• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಿಂಗಳಿಗೆ 3 ಸಾವಿರ ದುಡಿಮೆಯ ಕ್ಷೌರಿಕರ ಮಗ ಬದುಕಲು ನೆರವು ಬೇಕಿದೆ

"ಕ್ಷೌರಿಕನ ಮಗನಾದ ತುಹಿರ್ ಎಂದಿಗೂ ತಾನು ಕನಸು ಕಾಣುವುದನ್ನು ನಿಲ್ಲಿಸಿರಲಿಲ್ಲ. ತುಹಿರ್ ತಾನು ವೈದ್ಯನಂತೆ ಕಲ್ಪಿಸಿಕೊಂಡು ಆಟ ಆಡುವ ಮೂಲಕ ಸಂತೋಷ ಪಡುತ್ತಿದ್ದ. ನೆರೆಹೊರೆಯವರೆಲ್ಲಾ ಅವನ ಆಸಕ್ತಿ ಹಾಗೂ ಆಟಗಳನ್ನು ಕಂಡು ಪ್ರಶಂಸಿಸುತ್ತಿದ್ದರು. ವೈದ್ಯರ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಬಿಳಿಯ ಕೋಟ್ ಅವನಿಗೆ ಅಚ್ಚುಮೆಚ್ಚು. ಜೀವನದಲ್ಲಿ ಮುಂದೊಂದು ದಿನ ವೈದ್ಯರ ಕೋಟ್ ಧರಿಸಬೇಕು ಎನ್ನುವುದು ಅವನ ಕನಸು. ಆದರೆ ಅವನ ಕನಸನ್ನು ಕ್ಯಾನ್ಸರ್ ಎಂಬ ಮಾರಿಯೂ ದ್ವಂಸ ಮಾಡಿದೆ. ದೇಹದ ತೂಕವನ್ನು ಕಳೆದುಕೊಂಡಿರುವ ನಮ್ಮ ಮಗನನ್ನು ಇದೀಗ ನೋಡಲು ಆಗುವುದಿಲ್ಲ ಎಂದು ನೆರವಿಗಾಗಿ ಎದುರು ನೋಡುತ್ತಿರುವ ಅವನ ಪಾಲಕರು ಕಣ್ಣೀರು ಇಡುತ್ತಾರೆ."

ತುಹೀರ್ 8 ವರ್ಷದ ಬಾಲಕ. ಆದರೂ ಅವನ ಬುದ್ಧಿ ಬಹಳ ತೀಕ್ಷ್ಣ. ಅವನ ಪಾಸಿಟಿವ್ ಥಿಂಕಿಂಗ್ ಹಾಗೂ ಬೆಳವಣಿಗೆಯಿಂದ ಪಾಲಕರು ಸಂತೋಷವಾಗಿದ್ದರು. ಅವನನ್ನು ಒಬ್ಬ ದೊಡ್ಡ ವ್ಯಕ್ತಿಯನ್ನಾಗಿ ಬೆಳೆಸಬೇಕು, ಉತ್ತಮ ವೈದ್ಯನಾಗಿ ನೋಡಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ. ಆದರೆ ಅದೃಷ್ಟ ಹಾಗೂ ಹಣೆ ಬರಹ ಎನ್ನುವುದು ಅವರ ಆಸೆಗಳ ಮೇಲೆ ತಣ್ಣೀರನ್ನು ಎರಚಿವೆ.

ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ಈ ದಂಪತಿಗೆ ತಮ್ಮ ಮಗ ಒಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎನ್ನುವುದು ತಿಳಿಯಿತು.

