• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮ ಒಂದು ಹೊತ್ತಿನ ದುಬಾರಿ ಊಟ ಪುಟ್ಟ ಮಕ್ಕಳ ಪಾಲಿನ 'ಅನ್ನಾಮೃತ'

9 ವರ್ಷದ ಪುಟ್ಟ ಬಾಲಕಿ ಮೀನಾಕ್ಷಿಗೆ ಸದಾ ತನ್ನ ಸ್ನೇಹಿತರ ಜತೆ ಆಟವಾಡುವ ಆಸೆ. ಆದರೆ ಅದು ಸಾಧ್ಯವಿಲ್ಲ. ಏಕೆಂದರೆ ಆ ಸಮಯದಲ್ಲಿ ಅವಳು ತನ್ನ ತಾಯಿ ಲಕ್ಷ್ಮಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾಳೆ.

ಲಕ್ಷ್ಮಿಯ ತಾಯಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿ ದಿನ ಮುಂಜಾನೆಯಿಂದ ತಡರಾತ್ರಿಯ ತನಕ ಕೆಲಸ ಮಾಡುತ್ತಲೇ ಇರುತ್ತಾರೆ ಲಕ್ಷ್ಮಿ. ಅಲ್ಲದೆ ಅವರ ಕೆಲಸಕ್ಕೆ ಎಂದಿಗೂ ವಿರಾಮ ಎನ್ನುವುದಿಲ್ಲ. ಭಾನುವಾರ ಕೂಡ ಎಂದಿನಂತೆ ಕೆಲಸವು ಮುಂದುವರಿಯುತ್ತದೆ.

ಕೆಲವೊಮ್ಮೆ ತಾನು ಕೆಲಸ ಮಾಡುವ ಮನೆಯವರು ನೀಡಿರುವ ಉಳಿದ ಪದಾರ್ಥಗಳನ್ನು ಅಥವಾ ಆಹಾರವನ್ನು ಮನೆಗೆ ತರುತ್ತಾರೆ. ಮನೆಗೆಲಸದ ಮಧ್ಯೆ ಲಕ್ಷ್ಮಿ ತನಗಾಗಿ ಹಾಗೂ ತನ್ನ ಮಗಳಿಗಾಗಿ ಊಟ-ತಿಂಡಿಯನ್ನು ಸಿದ್ಧಪಡಿಸಬೇಕು. ಇಲ್ಲಿ ದೇಣಿಗೆ ನೀಡುವ ಮೂಲಕ ಇಂತಹ ಬಡತನದಲ್ಲಿರುವ ಮಕ್ಕಳಿಗೆ ಸಹಾಯ ಮಾಡಿ ಮಗಳಿಗೆ ತಂದೆ ಹಾಗೂ ತಾಯಿಯಾಗಿ ಎರಡೂ ಪಾತ್ರವನ್ನು ಲಕ್ಷ್ಮಿ ಒಬ್ಬರೇ ನಿರ್ವಹಿಸುತ್ತಾ, ನಿತ್ಯವೂ ಸಾಕಷ್ಟು ಕೆಲಸವನ್ನು ಮಾಡುತ್ತಾರೆ. ತಾಯಿ ಸದಾ ಕೆಲಸದಲ್ಲಿಯೇ ತೊಡಗಿರುವುದರಿಂದ ಮೀನಾಕ್ಷಿಗೆ ತನ್ನ ಅಮ್ಮನೊಂದಿಗೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ ತನ್ನ ವಿದ್ಯಾಭ್ಯಾಸ ಮುಂದುವರಿಸಲು ಶಾಲೆಗೆ ಹೋಗಲು ಸಮಯ ಇಲ್ಲದಂತಾಗಿದೆ. ಇವೆಲ್ಲದರ ನಡುವೆ ಮೀನಾಕ್ಷಿಯ ಬಾಲ್ಯವು ಮರೆಯಾಗುತ್ತಿದೆ. ಇದು ಮೀನಾಕ್ಷಿಯ ತಪ್ಪಾ? ಅಥವಾ ಅವಳ ತಾಯಿಯ ತಪ್ಪಾ? ಯಾರು ಈ ಪರಿಸ್ಥಿತಿಗೆ ಹೊಣೆ ಎನ್ನುವುದು ಒಂದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಆದರೆ, ಮೀನಾಕ್ಷಿ ಅದೃಷ್ಟವು ಚೆನ್ನಾಗಿತ್ತು. ಲಕ್ಷ್ಮಿ ಕೆಲಸ ಮಾಡುವ ಮನೆಯ ಮಾಲೀಕರೊಬ್ಬರು ನ್ಯಾಷನಲ್ ಬಾಲ ಕಾರ್ಮಿಕ ಯೋಜನೆ (ಎನ್‍ ಸಿಎಲ್ ಪಿ)ಯೊಂದಿಗೆ ನಂಟು ಹೊಂದಿದ್ದರು. ಅವರು ಲಕ್ಷ್ಮಿ ಜೀವನ ಹಾಗೂ ಆಕೆ ಮಗಳ ಪರಿಸ್ಥಿತಿಯ ಬಗ್ಗೆ ಎನ್‍ ಸಿಎಲ್ ಪಿ ತಂಡಕ್ಕೆ ತಿಳಿಸಿದರು. ಇದೀಗ ಮೀನಾಕ್ಷಿ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ.

