ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಸೆನ್ಸೆಕ್ಸ್ ಜಿಗಿತ, ಪ್ರಧಾನಿ ಸಿಂಗ್ ಪ್ರಾರ್ಥನೆ

By Mahesh
|
Google Oneindia Kannada News

ಬೆಂಗಳೂರು, ಮೇ.13: ಮತದಾನೋತ್ತರ ಚುನಾವಣಾ ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿ ನೇತೃತ್ವದ ಎನ್ ‌ಡಿಎ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಸುದ್ದಿ ಪ್ರಕಟವಾಗಿದೆ. ಇದರಿಂದ ದೇಶದ ಷೇರುಪೇಟೆಯಲ್ಲಿ ಸಂಚಲನ ಉಂಟಾಗಿದ್ದರೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸಚಿವಾಲಯದ ಸದಸ್ಯರಿಗೆ ವಿದಾಯ ಹೇಳಿದ್ದಾರೆ.

ಮುಂಬೈನಲ್ಲಿ ಷೇರು ಮಾರುಕಟ್ಟೆ ಸೋಮವಾರದಂತೆ ಮಂಗಳವಾರ ಬೆಳಗ್ಗೆ ಕೂಡಾ ವಹಿವಾಟಿನಲ್ಲಿ ಚೇತರಿಕೆ ಕಂಡುಕೊಂಡಿದೆ. ಬೆಳಗ್ಗೆ ಬಿಎಸ್ ಇನಲ್ಲಿ 23,921.91 ಅಂಕಗಳ ಮಟ್ಟಕ್ಕೇರಿತ್ತು. ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಕೂಡ ಇದೇ ವೇಳೆ ಇದೇ ಮೊದಲ ಬಾರಿಗೆಂಬಂತೆ 7,100ರ ಮಟ್ಟ ವನ್ನು ದಾಟಿ 7,116.20 ಅಂಕಗಳಲ್ಲಿ ಸ್ಥಿತವಾಗಿರುವುದು ದಾಖಲೆಯಾಗಿದೆ.

ಮೋದಿ ನೇತೃತ್ವದ ಮಾರುಕಟ್ಟೆ ಸ್ನೇಹಿ ಮತ್ತು ಆರ್ಥಿಕಾಭಿವೃದ್ಧಿ ಸಾಧನೆಯ ಸಂಕಲ್ಪ ಹೊಂದಿರುವ ಎನ್ ‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವಾಸನೆ ಹಿಡಿದಿರುವ ಶೇರು ಮಾರುಕಟ್ಟೆಗಳು ಕಳೆದ ಕೆಲವು ದಿನಗಳಿಂದಲೇ ಭಾರಿ ಏರುಗತಿಯಲ್ಲಿ ತೊಡಗಿವೆ.

ಇತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ 110 ಖಾಸಗಿ ಸಿಬ್ಬಂದಿಗಳು ಹಾಗೂ ಪ್ರಧಾನಿ ಸಚಿವಾಲಯದ 400ಕ್ಕೂ ಅಧಿಕ ಸಿಬ್ಬಂದಿಗಳಿಗೆ ಗುಡ್ ಬೈ ಹೇಳಿದ್ದಾರೆ. ಪ್ರಧಾನಿ ಸಿಂಗ್ ಅವರ ಇನ್ನಷ್ಟು ಚಿತ್ರಗಳು, ಬಿಎಸ್ ಇ ಸಿಬ್ಬಂದಿ ಚಿತ್ರಗಳು ಇಲ್ಲಿವೆ ನೋಡಿ...

ಬಿಎಸ್ ಇ, ಎನ್ಎಸ್ ಇ ಸೂಚ್ಯಂಕ ಏರಿಕೆ

ಬಿಎಸ್ ಇ, ಎನ್ಎಸ್ ಇ ಸೂಚ್ಯಂಕ ಏರಿಕೆ

ಮುಂಬೈನಲ್ಲಿ ಷೇರು ಮಾರುಕಟ್ಟೆ ಸೋಮವಾರದಂತೆ ಮಂಗಳವಾರ ಬೆಳಗ್ಗೆ ಕೂಡಾ ವಹಿವಾಟಿನಲ್ಲಿ ಚೇತರಿಕೆ ಕಂಡುಕೊಂಡಿದೆ.

