ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛಭಾರತದ ನಂತರ ಮೋದಿ ಬಾಯಲ್ಲಿ ಪರಿಸರದ ಮಾತು

|
Google Oneindia Kannada News

ನವದೆಹಲಿ, ನವೆಂಬರ್, 29: ಪರಿಸರ ಸಂರಕ್ಷಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನದಾಳವನ್ನು ಮನ್ ಕಿ ಬಾತ್ ನ 14ನೇ ಆವೃತ್ತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಕುರಿತಂತೆ ಅನೇಕ ಸಂಗತಿಗಳನ್ನು ಉಲ್ಲೇಖ ಮಾಡಿದ್ದಾರೆ.

ಡಿಸೆಂಬರ್ 14 ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ, ಇಂಧನ ಸಂರಕ್ಷಣೆ ಮತ್ತು ಸರಿಯಾದ ಬಳಕೆ ಪ್ರತಿಯೊಬ್ಬರ ಜವಾಬ್ದಾರಿ. ಎಲ್ ಇಡಿ ಬಲ್ಬ್ ಬಳಕೆ ಮಾಡುವುದು, ಸೌರಶಕ್ತಿಯ ಉಪಯೋಗ, ನಿಸರ್ಗ ಮೂಲಗಳನ್ನು ಬಳಕೆ ಮಾಡಕೊಳ್ಳುವುದನನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.[ಸೋನಿಯಾ, ಸಿಂಗ್ ರನ್ನು ಚಹಾಕ್ಕೆ ಆಹ್ವಾನಿಸಿದ ಮೋದಿ]

modi

ಮೋದಿ ಮನ್ ಕೀ ಬಾತ್ ನ ಹೈಲೈಟ್ಸ್ ಗಳು
* ಪ್ರವಾಹ ಪರಿಣಾಮ ತಮಿಳುನಾಡಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ
* ಕಲುಷಿತ ಹೊಗೆಯನ್ನು ಹೊರಸೂಸುವುದನ್ನು ತಪ್ಪಿಸಲು ಅಗತ್ಯ ಕ್ರಮ ಅನಿವಾರ್ಯ
* ವಿದ್ಯುತ್ ಉತ್ಪಾದನೆ ಮತ್ತು ಸರಿಯಾಸದ ಬಳಕೆ ದೇಶದ ಅಭಿವೃದ್ಧಿಗೆ ಪೂರಕ
* 2022ಕ್ಕೆ ನವೀಕರಣ ಮೂಲಗಳಿಂದ 175 ಗಿಗಾವಾಟ್ ವಿದ್ಯುತ್ ನ್ನು ಉತ್ಪಾದನೆ ಗುರಿ
* ಅಂಗಾಂಗ ದಾನ ಮಾಡಿ ವಿಕಲಚೇತನರ ಬಾಳಿಗೆ ಹೊಸ ಅರ್ಥ ಕಲ್ಪಿಸಿ.[ಮೋದಿ ಒಬ್ಬರಿಂದ ಬದಲಾವಣೆ ಸಾಧ್ಯವಿಲ್ಲ: ರಾಹುಲ್ ಗಾಂಧಿ]
* ವಿಕಲಚೇತನರ ಕಲ್ಯಾಣಕ್ಕೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಜಾವೇದ್‌ ಅಹಮದ್‌ ಅವರನ್ನು ನೆನೆಯಬೇಕಿದೆ.
* ಕಾನ್ಪುರದ ನೂರ್‌ ಜಹಾನ್‌ ಎಂಬುವರು ಬಡವರಿಗೆ ಸೋಲಾರ್‌ ಮೂಲಕ ವಿದ್ಯುತ್‌ ವಿತರಿಸುತ್ತಿದ್ದಾರೆ. ಇಂಥ ಕೆಲಸಗಳು ದೇಶಾದ್ಯಂತ ನಡೆಯಬೇಕು.
* ಇಂಧನ ಮತ್ತು ಶಕ್ತಿಯ ಸಮನಾದ ಬಳಕೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಂದೇ ತೆರನಾಗಿರಬೇಕು.
* ಮುದ್ರಾ ಯೋಜನೆ ಪ್ರಯೋಜನವನ್ನು ಸಕಲರು ಬಳಕೆ ಮಾಡಿಕೊಳ್ಳಬೇಕು.
* ಸಣ್ಣ ಪುಟ್ಟ ಕೈಗಾರಿಕೆಗಳಿಂದಲೇ ದೇಶದ ಅರ್ಥ ವ್ಯವಸ್ಥೆ ಮುಂದೆ ಸಾಗುತ್ತಿದೆ ಎಂಬುದನ್ನು ಯಾರೂ ಮರೆಯಬಾರದು.

English summary
Prime Minister Narendra Modi on Sunday, Nov 29, addressed the nation in the 14th edition of his monthly radio programme Mann Ki Baat. In his near 30-minute address, PM Modi talked on a variety of issues, including clean energy and global warming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X