ಅಂದು ಶನಿವಾರ. ತನ್ನ ತಪಾಸಣೆಯ ಕಿಟ್ ತೆಗೆದುಕೊಂಡು ನೆರೆಹೊರೆಯನ್ನು ಸುತ್ತಿಕೊಂಡು ಬಂದ ತುಹೀರ್ ಗೆ ಸ್ವಲ್ಪ ಆಯಾಸ ಆದಂತೆ ಭಾಸವಾಯಿತು. ಸ್ವಲ್ಪ ಹೊತ್ತು ಮಲಗಿಕೊಂಡ. ತಿಂಡಿ ತಿನ್ನಿಸಲು ಅವನ ಬಳಿ ನಾನು ಕುಳಿತುಕೊಂಡಿದ್ದೆ. ಆಗ ನನ್ನ ಕಣ್ಣು ಅವನ ಹೊಟ್ಟೆಯ ಕಡೆ ಹೋಯಿತು. ಅವನ ಹೊಟ್ಟೆಯ ಒಂದು ಭಾಗ ಊದಿಕೊಂಡಿರುವುದು ತಿಳಿಯಿತು. ಅದರ ಆಕಾರವೇ ಬೇರೆ ರೀತಿ ಇತ್ತು ಎನ್ನುವುದು ಅರಿವಿಗೆ ಬಂತು. ಆರೋಗ್ಯದಲ್ಲಿ ಏನೋ ಬದಲಾವಣೆ ಆಗಿದೆ, ಅದನ್ನು ವೈದ್ಯರಿಗೆ ಮೊದಲು ತೋರಿಸಬೇಕು ಎನ್ನುವುದು ಅನಕ್ಷರಸ್ಥರಾಗಿದ್ದರೂ ನಮಗೆ ಗಮನಕ್ಕೆ ಬಂತು. ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಲು ದೌಡಾಯಿಸಿದೆವು.

ವೈದ್ಯರಲ್ಲಿ ತುಹೀರ್ ನ ಆರೋಗ್ಯ ಸಮಸ್ಯೆಯನ್ನು ತೋರಿಸಿದೆವು. ತುಹೀರ್ ಗೆ 2 ಎಕ್ಸ ರೇ ಹಾಗೂ ನಾಲ್ಕು ಸಮಾಲೋಚನೆಯನ್ನು ನಡೆಸಿದರು. ಸಾಕಷ್ಟು ಪರೀಕ್ಷೆ ನಡೆಸಿದ ಬಳಿಕ ತುಹೀರ್ ಒಂದು ಬಗೆಯ ಗಡ್ಡೆಯಿಂದ ಬಳಲುತ್ತಿದ್ದಾನೆ. ಆದಷ್ಟು ಬೇಗ ಆಸ್ಪತ್ರೆಗೆ ದಾಖಲಿಸಿ ಎಂದರು. ಅಲ್ಲದೆ ಸೂಕ್ತ ಚಿಕಿತ್ಸೆ ನೀಡಲು ಕೋಲ್ಕತ್ತಾದಲ್ಲಿ ಯಾವುದೇ ಸವಲತ್ತುಗಳಿಲ್ಲ. ಆದಷ್ಟು ಬೇಗ ಚೆನ್ನೈಗೆ ಹೋಗಿ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು.

ಇಷ್ಟು ದಿನ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದ ನಮಗೆ ವಾಸ್ತವದ ಪರಿಸ್ಥಿತಿ ಹಾಗೂ ಗೊಂದಲವು ಆತಂಕವನ್ನು ಸೃಷ್ಟಿಸಿತು. ಆಘಾತಕ್ಕೆ ಒಳಗಾದ ನಮಗೆ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಎಂದೂ ನೋಡದ ಚೆನ್ನೈ ನಗರಕ್ಕೆ ಹೋಗಬೇಕಾಯಿತು. ಬಹುತೇಕ ವರ್ಷಗಳಿಂದಲೂ ಹಳ್ಳಿಯಲ್ಲಿ ಜೀವಿಸುತ್ತಿದ್ದ ನಮಗೆ ಚೆನ್ನೈ ನಗರದಲ್ಲಿ ವಾಸಿಸುವ ಪರಿಸ್ಥಿತಿ ಎದುರಾಯಿತು.

ಯಾರ ಪರಿಚಯವೂ ಇಲ್ಲದ ಈ ಊರಿನಲ್ಲಿ ಉಳಿದು, ನಮ್ಮ ಮಗನ ಚಿಕಿತ್ಸೆ ಕೊಡಿಸಬೇಕಾಗಿದೆ. ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ನೀಡಿರುವ ಹಣವನ್ನು ಈ ವರೆಗಿನ ಚಿಕಿತ್ಸೆ ಹಾಗೂ ತಪಾಸಣೆಗೆ ವ್ಯಯಿಸಿದ್ದೇವೆ. ಇದೀಗ ಕೈಯಲ್ಲಿ ಹಣವಿಲ್ಲದೆಯೇ ಹೊಸ ಊರಿನಲ್ಲಿ ನೆಲೆಸಬೇಕಾಗಿದೆ.

