Breaking: ಚೀನಾ ಕ್ಯಾತೆ ಬಳಿಕ ಗಲ್ವಾನ್ ಕಣಿವೆ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ
ಲಡಾಖ್, ಜುಲೈ 3: ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ಸೇನೆ ನಡುವೆ ನಡೆದ ಘರ್ಷಣೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಜೂನ್ 15 ರಂದು ಚೀನಾ ಹಾಗೂ ಭಾರತದ ನಡುವೆ ಸಂಘರ್ಷ ನಡೆದಿತ್ತು, ಅದರಲ್ಲಿ 20 ಮಂದಿ ಭಾರತದ ಸೈನಿಕರು ಹುತಾತ್ಮರಾಗಿದ್ದರು.
ಲಡಾಖ್‌ನಲ್ಲಿ ಚೀನಾಗೆ ಭಾರತ ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ಲಡಾಖ್‌ನ ಭೂ ಪ್ರದೇಶಗಳ ಮೇಲೆ ಕಣ್ಣಿಟ್ಟವರಿಗೆ ಪ್ರತ್ಯುತ್ತರ ನೀಡಿದ್ದೇವೆ. ಭಾರತಕ್ಕೆ ಸ್ನೇಹವನ್ನು ಉಳಿಸಿಕೊಳ್ಳುವುದೂ ಗೊತ್ತಿದೆ, ಯಾರೂ ಕೂಡ ಭಾರತ ಮಾತೆಯನ್ನು ಘಾಸಿಗೊಳಿಸುವುದಕ್ಕೆ ಬಿಡುವುದಿಲ್ಲ ಎಂದು ನಮ್ಮ ಸೈನಿಕರು ಹೇಳಿರುವುದಾಗಿ ಮೋದಿ ತಿಳಿಸಿದ್ದರು.
ಭಾರತ-ಚೀನಾ ಸೇನಾ ಹಂತದ ಮಾತುಕತೆ: ಅನಿಶ್ಚಿತತೆಯಲ್ಲಿ ಅಂತ್ಯ
ಅಂದು ನಡೆದ ಘರ್ಷಣೆಯಲ್ಲಿ 43 ಚೀನಾದ ಸೈನಿಕರು ಸಾವನ್ನಪ್ಪಿದ್ದರು.ಬಳಿಕ ಚೀನಾ ಹಾಗೂ ಭಾರತದ ನಡುವೆ ಹಲವು ಬಾರಿ ಮಾತುಕತೆ ನಡೆದಿತ್ತು.
ಕೊನೆಗೆ ತಮ್ಮ ಸೇನೆಯನ್ನು ಹಿಂಪಡೆಯಲು ಚೀನಾ ಮುದಾಗಿದ್ದು, ವಾಪಸ್ ಕರೆಸಿಕೊಂಡಿತ್ತು. ಇದೀಗ ಸೇನೆಯ ಜನರಲ್ ಬಿಪಿನ್ ರಾವತ್, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.



Click it and Unblock the Notifications






















