ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಕರ್ಸ್ ಗಳ ಕಾಟ, ಸಂಪುಟ ಸಭೆಯಲ್ಲಿ ಮೊಬೈಲ್ ಬಳಕೆ ನಿಷೇಧ!

ಪಾಕ್ ಮತ್ತು ಚೈನೀಸ್ ಹ್ಯಾಕರ್ಸ್ ಗಳು ಸ್ಮಾರ್ಟ್ ಫೋನ್ ಗಳಿಂದ ಮಹತ್ವದ ವಿಷಯಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.ಇದರಿಂದ ಪ್ರಧಾನಿ ಕಾರ್ಯಲಯವು ಸಚಿವ ಸಂಪುಟ ಸಭೆಯಲ್ಲಿ ಮೊಬೈಲ್ ಗಳನ್ನು ನಿಷೇಧಿಸಿದೆ.

By Ramesh
|
Google Oneindia Kannada News

ನವದೆಹಲಿ, ಅಕ್ಟೋಬರ್. 21 : ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇನ್ಮುಂದೆ ಸ್ಮಾರ್ಟ್ ಮೊಬೈಲ್ ಫೋನ್ ಗಳನ್ನು ನಿಷೇಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ಈ ಆದೇಶ ಹೊರಡಿಸಿದೆ.

ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕ್ ಮತ್ತು ಚೈನೀಸ್ ಹ್ಯಾಕರ್ಸ್ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವ ಮಹತ್ವದ ವಿಷಯಗಳನ್ನು ಹ್ಯಾಕ್ ಮಾಡುವ ಮೂಲಕ ವಿಷಯಗಳು ಕದ್ದಾಲಿಕೆಯಾಗಬಹುದೆಂಬ ಅಘಾತಕಾರಿ ವಿಷಯವನ್ನು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಕಾರ್ಯಾಲಯ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

Mobile

ಸಭೆಗೆ ಮೊಬೈಲ್ ಗಳನ್ನು ತರದಿರುವಂತೆ ಪ್ರಧಾನಿ ಕಾರ್ಯಾಲಯದಿಂದ ಎಲ್ಲ ಕೇಂದ್ರ ಸಚಿವರ ಕಾರ್ಯದರ್ಶಿಗಳ ಮೂಲಕ ಸಚಿವರಿಗೆ ಈ ಸೂಚನೆ ತಲುಪಿಸಲಾಗಿದೆ.

ಅಲ್ಲದೇ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳು, ತಮ್ಮ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡಲು ಸರ್ಕಾರದ ಲ್ಯಾಪ್ ಟಾಪ್ ಹಾಗೂ ಕಂಪ್ಯೂಟರ್ ಗಳನ್ನು ಬಳಸದಂತೆ ನಿರ್ದೇಶಿಸಲಾಗಿದೆ.

ಮೇ 2010 ರಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರಾನ್ ಅವರು ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಮೊಬೈಲ್ ಫೋನ್ ಗಳನ್ನು ನಿ‍ಷೇಧ ಮಾಡಿದ್ದರು.

English summary
To prevent leaking of sensitive information and policy decisions, the prime Minister's Office has banned use of mobile phones in cabinet meetings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X