ಹಳ್ಳಿಯಿಂದ ನಗರಕ್ಕೆ ದೌಡಾಯಿಸಿದ ನಮಗೆ ಮಗನ ಆರೋಗ್ಯದ ಸುಧಾರಣೆಯೊಂದೇ ಮುಖ್ಯ ಉದ್ದೇಶವಾಗಿದೆ. ಮಗನ ಜೀವನವನ್ನು ಹಿಂಡಿ ಹಿಪ್ಪೆಯನ್ನಾಗಿಸುತ್ತಿರುವ ಅನಾರೋಗ್ಯವನ್ನು ಗುಣಪಡಿಸಲು ಸಾಕಷ್ಟು ಹೋರಾಟವನ್ನು ನಡೆಸುತ್ತಿದ್ದೇವೆ.

ಚೆನ್ನೈ ಆಸ್ಪತ್ರೆಗೆ ಮಗನನ್ನು ದಾಖಲಿಸಿದ ನಂತರ ವೈದ್ಯರು ಸೂಕ್ತ ತಪಾಸಣೆ ನಡೆಸಿ ವಿಲ್ಮಸ್ ಟ್ಯೂಮರ್/ಗಡ್ಡೆ ಎಂದು ಹೇಳಿದ್ದಾರೆ. ಇದೊಂದು ಅಪರೂಪದ ರೋಗ ಎಂದು ವೈದ್ಯರು ತಿಳಿಸಿದ್ದಾರೆ. ಅದು ನಮ್ಮ ಮಗನ ಎಡ ಮೂತ್ರಪಿಂಡದಲ್ಲಿ ಇದೆ. ಈ ಸಮಸ್ಯೆಯು ಸಾಮಾನ್ಯವಾಗಿ 5 ವರ್ಷದ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ತುಹೀರ್ 9 ವರ್ಷ ದಾಟುತ್ತಿರುವ ಹುಡುಗ. ಅವನಿಗೆ ಈ ಸಮಸ್ಯೆ ಉಂಟಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಆರು ತಿಂಗಳುಗಳ ಕಾಲ ಕೀಮೋಥೆರಪಿ ಮಾಡುವುದರ ಮೂಲಕ ಅವನ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಹೇಳಿದ್ದಾರೆ.

ಮಗನಿಗೆ ಆರು ತಿಂಗಳ ಕಾಲ ಚಿಕಿತ್ಸೆ ನೀಡಿದರೆ ಗುಣಮುಖನಾಗುತ್ತಾನೆ ಎನ್ನುವುದು ಸ್ವಲ್ಪ ಸಮಾಧಾನವನ್ನುಂಟು ಮಾಡಿತಾದರೂ ಬರಿಗೈಯಲ್ಲಿ ಇರುವ ನನಗೆ ಚಿಕಿತ್ಸೆಗೆ ಹಣ ಹೊಂದಿಸುವುದು ಹೇಗೆ ಎನ್ನುವ ದುಃಖ ಕಾಡುತ್ತಿದೆ. ಬಡತನದಿಂದ ಬಂದ ನಾವು ನಗರದಲ್ಲಿ ಉಳಿದುಕೊಂಡಿದ್ದೇವೆ. ಒಂದು ಹೊತ್ತು ಮಾತ್ರ ಊಟ ಮಾಡುವ ಮೂಲಕ ಮಗನ ಚಿಕಿತ್ಸೆಗೆ ಹಣ ಕೂಡಿಸುತ್ತಿದ್ದೇವೆ ಎಂದು ಕಣ್ಣೀರಿಡುತ್ತಿದ್ದಾರೆ ಪಾಲಕರು.

