ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

PM Modi Cabinet Reshuffle LIVE Updates: ನೂತನ ಸಚಿವರಿಗೆ ಖಾತೆ ಹಂಚಿಕೆ

|
Google Oneindia Kannada News

ನವದೆಹಲಿ, ಜುಲೈ 7: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಇಂದು ಸಂಜೆ 6 ಗಂಟೆಗೆ ನಡೆದು, 43 ಮಂದಿ ನೂತನ ಸಚಿವರು ಸಂಪುಟ ಸೇರ್ಪಡೆಗೊಂಡಿದ್ದಾರೆ. ಸಂಪುಟ ವಿಸ್ತರಣೆ ಅಪ್ಡೇಟ್ಸ್ ಇಲ್ಲಿದೆ.

ಪ್ರಧಾನಿ ಮೋದಿ ನಿವಾಸದಲ್ಲಿ ಕಳೆದ ವಾರಾಂತ್ಯದಿಂದ ಉನ್ನತಮಟ್ಟದ ಸಭೆ ನಡೆಸಲಾಗಿದ್ದು, ಹಾಲಿ ಸಚಿವರ ಮೌಲ್ಯಮಾಪನ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಪ್ರಧಾನಿ ಮೋದಿ ಅಂತಿಮ ಪಟ್ಟಿ ಸಿದ್ಧಪಡಿಸಿದ್ದಾರೆ. ಆದರೆ ಇಂದು ಬೆಳಗ್ಗೆ ನಿಗದಿಯಾಗಿದ್ದ ಸಚಿವರ ಸಮೂಹ(CCEA) ಹಾಗೂ ಸಚಿವ ಸಂಪುಟ ಸಭೆ ರದ್ದಾಗಿದ್ದು ಏಕೆ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

PM Modi Cabinet Expansion 2021 Live Updates and Highlights in Kannada

ಕೇಂದ್ರ ಮಂತ್ರಿ ಪರಿಷತ್ ಸೇರಲಿರುವ ಮಂತ್ರಿಗಳ ಶಪಥ ಗ್ರಹಣ ಸಮಾರೋಹ ಸಮಾರಂಭವು ರಾಷ್ಟ್ರಪತಿ ಭವನದಲ್ಲಿ ಬುಧವಾರ ಆಷಾಢ 16, 1943ನೇ ಶಖೆ(ಜುಲೈ 7, 2021) ಸಂಜೆ 6 ಗಂಟೆಗೆ ನಡೆಸಲಾಯಿತು ಯಾವ ರೀತಿ ಪೋಷಾಕು ಧರಿಸಬೇಕು ಎಂಬುದನ್ನು ಕೆಳಗೆ ಉಲ್ಲೇಖಿಸಲಾಗಿತ್ತು. ಕೋವಿಡ್ 19 ಮಾರ್ಗಸೂಚಿಯಂತೆ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಯಾರು ಯಾರು ಸಂಪುಟ ಸೇರಿದರು ಎಂಬ ವಿವರ ಇಲ್ಲಿದೆ...

