ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಭಾರತೀಯ ಕಂಪನಿಗಳಿಗೆ ಹೊಸ ಯೋಜನೆಗಳ ಘೋಷಣೆ

|
Google Oneindia Kannada News

ನವದೆಹಲಿ, ಮಾರ್ಚ್ 05: ಉತ್ಪಾದನೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕಂಪನಿಗಳಿಗೆ ಪ್ರೋತ್ಸಾಹಕ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ನಮ್ಮ ಸರ್ಕಾರವು ಉತ್ಪಾದನಾ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ನೋಡುತ್ತಿದೆ. ನಮ್ಮ ನೀತಿ ಮತ್ತು ಕಾರ್ಯತಂತ್ರ ಸ್ಪಷ್ಟವಾಗಿದೆ. ನಾವು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದಲ್ಲಿ ನಂಬಿಕೆ ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಆರ್ಥಿಕತೆ ಹದಗೆಡಲು ಕೇಂದ್ರದ ನಿರ್ವಹಣಾ ವೈಫಲ್ಯವೇ ಮುಖ್ಯ ಕಾರಣ:ಕಾಂಗ್ರೆಸ್ ದೇಶದಲ್ಲಿ ಆರ್ಥಿಕತೆ ಹದಗೆಡಲು ಕೇಂದ್ರದ ನಿರ್ವಹಣಾ ವೈಫಲ್ಯವೇ ಮುಖ್ಯ ಕಾರಣ:ಕಾಂಗ್ರೆಸ್

ಕೋವಿಡ್-19 ಆರ್ಥಿಕ ಸಂಕಷ್ಟವನ್ನು ಎದುರಿಸಿದ ಕಂಪೆನಿಗಳ ಪುನಶ್ಚೇತನಕ್ಕೆ ಮತ್ತು ಭಾರತದಲ್ಲಿ ಬೃಹತ್ ಕಂಪೆನಿಗಳು ಹೂಡಿಕೆ ಮಾಡಿ ಇಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಈ ಪ್ರೋತ್ಸಾಹಕ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.

PM Modi Announces Production Linked Incentive For India Inc

ಕೇಂದ್ರ ಬಜೆಟ್ ಮತ್ತು ದೇಶದ ನೀತಿಗಳು ಕೇವಲ ಸರ್ಕಾರದ ಪ್ರಕ್ರಿಯೆಗಳಲ್ಲ. ದೇಶದ ಅಭಿವೃದ್ಧಿಯಲ್ಲಿ ಸಂಬಂಧಪಟ್ಟವರೆಲ್ಲರೂ ಇದರಲ್ಲಿ ಪರಿಣಾಮಕಾರಿಯಾಗಿ ಭಾಗಿಯಾಗಬೇಕು ಎಂದು ಒತ್ತಾಯಿಸಿದರು.

ಕೋವಿಡ್-19 ಬಂದ ನಂತರ ನಮ್ಮ ಜವಾಬ್ದಾರಿ ಕೇವಲ ಉತ್ಪಾದನೆಯ ವೇಗ ಹೆಚ್ಚಿಸುವುದು ಮಾತ್ರವಲ್ಲದೆ ಪ್ರತಿ ವಲಯದಲ್ಲಿ ಉತ್ಪಾದನಾ ಸುಧಾರಣೆಗಳನ್ನು ಮಾಡಬೇಕಾಗಿದೆ ಎಂದರು.

ಚೇತರಿಕೆ ಹಾದಿ ಕಂಡ ಭಾರತದ ಆರ್ಥಿಕತೆ: ಜಿಡಿಪಿ ಶೇ 0.4ರಷ್ಟು ಬೆಳವಣಿಗೆಚೇತರಿಕೆ ಹಾದಿ ಕಂಡ ಭಾರತದ ಆರ್ಥಿಕತೆ: ಜಿಡಿಪಿ ಶೇ 0.4ರಷ್ಟು ಬೆಳವಣಿಗೆ

ವೆಬಿನಾರ್‌ನಲ್ಲಿ ಸುಮಾರು 42 ಕಂಪನಿಗಳ ಮುಖ್ಯಸ್ಥರು ಸಭೆಯಲ್ಲಿ ಪ್ರಧಾನಿಯವರೊಂದಿಗೆ ಭಾಗಿಯಾಗಿದ್ದಾರೆ. ಕಂಪೆನಿಯ ಮುಖ್ಯಸ್ಥರ ಪ್ರತಿಕ್ರಿಯೆ, ಅಭಿಪ್ರಾಯಗಳನ್ನು ಪಡೆದು ಸರ್ಕಾರದ ಯೋಜನೆಗಳನ್ನು ಜಾರಿಗೆ ಮಾಡಲು ಇಂದಿನ ಸಂವಾದ ಉಪಯೋಗವಾಗಲಿದೆ.

English summary
Prime Minister Narendra Modi on Friday announced Production Linked Incentive(PLI) for India Inc. Addressing a webinar on the Production Linked Incentives scheme, PM asserted that Union Budget and country’s policy-making shouldn’t just be restricted to a govt process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X