ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಸಿ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಾಯಿ ವಿರುದ್ಧ ಅವಾಚ್ಯ ಪದಗಳಿಂದ ನಿಂದನೆ

|
Google Oneindia Kannada News

ನವದೆಹಲಿ, ಮಾರ್ಚ್ 3: ಬಿಬಿಸಿ ಏಷ್ಯನ್ ನೆಟ್ವರ್ಕ್ ಆಯೋಜಿಸಿದ್ದ 'ಬಿಗ್ ಡಿಬೇಟ್' ರೇಡಿಯೋ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ 99 ವರ್ಷದ ತಾಯಿ ಹೀರಾಬೆನ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬ್ರಿಟನ್‌ನಲ್ಲಿ ಸಿಖ್ಖರು ಹಾಗೂ ಭಾರತೀಯರ ಮೇಲಿನ ಜನಾಂಗೀಯ ನಿಂದನೆ ಕುರಿತು ಸಂವಾದ ನಡೆಯುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಅಂಗೀಕರಿಸಿದ ಮೂರು ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯತ್ತ ಚರ್ಚೆ ಹೊರಳಿತು. ಆಗ ಒಬ್ಬ ವ್ಯಕ್ತಿ ಪ್ರಧಾನಿ ಹಾಗೂ ಅವರ ತಾಯಿಯ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾನೆ.

ಯುವಜನತೆಯಲ್ಲಿ ಆತ್ಮವಿಶ್ವಾಸ ಜಾಗೃತವಾದರೆ, ಆತ್ಮನಿರ್ಭರ ಭಾರತ ಸಾಧ್ಯ: ಮೋದಿ ಯುವಜನತೆಯಲ್ಲಿ ಆತ್ಮವಿಶ್ವಾಸ ಜಾಗೃತವಾದರೆ, ಆತ್ಮನಿರ್ಭರ ಭಾರತ ಸಾಧ್ಯ: ಮೋದಿ

ನಿರೂಪಕಿ ಪ್ರಿಯಾ ರೈ ಅವರು ಬಿಬಿಸಿ ಸೌಂಡ್ಸ್‌ನಲ್ಲಿ ನಡೆಸಿಕೊಟ್ಟ ಈ ಕಾರ್ಯಕ್ರಮ ಮಾರ್ಚ್ 1ರಂದು ಪ್ರಸಾರವಾಗಿದೆ. ಸುಮಾರು ಮೂರು ಗಂಟೆಗಳ ಈ ಕಾರ್ಯಕ್ರಮದಲ್ಲಿ ನಿರೂಪಕಿ, ಜನರ ಕರೆಗಳನ್ನು ಸ್ವೀಕರಿಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದರು. ಅವರಲ್ಲಿ ಅನೇಕರು ಬ್ರಿಟನ್‌ನಲ್ಲಿ ಸಿಖ್ಖರು ಎದುರಿಸುವ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು.

PM Modi And His Mother Hiraben Abused By A Caller During BBC Radio Show In UK

ಇದೇ ವೇಳೆ ಕರೆ ಮಾಡಿದ್ದ ಸೈಮನ್ ಎಂಬ ವ್ಯಕ್ತಿ ಪ್ರಧಾನಿ ಮೋದಿ ಹಾಗೂ ಅವರ ತಾಯಿಯ ಕುರಿತು ಕೀಳುಮಟ್ಟದ ಪದಗಳನ್ನು ಬಳಸಿದ್ದಾನೆ. ಅದರಲ್ಲಿಯೂ ಹೀರಾಬೆನ್ ವಿರುದ್ಧ ಅಶ್ಲೀಲ ಹಾಗೂ ಹಿಂಸೆಯ ಪದಗಳನ್ನು ಉಪಯೋಗಿಸಿದ್ದಾನೆ. ಇದರಿಂದ ಗೊಂದಲಕ್ಕೆ ಒಳಗಾದ ನಿರೂಪಕಿ, ಪರಿಸ್ಥಿತಿಯನ್ನು ಸರಿಪಡಿಸಲು ಕರೆ ತುಂಡರಿಸಿದ್ದಾರೆ.

ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ: ಟಿಎಂಸಿ ಆಕ್ಷೇಪ ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ: ಟಿಎಂಸಿ ಆಕ್ಷೇಪ

ಬಿಬಿಸಿ ನೆಟ್ವರ್ಕ್ ಕಾರ್ಯಕ್ರಮವನ್ನು ಎಡಿಟ್ ಮಾಡಿದ್ದು, ಕೀಳು ಪದ ಪ್ರಯೋಗವನ್ನು ತೆಗೆದುಹಾಕಿದೆ. ಈ ಘಟನೆಗಾಗಿ ಪ್ರಿಯಾ ರೈ ಕ್ಷಮೆ ಕೋರಿದ್ದಾರೆ. ಆದರೆ ಇದುವರೆಗೂ ಬಿಬಿಸಿ ಕ್ಷಮೆ ಕೋರಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
A caller abuses PM Narendra Modi and his mother Hiraben during a radio programme conducted by BBC Asian Network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X