Newest FirstOldest First
10:25 PM, 7 Jul

ಯಾವ ಸಚಿವರಿಗೆ ಯಾವ ಖಾತೆ

* ಅಮಿತ್ ಶಾ: ಸಹಕಾರ ಖಾತೆ(ಹೊಸ ಇಲಾಖೆ) * ಅಶ್ವಿನಿ ವೈಷ್ಣವ್: ರೈಲ್ವೆ ಸಚಿವ * ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಖಾತೆ * ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ * ಮನ್ಸುಖ್ ಮಾಂಡವಿಯಾ: ಆರೋಗ್ಯ ಸಚಿವ. * ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ ಹೆಚ್ಚುವರಿ ಖಾತೆ. * ಪಿಯೂಷ್ ಗೊಯೆಲ್: ಜವಳಿ ವಾಣಿಜ್ಯ ವ್ಯವಹಾರ * ಗಿರಿರಾಜ್ ಸಿಂಗ್: ಗ್ರಾಮೀಣಾಭಿವೃದ್ಧಿ ಖಾತೆ * ಅನುರಾಗ್ ಸಿಂಗ್ ಠಾಕೂರ್: ವಾರ್ತಾ ಮತ್ತು ಪ್ರಸಾರ ಖಾತೆ, ಕ್ರೀಡೆ ಮತ್ತು ಯುವಜನ ಖಾತೆ * ಮೀನಾಕ್ಷಿ ಲೇಖಿ: ವಿದೇಶಾಂಗ ಸಚಿವಾಲಯ(ರಾಜ್ಯ ಸಚಿವೆ) * ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ * ಭೂಪೇಂದ್ರ ಯಾದವ್ : ಕಾರ್ಮಿಕ ಖಾತೆ ಸಚಿವ. * ಕಿರಣ್ ರಿಜಿಜು: ಕಾನೂನು ಖಾತೆ * ಸರ್ಬಾನಂದ್ ಸೊನೊವಾಲ್: ಶಿಪ್ಪಿಂಗ್ ಹಾಗೂ ಆಯುಷ್ * ಶೋಭಾಕರಂದ್ಲಾಜೆ: ಕೃಷಿ (ರಾಜ್ಯ ಖಾತೆ) * ರಾಜೀವ್ ಚಂದ್ರಶೇಖರ್: ಎಲೆಕ್ಟ್ರಾನಿಕ್ಸ್ * ಅಮಿತ್ ಶಾ: ಸಹಕಾರ ಖಾತೆ(ಹೊಸ ಇಲಾಖೆ) * ಅಶ್ವಿನಿ ವೈಷ್ಣವ್: ರೈಲ್ವೆ ಸಚಿವ * ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಖಾತೆ * ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ * ಮನ್ಸುಖ್ ಮಾಂಡವಿಯಾ: ಆರೋಗ್ಯ ಸಚಿವ. * ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ ಹೆಚ್ಚುವರಿ ಖಾತೆ. * ಪಿಯೂಷ್ ಗೊಯೆಲ್: ಜವಳಿ ವಾಣಿಜ್ಯ ವ್ಯವಹಾರ * ಗಿರಿರಾಜ್ ಸಿಂಗ್: ಗ್ರಾಮೀಣಾಭಿವೃದ್ಧಿ ಖಾತೆ * ಅನುರಾಗ್ ಸಿಂಗ್ ಠಾಕೂರ್: ವಾರ್ತಾ ಮತ್ತು ಪ್ರಸಾರ ಖಾತೆ, ಕ್ರೀಡೆ ಮತ್ತು ಯುವಜನ ಖಾತೆ * ಮೀನಾಕ್ಷಿ ಲೇಖಿ: ವಿದೇಶಾಂಗ ಸಚಿವಾಲಯ(ರಾಜ್ಯ ಸಚಿವೆ) * ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ * ಭೂಪೇಂದ್ರ ಯಾದವ್ : ಕಾರ್ಮಿಕ ಖಾತೆ ಸಚಿವ. * ಕಿರಣ್ ರಿಜಿಜು: ಕಾನೂನು ಖಾತೆ * ಸರ್ಬಾನಂದ್ ಸೊನೊವಾಲ್: ಶಿಪ್ಪಿಂಗ್ ಹಾಗೂ ಆಯುಷ್ * ಶೋಭಾಕರಂದ್ಲಾಜೆ: ಕೃಷಿ (ರಾಜ್ಯ ಖಾತೆ) * ರಾಜೀವ್ ಚಂದ್ರಶೇಖರ್: ಎಲೆಕ್ಟ್ರಾನಿಕ್ಸ್
10:19 PM, 7 Jul

ಮೋದಿ ಸರ್ಕಾರ್ 2.0: ಯಾರಿಗೆ ಯಾವ ಖಾತೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಸರಳವಾಗಿ ಸಂಪನ್ನವಾಗಿದೆ. 43 ಮಂದಿ ನೂತನ ಸಚಿವರು ಸಂಪುಟ ಸೇರ್ಪಡೆಗೊಂಡಿದ್ದಾರೆ.
9:50 PM, 7 Jul

