಥವಾಗುತ್ತದೆ. ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಗಳ ಕಣದಲ್ಲಿ ಅಡ್ವಾಣಿ ಇರಬಾರದು ಎನ್ನುವುದು ಮೋದಿ ಉದ್ದೇಶ - ಲಾಲೂ.

 ಮೋದಿಯನ್ನು ರಕ್ಷಿಸಿದ್ದ ಅಡ್ವಾಣಿ

ಮೋದಿಯನ್ನು ರಕ್ಷಿಸಿದ್ದ ಅಡ್ವಾಣಿ

ಲಕ್ನೋದಲ್ಲಿ ಮಾತನಾಡುತ್ತಿದ್ದ ಲಾಲೂ, 2002ರ ಗೋಧ್ರಾ ನರಮೇಧದ ನಂತರವೂ ಅಡ್ವಾಣಿ, ಮೋದಿಯವರ ಬೆಂಬಲಕ್ಕೆ ನಿಂತಿದ್ದರು. ವಾಜಪೇಯಿಯವರು ಮೋದಿ ವಿರುದ್ದ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರೂ, ಅಂದು ಅಡ್ವಾಣಿ ಮೋದಿಯನ್ನು ಬಚಾವ್ ಮಾಡಿದ್ದರು ಎಂದು ಲಾಲೂ ಹೇಳಿದ್ದಾರೆ.

 ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಚುನಾವಣೆ

ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಚುನಾವಣೆ

ಇದೇ ಬರುವ ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಬಿಜೆಪಿ/ಎನ್ಡಿಎ ಇದುವರೆಗೂ ತನ್ನ ಅಭ್ಯರ್ಥಿಯನ್ನು ಘೋಷಿಸಿಸದಿದ್ದರೂ, ಅಡ್ವಾಣಿ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು.

English summary
After the Supreme Court's verdict in Babri Demolition case, RJD chief Lalu Prasad Yadav said that the court's decision is itself a conspiracy of PM Narendra Modi to remove LK Advani from Presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X