ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಶಾಲೆಗೆ ಹೋಗ್ಬೇಕು ಹೆಲಿಕ್ಯಾಪ್ಟರ್‌ ಕಳಿಸಿ: ಆದಿತ್ಯನಾಥ್‌ಗೆ ಪತ್ರ

By Nayana
|
Google Oneindia Kannada News

ಮಥುರಾ, ಜು.25: ಕಳೆದ ಒಂದು ತಿಂಗಳಿನಿಂದ ಉತ್ತರ ಪ್ರದೇಶ, ದೆಹಲಿ, ಮುಂಬೈ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾಳೆ.ಆ ಪತ್ರದಲ್ಲೇನಿದೆ ನೀವೇ ಓದಿ.

ಸುರಕ್ಷತಾ ನಿಯಮ ಪಾಲಿಸದ 4,947 ಶಾಲಾ ವಾಹನಗಳ ಮೇಲೆ ಕೇಸ್‌ ಸುರಕ್ಷತಾ ನಿಯಮ ಪಾಲಿಸದ 4,947 ಶಾಲಾ ವಾಹನಗಳ ಮೇಲೆ ಕೇಸ್‌

ತುಂಬಾ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ ಆದರೂ ಎಷ್ಟು ದಿನ ಅಂತಾ ಶಾಲೆಗೆ ಹೋಗದೆ ಹಾಗೆ ಇರುವುದು, ನನಗೆ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ ಹಾಗಾಗಿ ಒಂದು ಹೆಲಿಕ್ಯಾಪ್ಟರ್‌ ಅಥವಾ ಬೋಟ್‌ ಕಳುಹಿಸಿ ಎಂದು 6 ನೇ ತರಗತಿ ವಿದ್ಯಾರ್ಥಿನಿ ಪತ್ರ ಬರೆದಿದ್ದಾಳೆ.

Please provide Helicopter to go to school

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿನ ಮರ್ಹಾಲ ಗ್ರಾಮದ ಭಾವನಾ, ಸಿಎಂ ಆದಿತ್ಯನಾಥ್‌ಗೆ ಪತ್ರ ಬರೆದ ಹುಡುಗಿ. ಸರ್ಕಾರವು ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೊಳಿಸಿದೆ. ಯೋಜನೆಯ ಬಗ್ಗೆ ಸಾಕಷ್ಟು ಪ್ರಚಾರವನ್ನೂ ನೀಡುತ್ತಿದ್ದಾರೆ. ಆದರೆ ಮಥುರಾದ ಅನೇಕ ಭಾಗಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದೇ ಕಷ್ಟವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.

Please provide Helicopter to go to school

ಗ್ರಾಮದಲ್ಲಿ ಸರಿಯಾದ ರಸ್ತೆಯಾಗುವವರೆಗೆ, ಶಾಲೆಗೆ ಹೋಗಲು ಅಗತ್ಯ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದ್ದು, ಸಾಧ್ಯವಾಗುದಾದರೆ, ಶಾಲೆಗೆ ತೆರಳಲು ಹೆಲಿಕಾಪ್ಟರ್‌ನ ವ್ಯವಸ್ಥೆ ಮಾಡುವಂತೆ ಹೇಳಿದ್ದಾಳೆ ಬಾಲಕಿಯ ಈ ಪತ್ರಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

English summary
Mathura student Bhavana wrote a letter to Uttarpradesh chief minister Yogi adityanath that make arrangements of helicopter or boat to go to school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X