ಕರ್ನಾಟಕದಿಂದ ಮೋದಿ ಸಂಪುಟಕ್ಕೆ ನಾಲ್ವರು

ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದೃಶ್ಯ.
9:06 PM, 7 Jul

ನೂತನ ಸಚಿವರ ಗ್ರೂಪ್ ಫೋಟೋ

ಸಚಿವ ಸಂಪುಟ ಸೇರಿದ ಹೊಸ ಸಚಿವರ ಜೊತೆ ಪ್ರಧಾನಿ ಮೋದಿ ಗ್ರೂಪ್ ಫೋಟೋ
7:38 PM, 7 Jul

7 ಸಚಿವರಿಗೆ ಬಡ್ತಿ

ಕಿರಣ್ ರಿಜಿಜು, ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ಏಳು ಮಂದಿ ರಾಜ್ಯ ಸಚಿವರಿಗೆ ಬಡ್ತಿ ಸಿಕ್ಕಿದ್ದು, ಕ್ಯಾಬಿನೆಟ್ ದರ್ಜೆ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
7:31 PM, 7 Jul

ಮೋದಿ 2.0 ಸಚಿವ ಸಂಪುಟ ವಿಸ್ತರಣೆ

ಮೋದಿ 2.0 ಸಚಿವ ಸಂಪುಟ ವಿಸ್ತರಣೆ: ಸರಳವಾಗಿ ನಡೆದ ಸಮಾರಂಭದಲ್ಲಿ ಕೋವಿಡ್ 19 ಮಾರ್ಗಸೂಚಿಯಂತೆ ಪಾಲ್ಗೊಂಡ ಮುಖಂಡರು
7:29 PM, 7 Jul

ನಿತೀಶ್ ಪ್ರಾಮಾಣಿಕ್-ಕೇಂದ್ರದ ರಾಜ್ಯ ಸಚಿವ (MoS)ರಾಗಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
Advertisement
7:28 PM, 7 Jul

ಟ್ವೀಟ್ ಮಾಡಿದ ಬಿಜೆಪಿ ಕರ್ನಾಟಕ

ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ ಬಿಜೆಪಿ ಕರ್ನಾಟಕ
7:26 PM, 7 Jul

ಡಾ. ಎಲ್ ಮುರುಗನ್- ಕೇಂದ್ರದ ರಾಜ್ಯ ಸಚಿವ (MoS)ರಾಗಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:24 PM, 7 Jul

ಜಾನ್ ಬಾರ್ಲ -ಕೇಂದ್ರದ ರಾಜ್ಯ ಸಚಿವ (MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:24 PM, 7 Jul

ಡಾ. ಎಂ ಮಹೇಂದ್ರಭಾಯಿ -ಕೇಂದ್ರದ ರಾಜ್ಯ ಸಚಿವ (MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:22 PM, 7 Jul

ಈಶಾನ್ಯ ರಾಜ್ಯದ ಸಚಿವರು

ಈಶಾನ್ಯ ರಾಜ್ಯದ ಪ್ರತಿನಿಧಿಗಳಾಗಿ ಕಿರಣ್ ರಿಜಿಜು ಹಾಗೂ ಸರ್ಬಾನಂದ್ ಅವರಿಂದ ಹೆಚ್ಚಿನ ನಿರೀಕ್ಷೆಯಿದೆ ಎಂದು ಶುಭ ಹಾರೈಸಿದ ಮೇಘಾಲಯ ಸಿಎಂ ಕೋನ್ರಾಡ್.
Advertisement
7:20 PM, 7 Jul

ಶಂತನು ಠಾಕೂರ್ -ಕೇಂದ್ರದ ರಾಜ್ಯ ಸಚಿವರಾಗಿ (MoS)ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:18 PM, 7 Jul

ಬಿಶ್ವೇಶ್ವರ್ ಟುಡು -ಕೇಂದ್ರದ ರಾಜ್ಯ ಸಚಿವರಾಗಿ (MoS) ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:15 PM, 7 Jul

