ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಪತ್ನಿಯನ್ನು ಸುರಕ್ಷಿತವಾಗಿಡಿ: ರಾಬರ್ಟ್ ವಾದ್ರಾ ಭಾವನಾತ್ಮಕ ಬರಹ

|
Google Oneindia Kannada News

ನವದೆಹಲಿ, ಫೆ 11: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯ ಪುತ್ರಿ ಪ್ರಿಯಾಂಕ, ಅತ್ತ ಲಕ್ನೋದಲ್ಲಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದರೆ, ಇತ್ತ ಅವರ ಅಳಿಯ ರಾಬರ್ಟ್ ವಾದ್ರಾ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ಎದುರಿಸುತ್ತಿದ್ದಾರೆ.

ಈ ನಡುವೆ, ರಾಬರ್ಟ್ ವಾದ್ರಾ ಭಾವನಾತ್ಮಕ ಬರಹವೊಂದನ್ನು ಫೇಸ್ ಬುಕ್ ನಲ್ಲಿ ಹಾಕಿರುವ ಉದ್ದೇಶ ಎನ್ನುವ ಚರ್ಚೆ ಆರಂಭವಾಗಿದೆ. ಮನಿ ಲಾಂಡ್ರಿಂಗ್ ಕೇಸಿನಲ್ಲಿ ಸತತ ವಿಚಾರಣೆ ಎದುರಿಸಿದ ಬಳಿಕ ಸತ್ಯಕ್ಕೆ ಯಾವತ್ತೂ ಜಯ ಸಿಗುತ್ತದೆ ಎಂದು ವಾದ್ರಾ ಪೋಸ್ಟ್ ಮಾಡಿದ್ದರು.

ಸತ್ಯಕ್ಕೆ ಯಾವಾಗಲೂ ಗೆಲುವು, ರಾಬರ್ಟ್ ವಾದ್ರಾ ಫೇಸ್ಬುಕ್ ಪೋಸ್ಟ್ ಸತ್ಯಕ್ಕೆ ಯಾವಾಗಲೂ ಗೆಲುವು, ರಾಬರ್ಟ್ ವಾದ್ರಾ ಫೇಸ್ಬುಕ್ ಪೋಸ್ಟ್

ಈಗ ಇನ್ನೊಂದು ಬರಹವನ್ನು ಹಾಕಿರುವ ವಾದ್ರಾ ತಮ್ಮ ವಾಲ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, " " ಪಿ ಉತ್ತರಪ್ರದೇಶ ಹಾಗೂ ದೇಶದ ಜನರ ಸೇವೆಗಾಗಿ ಆರಂಭವಾಗಿರುವ ಈ ನಿನ್ನ ರಾಜಕೀಯ ಪ್ರಯಾಣಕ್ಕೆ ನನ್ನ ಶುಭ ಹಾರೈಕೆಗಳು"

Please Keep Her Safe’: Robert Vadra Pens Emotional Message as Priyanka Begins Political Journey

ಮುಂದುವರಿಯುತ್ತಾ, "ನೀನು ನನ್ನ ಉತ್ತಮ ಸ್ನೇಹಿತೆ, ಉತ್ತಮ ಪತ್ನಿ ಹಾಗೂ ನಮ್ಮ ಇಬ್ಬರು ಮಕ್ಕಳಿಗೆ ಉತ್ತಮ ತಾಯಿಯಾಗಿರುವೆ. ದೇಶದಲ್ಲಿ ಪ್ರಸಕ್ತ ಕ್ರೂರ ರಾಜಕೀಯ ವಾತಾವರಣವಿದೆ ಎನ್ನುವುದನ್ನು ನಾನು ಬಲ್ಲೆ. ಆದರೆ, ದೇಶದ ಜನರ ಸೇವೆ ಮಾಡುವುದು ಆಕೆಯ ಧರ್ಮ".

ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ? ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ?

"ಈಗ ನನ್ನ ಪತ್ನಿ ಪ್ರಿಯಾಂಕಳನ್ನು ಭಾರತೀಯರ ಕೈಗೆ ನೀಡುತ್ತಿದ್ದೇನೆ. ದಯವಿಟ್ಟು ಆಕೆಯನ್ನು ಸುರಕ್ಷಿತವಾಗಿಡಿ" ಎಂದು ರಾಬರ್ಟ್ ವಾದ್ರಾ ಫೇಸ್ ಬುಕ್ ಪೋಸ್ಟ್ ಮೂಲಕ ವಿನಂತಿಸಿಕೊಂಡಿದ್ದಾರೆ. ವಾದ್ರಾ ಈ ಪೋಸ್ಟಿಗೆ ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.

ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ಜಾರಿ ನಿರ್ದೇಶನಾಲಯದಿಂದ ಮೂರು ಬಾರಿ ಸಮನ್ಸ್‌ ಪಡೆದಿದ್ದ ಉದ್ಯಮಿ ವಾದ್ರಾ ಅವರು ಸತತ ಎಂಟು ಗಂಟೆಗಳ ಕಾಲ ವಿಚಾರಣೆಗೊಳಪಟ್ಟಿದ್ದರು. ಆದರೆ, ಬಂಧನ ಭೀತಿಯಿಂದ ತಾತ್ಕಾಲಿಕವಾಗಿ ಪಾರಾಗಿದ್ದು, ಫೆ.16ರ ತನಕ ಅವರನ್ನು ಬಂಧಿಸುವಂತಿಲ್ಲ.

English summary
Priyanka Gandhi, who began her campaign for the Lok Sabha elections on Monday with a mega roadshow in Lucknow, got an emotional message from her husband Robert Vadra on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X