ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಕದನ: PM-CARESಗೆ ದೇಣಿಗೆ ನೀಡುವುದು ಹೇಗೆ?

|
Google Oneindia Kannada News

ನವದೆಹಲಿ, ಏಪ್ರಿಲ್ 1: ಕೊರೊನಾವೈರಸ್ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರ್ಣಾಯಕ ಹೋರಾಟ ಮುಂದುವರೆಸಿದೆ. ಕೇಂದ್ರ ಸರ್ಕಾರವು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಾಗೂ ನೆರವು ಒದಗಿಸುತ್ತಿದೆ. ಕೊವಿಡ್19 ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡುವವರು ಪಿಎಂ ಕೇರ್ಸ್ ಫಂಡ್ ಖಾತೆಗೆ ತಮ್ಮ ಕೊಡುಗೆ ನೀಡಬಹುದು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೊರೊನಾ ವಿರುದ್ಧ ಹೋರಾಡಲು ಪಿಎಂಕೇರ್ ಫಂಡ್ ಗೆ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Fact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿFact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿ

ಮಾರ್ಚ್ 28ರಂದು ವಿಪತ್ತು ಸಂದರ್ಭದಲ್ಲಿ ಪರಿಹಾರ ಹಾಗೂ ನಾಗರಿಕರಿಗೆ ನೆರವು ನೀಡಲು ಪ್ರಧಾನಿಮಂತ್ರಿಗಳ ದೇಣಿಗೆ (PM CARES Fund) ಟ್ರಸ್ಟ್ ಸ್ಥಾಪನೆಯಾಗಿದೆ. ರಕ್ಷಣಾ ಸಚಿವ, ಗೃಹ ಸಚಿವ ಹಾಗೂ ವಿತ್ತ ಸಚಿವೆ ಈ ಟ್ರಸ್ಟಿನ ಸದಸ್ಯರಾಗಿದ್ದಾರೆ.

PM-CARES fund to help fight coronavirus: How to donate? Check details

ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೂ ಇದಕ್ಕೂ ವ್ಯತ್ಯಾಸ?
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ ಆರ್ ಎಫ್) 1948ರಲ್ಲಿ ಸ್ಥಾಪನೆಯಾಗಿದ್ದು, ಕೇಂದ್ರ ಸರ್ಕಾರದಿಂದ ನಿರಂತರ ಬಳಕೆಯಲ್ಲಿದೆ.2013ರಲ್ಲಿ ದೇಶದೆಲ್ಲೆಡೆ ಉಂಟಾದ ಉತ್ತರ ಭಾರತದ ಪ್ರವಾಹ, 2015ರಲ್ಲಿ ದಕ್ಷಿಣ ಭಾರತದ ಪ್ರವಾಹ ಹಾಗೂ 2019ರಲ್ಲಿ ಕೇರಳ-ಕರ್ನಾಟಕದ ಪ್ರವಾಹ ಪರಿಸ್ಥಿತಿಯಲ್ಲಿ ಬಳಸಲಾಗಿದೆ.

ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ

ಪಿಎಂ ಕೇರ್ಸ್ ಫಂಡ್ ದುರ್ಬಳಕೆಗೆ ಯತ್ನ

PM Cares Fundನ ಯುಪಿಐ ಐಡಿ pmcares@sbi. ಈ ಐಡಿಗೆ ಪೇಮೆಂಟ್ ಮಾಡಬಹುದು. ಈ ನಡುವೆ ಕೆಲವು ದುಷ್ಕರ್ಮಿಗಳು ನಕಲಿ ಯುಪಿಐ ಐಡಿ ಸೃಷ್ಟಿಸಿ, ಸಾರ್ವಜನಿಕರು ಕಳಿಸುವ ಹಣವನ್ನು ಲಪಟಾಯಿಸುವ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಡಿಜಿಟಲ್ ಪೇಮೆಂಟ್ ನಲ್ಲಿ ಅಧಿಕೃತ ಖಾತೆಯನ್ನು ಖಾತ್ರಿ ಪಡಿಸಿಕೊಂಡು ದೇಣಿಗೆ ನೀಡಿ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. pmcare ಅಥವಾ pmcares@ybl ಹೀಗೆ ಬೇರೆ ಯಾವುದೇ ಐಡಿ ಇದ್ದರೆ ಹಣ ಕಳಿಸಬೇಡಿ.

ಪಿಎಂ-ಕೇರ್ಸ್ ಫಂಡ್ ಗೆ ಹಣ ಕಳಿಸುವುದು ಹೇಗೆ?
ಪಿಎಂ-ಕೇರ್ಸ್ ಫಂಡ್ ಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಎ ಪೇಮೆಂಟ್, ಆರ್ ಟಿ ಜಿಎಸ್/ ಎನ್ ಇಎಫ್ಟಿ ಯಾವುದೇ ಡಿಜಿಟಲ್ ಪೇಮೆಂಟ್ ಮೂಲಕ ಹಣ ನೀಡಬಹುದು.

PM CARES Account Details:
Account Name: PM CARES
Account Number: 2121PM20202
IFSC Code: SBIN0000691
SWIFT Code: SBININBB104 Bank
Name & Branch: State Bank of India, New Delhi Main Branch
UPI ID: pmcares@sbi

PM CARES fund link: pmindia.gov.in

ಗಮನಿಸಿ: ಪಿಎಂ ಕೇರ್ಸ್ ಫಂಡ್ ಗೆ ನೀಡುವ ಪ್ರತಿ ದೇಣಿಗೆಯೂ 80(ಜಿ) ಅಡಿಯಲ್ಲಿ ಆದಾಯ ತೆರಿಗೆ ವಿನಾಯತಿಯನ್ನು ಹೊಂದಿರುತ್ತದೆ.

English summary
The Prime Minister's Citizen Assistance and Relief in Emergency Situations Fund (PM CARES Fund) was created on 28 March 2020 following the COVID-19 pandemic in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X