ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುವಾಹಟಿ: ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಮೋದಿ ಒತ್ತು

|
Google Oneindia Kannada News

ಗುವಾಹಟಿ, ಫೆಬ್ರವರಿ 03: ಈಶಾನ್ಯ ರಾಜ್ಯಗಳ ಪ್ರಗತಿಯೇ Act East ಪಾಲಿಸಿಯ ಧ್ಯೇಯ, ಇದರಿಂದ ಏಷ್ಯಾ ಪೆಸಿಫಿಕ್ ದೇಶಗಳೊಂದಿಗೆ ಬಾಂಧವ್ಯ ಬೆಸೆಯುವುದು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಸ್ಸಾಮಿನ ಗುವಾಹಟಿಯಲ್ಲಿ ನಡೆಯುತ್ತಿರುವ ಗ್ಲೋಬಲ್ ಇನ್ವೆಸ್ಟರ್ಸ್ (ಜಾಗತಿಕ ಹೂಡಿಕೆದಾರರ) ಸಮಿತಿಯ ಉದ್ಘಾಟನಾ ಭಾಷಣದಲ್ಲಿ ಅವರು ಈಶಾನ್ಯ ರಾಜ್ಯಗಳ ಪ್ರಗತಿ ನಮ್ಮ ಗುರಿ ಎಂದರು.

ಪ್ರಧಾನಿ ಮೋದಿಯವರ ಎಕ್ಸಾಂ ವಾರಿಯರ್ಸ್ ಪುಸ್ತಕ ಇಂದು ಲೋಕಾರ್ಪಣೆಪ್ರಧಾನಿ ಮೋದಿಯವರ ಎಕ್ಸಾಂ ವಾರಿಯರ್ಸ್ ಪುಸ್ತಕ ಇಂದು ಲೋಕಾರ್ಪಣೆ

ಈ ಸಮಿತಿಯ ಟ್ಯಾಗ್ಲೈನ್ ಇರುವುದುದೇ, 'Advantage Assam: India's Expressway to ASEAN' ಎಂದು. ಈ ಸಮಿತಿಯ ಉದ್ದೇಶವನ್ನು ಈ ಸಾಲೇ ತಿಳಿಸುತ್ತದೆ ಎಂದು ಅವರು ಹೇಳಿದರು.

PM Modi addresses Global Investors' Summit in Assam

ಭಾರತ ಸರ್ವತೋಮುಖ ಅಭಿವೃದ್ಧಿ ಹೊಂದಬೇಕಾದರೆ, ರಾಷ್ಟ್ರದ ಎಲ್ಲಾ ರಾಜ್ಯಗಳಷ್ಟೇ ತ್ವರಿತವಾಗಿ ಈಶಾನ್ಯ ರಾಜ್ಯಗಳೂ ಬೆಳೆಯಬೇಕಿದೆ ಎಂದು ಅವರು ಇಂಗಿತ ವ್ಯಕ್ತಪಡಿಸಿದರು. ಬಿದಿರನ್ನು 'ಮರ' ಎಂದು ಪರಿಗಣಿಸುವ ಮೂಲಕ ಈಶಾನ್ಯ ರಾಜ್ಯಗಳ ಆದಾಯದ ಮೂಲವನ್ನೇ ಕಸಿಯಲಾಗಿತ್ತು. ಆದರೆ ನಮ್ಮ ಸರ್ಕಾರ ಬಿದಿರನ್ನು 'ಮರ'ದ ಪಟ್ಟಿಯಿಂದ ತೆಗೆದು ಹಾಕಿದೆ. ಇದು ಈಶಾನ್ಯ ಭಾಗದ ಜನರ ಬದುಕು ಬದಲಿಸುವುದು ಖಂಡಿತ ಎಂದು ಅವರು ಹೇಳಿದರು.

ಸಭೆಯಲ್ಲಿ ಭೂತಾನ್ ಪ್ರಧಾನಿ ಶೆರಿಂಗ್ ಟಾಬ್ಗೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

English summary
Prime Minister Narendra Modi on Saturday said northeastern India's progress is "at the heart of the country's Act East policy that focuses on increased ties with countries in the Asia-Pacific region, particularly the ASEAN countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X