ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಬಾಲ ಪುರಸ್ಕಾರ-2021: 32 ಮಕ್ಕಳೊಂದಿಗೆ ಮೋದಿ ಸಂವಾದ

|
Google Oneindia Kannada News

ನವದೆಹಲಿ, ಜನವರಿ 25: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರೀಯ ಬಾಲ ಪ್ರಶಸ್ತಿ ಪುರಸ್ಕೃತರೊಂದಿಗೆ ವಾಸ್ತವಿಕವಾಗಿ ಸಂವಾದ ನಡೆಸಿದರು.

2021ರ ಗಣರಾಜೋತ್ಸವ ಶುಭ ಸಂದರ್ಭದಲ್ಲಿ 32 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಗುತ್ತಿದೆ. ನಾವೀನ್ಯತೆ, ಪಾಂಡಿತ್ಯಶಾಸ್ತ್ರ, ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ, ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಮರ್ಥ್ಯ ಮತ್ತು ಅತ್ಯುತ್ತಮ ಸಾಧನೆಗೈದ ಮಕ್ಕಳಿಗೆ ಭಾರತ ಸರ್ಕಾರ, ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಗುತ್ತದೆ.

ಪ್ರಶಸ್ತಿಗೆ ಅರ್ಹರಾದ ಮಕ್ಕಳು 21 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶದ 32 ಜಿಲ್ಲೆಗಳಿಗೆ ಸೇರಿದ್ದಾರೆ. ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ 7 ಪ್ರಶಸ್ತಿಗಳು, 9 ಪ್ರಶಸ್ತಿಗಳನ್ನು ನಾವೀನ್ಯತೆಗಾಗಿ ಮತ್ತು 5 ಪ್ರಶಸ್ತಿಗಳನ್ನು ಶೈಕ್ಷಣಿಕ ಸಾಧನೆಗಾಗಿ ನೀಡಲಾಗಿದೆ. ಕ್ರೀಡಾ ವಿಭಾಗದಲ್ಲಿ 7 ಮಕ್ಕಳು, 3 ಮಕ್ಕಳನ್ನು ಶೌರ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಸಾಧನೆಗೆ ಒಂದು ಮಗುವನ್ನು ಗೌರವಿಸಲಾಗಿದೆ.

PM interacts with recipients of Rashtriya Bal Puraskar, 2021

ಕರ್ನಾಟಕದ ರಾಕೇಶ್‌ಕೃಷ್ಣ ಕೆ ಮತ್ತು ವೀರ್‌ ಕಶ್ಯಪ್, ನಾವಿನ್ಯತೆ ವಿಭಾಗದಲ್ಲಿ ಪ್ರಶಸ್ತಿ ಪುರಸ್ಕೃತರು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಾಸ್ಟರ್ ರಾಕೇಶ್‌ಕೃಷ್ಣ, 15 ವರ್ಷದ ಬಾಲಕ, 'ಸೀಡೋಗ್ರಾಫರ್' ಬೀಜ ಬಿತ್ತನೆ ಯಂತ್ರದ ಅವಿಷ್ಕಾರ. ಆರನೇ ವಯಸ್ಸಿನಲ್ಲಿ ಕೃಷಿಯ ನಾವಿನ್ಯತೆ, ಪರಿಸರ ಸ್ನೇಹಿ ಹಾಗು ಸಾಲು ಬಿತ್ತನೆಯಿಂದ ಶೇ.50ರಷ್ಟು ಜಲ ಸಂರಕ್ಷಣೆಗೆ ಒತ್ತು.

ಬೆಂಗಳೂರಿನ 10 ವರ್ಷದ ಮಾಸ್ಟರ್ ವೀರ್ ಕಶ್ಯಪ್, ಜಾಗತಿಕ ಕೋವಿಡ್-19 ಸೋಂಕಿನ ಕುರಿತು ಶಿಕ್ಷಣ ಮತ್ತು ಜಾಗೃತಿ ಮೂಡಿಸಲು 'ಕೊರೊನಾ ಯುಗ' ಆಟ ಅವಿಷ್ಕರಿಸಿದನು, ಸುರಕ್ಷತೆ ಮಾರ್ಗಸೂಚಿ ನಡವಳಿಕೆಗಳ ಬಗ್ಗೆ ಅರಿವು ಮೂಡಿಸುವ ಆಟ ಕೋವಿಡ್ ವಾರಿಯರ್ಸ್‌ಗೆ ಸಮರ್ಪಿತ.

ಕರ್ನಾಟಕದ ಇಬ್ಬರು ಬಾಲಕರಿಗೆ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿ ಕರ್ನಾಟಕದ ಇಬ್ಬರು ಬಾಲಕರಿಗೆ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿ

ಭಾರತದ ಗೌರವಾನ್ವಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಯುವ ಸಾಧಕರನ್ನು ಶ್ಲಾಘಿಸುವ ಸಂದೇಶವೊಂದರಲ್ಲಿ "2021 ರ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ, ವಿಜೇತರ ಪ್ರೇರೇಪಣೆ ಹಾಗು ಲಕ್ಷಾಂತರ ಮಕ್ಕಳ ಕನಸು, ಆಶಯ ಮತ್ತು ಅವರ ಮಿತಿಗಳನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತದೆ. ರಾಷ್ಟ್ರವನ್ನು ಯಶಸ್ಸು ಮತ್ತು ಸಮೃದ್ಧಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ನಾವೆಲ್ಲರೂ ವೈಯಕ್ತಿಕ ಪ್ರಯತ್ನ ಮಾಡೋಣ. "

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ಅವರು, 2020-21ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರಾದ ಬೆಂಗಳೂರಿನ ವೀರ್ ಕಶ್ಯಪ್ ಮತ್ತು ದಕ್ಷಿಣ ಕನ್ನಡದ ರಾಕೇಶ್ ಕೃಷ್ಣ ಹಾಗು ಪುರಸ್ಕೃತ ಮಕ್ಕಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಪುರಸ್ಕೃತ ಮಕ್ಕಳು ನಮ್ಮ ದೇಶದ ಹೆಮ್ಮೆ! ಎಂದು ತಮ್ಮ ಟ್ವೀಟ್‌ ಸಂದೇಶದಲ್ಲಿ ಅಭಿನಂದಿಸಿದ್ದಾರೆ

English summary
The Prime Minister Narendra Modi interacted with Pradhan Mantri Rashtriya Bal Puraskar (PMRBP) awardees today via video conferencing. Union Women & Child Development Minister, Smriti Zubin Irani was also present on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X