ಡಾ ಭಾರತಿ ಪ್ರವೀಣ್ ಪವಾರ್ -ಕೇಂದ್ರದ ರಾಜ್ಯ ಸಚಿವೆ (MoS) ಯಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:13 PM, 7 Jul

ಡಾ. ರಾಜ್ ಕುಮಾರ್ ರಂಜನ್ ಸಿಂಗ್ -ಕೇಂದ್ರದ ರಾಜ್ಯ ಸಚಿವರಾಗಿ (MoS)ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:11 PM, 7 Jul

ಡಾ. ಭಗವತ್ ಕಿಶನ್ ರಾವ್ ಕರಡ್ -ಕೇಂದ್ರದ ರಾಜ್ಯ ಸಚಿವ (MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:10 PM, 7 Jul

ಡಾ. ಸುಭಾಶ್ ಸರ್ಕಾರ್ -ಕೇಂದ್ರದ ರಾಜ್ಯ ಸಚಿವ (MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:07 PM, 7 Jul

ಪ್ರತಿಮಾ ಭೌಮಿಕ್ ಕೇಂದ್ರದ ರಾಜ್ಯ ಸಚಿವೆ (MoS) ಯಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ.
7:04 PM, 7 Jul

ಕಪಿಲ್ ಮೊರೇಶ್ವರ್ ಪಾಟೀಲ್ ಕೇಂದ್ರದ ರಾಜ್ಯ ಸಚಿವ (MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
7:03 PM, 7 Jul
ಕರ್ನಾಟಕ

ಭಗವಂತ್ ಗುರುಬಸಪ್ಪ ಕೂಬಾ ಕೇಂದ್ರದ ರಾಜ್ಯ ಸಚಿವ (MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
7:02 PM, 7 Jul

ಮೋದಿ ಸಂಪುಟ ಸೇರಿದ ನೂತನ ಸಚಿವರು

ಮೋದಿ ಸಂಪುಟ ಸೇರಿದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಚಿತ್ರ
7:00 PM, 7 Jul

ಚೌಹಾಣ್ ದೇವು ಸಿಂಗ್ ಕೇಂದ್ರದ ರಾಜ್ಯ ಸಚಿವ (MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
6:59 PM, 7 Jul

ಅಜಯ್ ಕುಮಾರ್ ಕೇಂದ್ರದ ರಾಜ್ಯ ಸಚಿವ(MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ. ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರಪತಿ ಕೋವಿಂದ್.
6:58 PM, 7 Jul

ಬಿ.ಎಲ್ ವರ್ಮ ಕೇಂದ್ರದ ರಾಜ್ಯ ಸಚಿವ(MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
6:55 PM, 7 Jul

ಅಜಯ್ ಭಟ್ ಕೇಂದ್ರದ ರಾಜ್ಯ ಸಚಿವ(MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
6:54 PM, 7 Jul

ಕೌಶಲ್ ಕಿಶೋರ್ ಕೇಂದ್ರದ ರಾಜ್ಯ ಸಚಿವ(MoS)ರಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
6:53 PM, 7 Jul
ಕರ್ನಾಟಕ

ಆನೇಕಲ್ ನಾರಾಯಣಸ್ವಾಮಿ ಕೇಂದ್ರದ ರಾಜ್ಯ ಸಚಿವ(MoS)ರಾಗಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
6:50 PM, 7 Jul

ಅನ್ನಪೂರ್ಣ ದೇವಿ ಕೇಂದ್ರದ ರಾಜ್ಯ ಸಚಿವೆ (MoS)ಯಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
6:48 PM, 7 Jul

ಮೀನಾಕ್ಷಿ ಲೇಖಿ ಕೇಂದ್ರದ ರಾಜ್ಯ ಸಚಿವೆ (MoS)ಯಾಗಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
READ MORE

English summary
PM Modi Cabinet Reshuffle 2021 Live Updates in kannada: Union Cabinet reshuffle of NDA 2.0 will take place today. Check out live updates and highlights in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X