ನಿತ್ಯವೂ ಶಾಲೆಗೆ ಹೋಗುತ್ತಾಳೆ. ತನ್ನ ಹೊಸ ಸ್ನೇಹಿತರೊಂದಿಗೆ ಆಟವಾಡುತ್ತಾಳೆ. ಅಲ್ಲದೆ ಆ ಶಾಲೆಯಲ್ಲಿ ಮಧ್ಯಾಹ್ನದ ಅನ್ನಾಮೃತ ಯೋಜನೆಯ ಊಟವನ್ನು ಮಾಡುತ್ತಾಳೆ. ಈ ಊಟವು ಅವಳಿಗೆ ದೈನಂದಿನದ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಅಲ್ಲದೆ ಅವಳ ತಾಯಿಯ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ.

ಇದೀಗ ಲಕ್ಷ್ಮಿ ಸಂಜೆಯ ಮೊದಲೇ ತನ್ನ ದೈನಂದಿನ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಜೊತೆಗೆ ತನ್ನ ಮಗಳ ಜೊತೆ ಒಂದಿಷ್ಟು ಸಮಯವನ್ನು ಕಳೆಯುತ್ತಾರೆ. ಮೀನಾಕ್ಷಿಯು ಮುಂದೊಂದು ದಿನ ಶಿಕ್ಷಕಿಯಾಗಬೇಕು ಎನ್ನುತ್ತಾಳೆ. ಜೊತೆಗೆ ತನ್ನ ತಾಯಿಯು ಕೆಲಸ ಮಾಡುವುದರಿಂದ ವಿರಾಮ ದೊರೆಯಲಿ ಎಂದು ಬಯಸುತ್ತಾಳೆ.

"ಅನ್ನಾಮೃತ" ಯೋಜನೆಯು ಇಂತಹ ಸಾವಿರಾರು ಮಕ್ಕಳನ್ನು ಪೋಷಿಸುತ್ತದೆ. ಬಡತನದ ಬೇಗೆಯಲ್ಲಿ ಬೇಯುವವರಿಗೆ ಹಸಿವಿನ ನೋವನ್ನು ತಣಿಸುತ್ತಿದೆ. ಜೊತೆಗೆ ಇಂತಹ ಕಷ್ಟದಲ್ಲಿ ಇರುವ ಕುಟುಂಬಕ್ಕೆ ಸಹಾಯವನ್ನು ಮಾಡುತ್ತದೆ.ಮೀನಾಕ್ಷಿಯಂತಹ ಅನೇಕ ಮಕ್ಕಳು ಬಾಲ ಕಾರ್ಮಿಕ ಸರಪಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡುತ್ತಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಅಡಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ.