ಪ್ರಧಾನಿ ಮನಮೋಹನ್ ಸಿಂಗ್ ಪ್ರಾರ್ಥನೆ

ಪ್ರಧಾನಿ ಮನಮೋಹನ್ ಸಿಂಗ್ ಪ್ರಾರ್ಥನೆ

ಇತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಬ್ಬಂದಿಗಳಿಗೆ ವಿದಾಯ ಹೇಳುವುದ್ದಕ್ಕೂ ಮುನ್ನ ಫಕ್ರುದ್ದೀನ್ ಅಲಿ ಅಹ್ಮದ್ ಮಾಜಿ ಅಧ್ಯಕ್ಷ ಮಜರ್ ಜತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು

ಭೋಪಾಲ್ ನಲ್ಲಿ ಸೆನ್ಸೆಕ್ಸ್ ಜಿಗಿತ ಸಂಭ್ರಮ

ಭೋಪಾಲ್ ನಲ್ಲಿ ಸೆನ್ಸೆಕ್ಸ್ ಜಿಗಿತ ಸಂಭ್ರಮ

ಭೋಪಾಲ್ ನಲ್ಲಿ ಸೆನ್ಸೆಕ್ಸ್ ಜಿಗಿತ(24000 ಅಂಕ)ಸಂಭ್ರಮಾಚರಣೆಯಲ್ಲಿ ತೊಡಗಿರುವ ಬಂಡವಾಳ ಹೂಡಿಕೆದಾರರು

 ಛಾದರ್ ಹೊದೆಸಿದ ಪ್ರಧಾನಿ

ಛಾದರ್ ಹೊದೆಸಿದ ಪ್ರಧಾನಿ

ಫಕ್ರುದ್ದೀನ್ ಅಲಿ ಅಹ್ಮದ್ ಜತೆ ಸಮಾಧಿಗೆ ಪವಿತ್ರ ಛಾದರ್ ಹೊದೆಸಿದ ಪ್ರಧಾನಿ

ನಿಫ್ಟಿ ಕೂಡ ದಾಖಲೆ ಪ್ರಮಾಣದಲ್ಲಿ ಏರಿಕೆ

ನಿಫ್ಟಿ ಕೂಡ ದಾಖಲೆ ಪ್ರಮಾಣದಲ್ಲಿ ಏರಿಕೆ

ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಕೂಡ ಇದೇ ವೇಳೆ ಇದೇ ಮೊದಲ ಬಾರಿಗೆಂಬಂತೆ 7,100ರ ಮಟ್ಟ ವನ್ನು ದಾಟಿ 7,116.20 ಅಂಕಗಳಲ್ಲಿ ಸ್ಥಿತವಾಗಿರುವುದು ದಾಖಲೆಯಾಗಿದೆ.

ಪ್ರಧಾನಿ ಮನಮೋಹನ್ ಹೊಸ ನಿವಾಸ

ಪ್ರಧಾನಿ ಮನಮೋಹನ್ ಹೊಸ ನಿವಾಸ

ಪ್ರಧಾನಿ ಮನಮೋಹನ್ ಸಿಂಗ್ ಅವರ ಹೊಸ ವಿಳಾಸ ಹೀಗಿದೆ ನಂ.3 ನೆಹರೂ ಮಾರ್ಗ, ನವದೆಹಲಿ. ಹೊಸ ಮನೆಯನ್ನು ಸಿದ್ದತೆಗೊಳಿಸುವಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. PTI Photo by Subhav Shukla

ಸಚಿವಾಲಯದ ಸದಸ್ಯರಿಗೆ ವಿದಾಯ

ಸಚಿವಾಲಯದ ಸದಸ್ಯರಿಗೆ ವಿದಾಯ

ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ 110 ಖಾಸಗಿ ಸಿಬ್ಬಂದಿಗಳು ಹಾಗೂ ಪ್ರಧಾನಿ ಸಚಿವಾಲಯದ 400ಕ್ಕೂ ಅಧಿಕ ಸಿಬ್ಬಂದಿಗಳಿಗೆ ಗುಡ್ ಬೈ ಹೇಳಿದ್ದಾರೆ

English summary
Todays news stories in pics around the world: The Sensex crossed the 24,000 points mark at Bombay Stock Exchange in Mumbai on Tuesday. Prime Minister Manmohan Singh today personally bid goodbye to his personal staff and Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X