ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್‌ಘರ್‌ ತಿರಂಗ; ಪ್ರೊಫೈಲ್ ಚಿತ್ರ ಬದಲಿಸಿದ ಪಿಎಂ ಮೋದಿ

|
Google Oneindia Kannada News

ನವದೆಹಲಿ,ಆಗಸ್ಟ್‌.2: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಸಾಮಾಜಿಕ ಜಾಲತಾಣಗಳಗಳಲ್ಲಿ ಪ್ರೊಫೈಲ್ ಚಿತ್ರವನ್ನು ಬದಲಿಸಿದ್ದಾರೆ. ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮದಲ್ಲಿ ಅವರು ಪ್ರೊಫೈಲ್ ಚಿತ್ರವನ್ನು ಬದಲಿಸುವಂತೆ ಭಾನುವಾರ ಕರೆ ನೀಡಿದ್ದರು.

ಇಂದು ಆಗಸ್ಟ್ 2 ರ ವಿಶೇಷ! ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ನಮ್ಮ ರಾಷ್ಟ್ರವು ನಮ್ಮ ತ್ರಿವರ್ಣ ಧ್ವಜವನ್ನು ಅಳವಡಿಸುವ ಒಂದು ಸಾಮೂಹಿಕ ಆಂದೋಲನವಾದ ಹರ್‌ ಘರ್‌ ತಿರಂಗಕ್ಕೆ ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಡಿಪಿಯನ್ನು ಬದಲಾಯಿಸಿದ್ದೇನೆ. ಅದೇ ರೀತಿ ಮಾಡುವಂತೆ ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಅಜಾದಿ ಕಾ ಅಮೃತ ಮಹೋತ್ಸವ; 1 ಕೋಟಿ ಬಾವುಟ ವಿತರಣೆಅಜಾದಿ ಕಾ ಅಮೃತ ಮಹೋತ್ಸವ; 1 ಕೋಟಿ ಬಾವುಟ ವಿತರಣೆ

ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಗಸ್ಟ್ 2 ರಿಂದ ಆಗಸ್ಟ್ 15 ರ ನಡುವೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಮತ್ತು ತಿರಂಗವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರೊಫೈಲ್ ಚಿತ್ರವಾಗಿ ಬಳಸುವ ಮೂಲಕ 'ಹರ್ ಘರ್ ತಿರಂಗ' ಅಭಿಯಾನವನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸುವಂತೆ ಪಿಎಂ ಮೋದಿ ಭಾನುವಾರ ಎಲ್ಲಾ ನಾಗರಿಕರಿಗೆ ಕರೆ ನೀಡಿದರು.

ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಗಸ್ಟ್ 13ರಿಂದ 15ರವರೆಗೆ ವಿಶೇಷ ಆಂದೋಲನ 'ಹರ್ ಘರ್ ತಿರಂಗ' ಆಯೋಜಿಸಲಾಗಿದೆ. ನಾವು ನಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಈ ಆಂದೋಲನವನ್ನು ಆಚರಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಹೇಳಿದ್ದರು.

ಆಗಸ್ಟ್ 2 ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಅವರ ಜನ್ಮದಿನವಾಗಿದೆ. ಆಗಸ್ಟ್ 2 ಮತ್ತು ಆಗಸ್ಟ್ 15 ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 'ತಿರಂಗ' ಅನ್ನು ಪ್ರೊಫೈಲ್ ಚಿತ್ರವಾಗಿ ಬಳಸಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದರು.

'ಹರ್ ಘರ್ ತಿರಂಗ' ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವದ ಆಶ್ರಯದಲ್ಲಿ ತಿರಂಗವನ್ನು ಮನೆಗೆ ತರಲು ಮತ್ತು ಭಾರತದ 75ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸಿಲು ಜನರನ್ನು ಪ್ರೋತ್ಸಾಹಿಸಲು ಒಂದು ಅಭಿಯಾನವಾಗಿದೆ.

ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ

ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ

ಮಾಸಿಕ ರೇಡಿಯೊ ಕಾರ್ಯಕ್ರಮದ 91ನೇ ಆವೃತ್ತಿ ಮನ್ ಕಿ ಬಾತ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಾವು ದೇಶಾದ್ಯಂತ 75 ವರ್ಷಗಳ ಸ್ವಾತಂತ್ರ್ಯದ ಕುರಿತು ನಮ್ಮ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ನಾವು ಮುಂದಿನ ಬಾರಿ ಭೇಟಿಯಾದಾಗ, ನಮ್ಮ ಮುಂದಿನ 25 ವರ್ಷಗಳ ಪ್ರಯಾಣವು ಈಗಾಗಲೇ ಪ್ರಾರಂಭವಾಗಲಿದೆ ಎಂದು ಹೇಳಿದರು.

ವಿಶೇಷವಾದದ್ದನ್ನು ನನ್ನೊಂದಿಗೆ ಹಂಚಿಕೊಳ್ಳಿ: ಮೋದಿ

ವಿಶೇಷವಾದದ್ದನ್ನು ನನ್ನೊಂದಿಗೆ ಹಂಚಿಕೊಳ್ಳಿ: ಮೋದಿ

ನಮ್ಮ ಪ್ರೀತಿಪಾತ್ರರ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನಾವೆಲ್ಲರೂ ಸೇರಬೇಕು. ನೀವು ಸ್ವಾತಂತ್ರ್ಯ ದಿನವನ್ನು ಹೇಗೆ ಆಚರಿಸಿದ್ದೀರಿ ಹಾಗೂ ಈ ಬಾರಿ ಏನಾದರೂ ವಿಶೇಷವಾದದ್ದನ್ನು ಮಾಡಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ. ಮುಂದಿನ ಬಾರಿ ನಮ್ಮ ಅಮೃತ ಪರ್ವ್‌ನ ವಿವಿಧ ಬಣ್ಣಗಳ ಬಗ್ಗೆ ನಾವು ಮತ್ತೊಮ್ಮೆ ಮಾತನಾಡುತ್ತೇವೆ. ಅಲ್ಲಿಯವರೆಗೆ ತುಂಬಾ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಾಧನೆಗಳ ವೈಭವಯುತ ಇತಿಹಾಸದ ಆಚರಣೆ

ಸಾಧನೆಗಳ ವೈಭವಯುತ ಇತಿಹಾಸದ ಆಚರಣೆ

ಆಜಾದಿ ಕಾ ಅಮೃತ್ ಮಹೋತ್ಸವವು 75 ವರ್ಷಗಳ ಸ್ವಾತಂತ್ರ್ಯದ ಹೋರಾಟ, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರ್ಕಾರದ ಉಪಕ್ರಮವಾಗಿದೆ. ಈ ಮಹೋತ್ಸವವು ಭಾರತವನ್ನು ತನ್ನ ವಿಕಸನೀಯ ಪಯಣದಲ್ಲಿ ಇಲ್ಲಿಯವರೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾತ್ರವಲ್ಲದೆ ಜನರಲ್ಲಿ ಶಕ್ತಿ ಮತ್ತು ಸಾಮರ್ಥ್ಯವನ್ನು ಉತ್ತೇಜಿಸುವ ಭಾರತ 2.0 ಅನ್ನು ಸಕ್ರಿಯಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದಿಂದ ಉತ್ತೇಜಿಸಲ್ಪಟ್ಟಿದೆ.

ಆಗಸ್ಟ್ 15, 2023 ರಂದು ಕೊನೆ

ಆಗಸ್ಟ್ 15, 2023 ರಂದು ಕೊನೆ

ಆಜಾದಿ ಕಾ ಅಮೃತ್ ಮಹೋತ್ಸವದ ಅಧಿಕೃತ ಪ್ರಯಾಣವು ಮಾರ್ಚ್ 12, 2021 ರಂದು ಪ್ರಾರಂಭವಾಗಿದೆ. ಇದು ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ 75 ವಾರಗಳ ಆಚರಣೆಯನ್ನು ಪ್ರಾರಂಭಿಸಿತು. ಇದು ಆಗಸ್ಟ್ 15, 2023 ರಂದು ಒಂದು ವರ್ಷದ ನಂತರ ಕೊನೆಗೊಳ್ಳುತ್ತದೆ.

Recommended Video

ಸಿದ್ಧರಾಮೋತ್ಸವಾನಾ...? ಗುದ್ದರಾಮೋತ್ಸವಾನಾ..? | Oneindia Kannada

English summary
Indian Prime Minister Narendra Modi on Tuesday changed his profile picture to 'Tiranga' on his social media platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X