ಅಂತಹ ಮಕ್ಕಳಿಗೆ "ಅನ್ನಾಮೃತ"ಯೋಜನೆಯಡಿ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದೇವೆ. ಅದೆಷ್ಟೋ ಮಕ್ಕಳಿಗೆ ಅದು ದಿನದ ಏಕೈಕ ಊಟವಾಗಿದೆ ಎನ್ನುವುದು ದುಃಖದ ಸಂಗತಿ.ಬಾಲಕಾರ್ಮಿಕರ ವಿರುದ್ಧ ಹೋರಾಡಲು ಹಾಗೂ ಹಸಿವಿನ ಸರಪಳಿಯನ್ನು ಮುರಿಯಲು ಮೀನಾಕ್ಷಿಯಂತಹ ಮಕ್ಕಳಿಗೆ ಸಹಾಯ ಮಾಡಿ. ಮಕ್ಕಳನ್ನು ಕೆಲಸದಲ್ಲಿ ತೊಡಗಿಸಬೇಡಿ. ನೀವು ಸಾಮಾನ್ಯವಾಗಿ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮೀನಾಕ್ಷಿಯಂತಹ ಮಕ್ಕಳನ್ನು ನೋಡಿರುತ್ತೀರಿ. ಅಂತಹ ಮಕ್ಕಳ ಕುಟುಂಬವು ಕಷ್ಟದಲ್ಲಿಯೇ ಮುಳುಗಿರುತ್ತದೆ. ಹಸಿವು ಹಾಗೂ ಬದುಕಿನ ಅಗತ್ಯ ವಸ್ತುಗಳಿಗಾಗಿ ಹೋರಾಡುತ್ತಿರುತ್ತದೆ. ಅಲ್ಲದೆ ಹಸಿವಿನಿಂದ ಸಾಯುತ್ತಿರಬಹುದು.

ನೀವು ಸಹಾಯ ಮಾಡುವುದರ ಮೂಲಕ ಇಂತಹ ಮಕ್ಕಳಿಂದ ಧನ್ಯವಾದದ ಸಂತೋಷದ ನುಡಿಯನ್ನು ಕೇಳಿ.

ಹಸಿವಿನ ಕಾರಣದಿಂದ ಯಾವುದೇ ಮಗು ತನ್ನ ವಿದ್ಯಾಭ್ಯಾಸವನ್ನು ತ್ಯಾಗ ಮಾಡುವಂತಾಗಬಾರದು. ಅಂತಹ ಮಕ್ಕಳ ನೆರವಿಗಾಗಿ ಅನ್ನಾಮೃತ ಯೋಜನೆ ಇದೆ. ನಾವು ಒಂದು ಹೊತ್ತಿನ ವಿಲಾಸಿ-ದುಬಾರಿ ಊಟವನ್ನು ತ್ಯಾಗ ಮಾಡಿದರೆ ಮೀನಾಕ್ಷಿಯಂತಹ ಹಲವಾರು ಮಕ್ಕಳು ಒಂದು ಹೊತ್ತಿನ ಊಟ ಮಾಡಲು ನೆರವಾಗಬಹುದು.

ಒಂದು ದುಬಾರಿ ಊಟವು ನಮಗೆ ಯಾವುದೇ ದೊಡ್ಡ ವ್ಯತ್ಯಾಸವನ್ನು ಮಾಡುವುದಿಲ್ಲ. ಆ ಒಂದು ತ್ಯಾಗದಿಂದ 10 ಮಕ್ಕಳ ಒಂದು ಬಾರಿಯ ಊಟವನ್ನು ಒದಗಿಸಿದ ಪುಣ್ಯ ನಿಮಗೆ ದೊರೆಯುವುದು.ನೀವು ನೀಡುವ ಒಂದು ಕೊಡುಗೆಯಿಂದ ಯಾವುದೋ ಒಂದು ಮಗುವಿನ ಭವಿಷ್ಯ ನಿರ್ಮಾಣವಾಗುವುದು. ಭಾರತೀಯ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80ಜಿ ಅಡಿಯಲ್ಲಿ ನೀವು ಶೇಕಡಾ 50ರಷ್ಟು ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

ಹತ್ತು ