ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕೇರ್ಸ್‌ನಿಂದ ಬಿಹಾರದಲ್ಲಿ ಎರಡು ಆಸ್ಪತ್ರೆಗೆ ಅನುದಾನ: ಕರ್ನಾಟಕಕ್ಕೆ ಎಷ್ಟು?

|
Google Oneindia Kannada News

ನವದೆಹಲಿ, ಆಗಸ್ಟ್ 24: ಬಿಹಾರದ ಪಟ್ನಾ ಮತ್ತು ಮುಜಫ್ಫರ್ಪುರಗಳಲ್ಲಿ ಡಿಆರ್‌ಡಿಒ ಮೂಲಕ 500 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಸಲುವಾಗಿ ನಿಧಿ ಹಂಚಿಕೆ ಮಾಡಲು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ನಿರ್ಧರಿಸಿದೆ. ಬಿಹಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಈ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

Recommended Video

Unlock 4.0 : ಚಿತ್ರಮಂದಿರ , ಮೆಟ್ರೋ , ಶಾಲಾ ಕಾಲೇಜು ಸೆಪ್ಟೆಂಬರ್‌ನಿಂದ ಪುನರಾರಂಭ ಸಾಧ್ಯತೆ | Oneindia Kannada

ಇದು ಬಿಹಾರದಲ್ಲಿನ ಕೋವಿಡ್ ಕೇರ್ ಸೌಲಭ್ಯದ ಸುಧಾರಣೆಗೆ ಮಹತ್ವದ ನೆರವು ನೀಡಲಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ. ಪಟ್ನಾದ ಬಿಹ್ತಾದಲ್ಲಿನ 500 ಹಾಸಿಗೆಗಳ ಆಸ್ಪತ್ರೆ ಸೋಮವಾರ ಉದ್ಘಾಟನೆಯಾಗುತ್ತಿದ್ದು, ಮುಜಫ್ಫರ್ಪುರದ ಮತ್ತೊಂದು ಆಸ್ಪತ್ರೆ ಶೀಘ್ರಲ್ಲಿಯೇ ಉದ್ಘಾಟನೆಯಾಗಲಿದೆ.

ಪಿಎಂ ಕೇರ್ಸ್ ಫಂಡ್: ಸಾಲು ಸಾಲು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್ಪಿಎಂ ಕೇರ್ಸ್ ಫಂಡ್: ಸಾಲು ಸಾಲು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್

ಈ ಆಸ್ಪತ್ರೆಗಳು ವೆಂಟಿಲೇಟರ್ ಸೌಲಭ್ಯವುಳ್ಳ 125 ಐಸಿಯು ಹಾಸಿಗೆಗಳು ಮತ್ತು 375 ಸಾಮಾನ್ಯ ಹಾಸಿಗೆ ಸೌಲಭ್ಯಗಳನ್ನು ಒಳಗೊಂಡಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಈ ಆಸ್ಪತ್ರೆಗೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಲಿದೆ.

PM Cares Fund Trust To Allocate Funds For 500 Be Makeshift Hospitals In Bihar

ಪಿಎಂ ಕೇರ್ಸ್ ನಿಧಿಯಿಂದ ಈ ಎರಡು ಆಸ್ಪತ್ರೆಗಳ ನಿರ್ಮಾಣಕ್ಕೆ ಎಷ್ಟು ಮೊತ್ತದ ನಿಧಿ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

'ಪಿಎಂ ಕೇರ್ಸ್ ನಿಧಿಯಿಂದ ಕರ್ನಾಟಕಕ್ಕೆ ಎಷ್ಟು ದುಡ್ಡು ಬರುತ್ತದೆ? ಪಿಎಂ ಕೇರ್ಸ್‌ನಿಂದ ಕರ್ನಾಟಕಕ್ಕೆ ಎಷ್ಟು ಕಾರ್ಯಕ್ರಮ ರೂಪಿಸ್ತಾರೆ?' ಎಂದು ಪ್ರಧಾನಿ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ಕರ್ನಾಟಕದ ರಾಜ್ಯಸಭೆ ಸಂಸದ ಜಿಸಿ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ಪಿಎಂ ಕೇರ್ಸ್ ನಿಧಿ ವರ್ಗಾವಣೆ ಇಲ್ಲ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ಪಿಎಂ ಕೇರ್ಸ್ ನಿಧಿ ವರ್ಗಾವಣೆ ಇಲ್ಲ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಜೆಡಿಯು ಮತ್ತು ಬಿಜೆಪಿ ಜತೆಯಾಗಿ ಚುನಾವಣೆ ಎದುರಿಸುವುದಾಗಿ ಈಗಾಗಲೇ ಘೋಷಿಸಲಾಗಿದೆ. ಹೀಗಾಗಿ ಈ ಅನುದಾನ ಹಂಚಿಕೆಯು ಚುನಾವಣೆಗೆ ಸಿದ್ಧತೆ ನಡೆಸುತ್ತಿರುವುದಕ್ಕೆ ಪುರಾವೆ ಎಂದು ಹೇಳಲಾಗಿದೆ.

English summary
PM Cares Fund Trust has decided to allocate funds for 500 bed makeshift hospitals at Patna and Muzaffarpur, Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X