ತುಹೀರ್ ನ ಸಹೋದರಿಯು ಆಗಾಗ ಅಣ್ಣನ ಹೊಟ್ಟೆಯನ್ನು ಒತ್ತುವ ಮೂಲಕ ಆರೋಗ್ಯ ಸರಿಯಾಗಬಹುದು ಎಂದು ನೋಡುತ್ತಾಳೆ. ಈ ಸ್ಥಿತಿಯನ್ನು ನಮ್ಮ ಕಣ್ಣಿನಲ್ಲಿ ನೋಡಲಾಗುತ್ತಿಲ್ಲ. ಹಳ್ಳಿಯಲ್ಲಿ ಕ್ಷೌರಿಕನಾಗಿ ದುಡಿಯುತ್ತಿದ್ದ ನನಗೆ ತಿಂಗಳಿಗೆ ಹೆಚ್ಚೂ ಕಮ್ಮಿ 3000 ಆದಾಯವಿತ್ತು. ಈಗಾಗಲೇ ಮಗನ ಆರೈಕೆಗಾಗಿ 50 ಸಾವಿರ ರೂಪಾಯಿ ವ್ಯಯಿಸಿದ್ದೇವೆ. ಇದೀಗ ಚಿಕಿತ್ಸೆಗಾಗಿ ಸಂಬಂಧಿಕರಲ್ಲಿ ಪಡೆದ ಹಣವೆಲ್ಲಾ ಖಾಲಿಯಾಗಿದೆ.

ಸಹಾಯ ಮಾಡಲು ನೀವು ಏನು ಮಾಡಬೇಕು?

ಪಶ್ಚಿಮ ಬಂಗಾಳದ ಹಳ್ಳಿಯಿಂದ 1800 ಕಿ.ಮೀ. ದೂರದಲ್ಲಿರುವ ಚೆನ್ನೈನ ಅಪೋಲೋ ಆಸ್ಪತ್ರೆಗೆ ತುಹೀರ್ ನನ್ನು ದಾಖಲಿಸಿದ್ದಾರೆ. ತುಹೀರ್ ನ ಹೊಟ್ಟೆಯು ಅನಾರೋಗ್ಯದಿಂದ ದಿನದಿಂದ ದಿನಕ್ಕೆ ಊದಿಕೊಳ್ಳುತ್ತಿದೆ. ಅವನ ಪಾಲಕರು ಕೈಲಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಾಕಷ್ಟು ಹಣ ಹೊಂದಿಸಲು ಸಾಧ್ಯವಾಗದೆ ಇರುವುದರಿಂದ ಜನರ ಮುಂದೆ ಸಹಾಯ ಹಸ್ತಕ್ಕಾಗಿ ಕೇಳಿಕೊಳ್ಳುತ್ತಿದ್ದಾರೆ.

ನೀವು ನೀಡುವ ಒಂದೊಂದು ರುಪಾಯಿಯು ತುಹೀರ್ ನ ಜೀವನಕ್ಕೆ ಸಂಜೀವಿನಿಯಾಗುವುದು. ಬಡತನದಲ್ಲಿ ಮಗನನ್ನೇ ಆಸ್ತಿ ಎಂದುಕೊಂಡ ಆ ತಂದೆ- ತಾಯಿಗೆ ಅವರ ಮಗನನ್ನು ಆರೋಗ್ಯವಂತನಾಗಿ ವಾಪಸ್ ಪಡೆಯಲು ಸಹಕರಿಸಿದ ಪುಣ್ಯ ನಿಮಗೆ ದೊರೆಯುವುದು. ನಿಮ್ಮ ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಕೂಡ ಈ ವಿಚಾರವನ್ನು ಹಂಚಿಕೊಂಡು, ಹಣ ಸಹಾಯ ಮಾಡಬಹುದು. ನಿಮ್ಮ ಒಂದು ಸಹಾಯದಿಂದ ಆ ಪುಟ್ಟ ಜೀವ ಹೊಸ ಜೀವನವನ್ನು ಕಂಡುಕೊಳ್ಳುವುದು. ಜೊತೆಗೆ ಅವನ ಕನಸನ್ನು ನನಸಾಗಿಸಲು ಸಹಾಯ ಮಾಡಿದಂತಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X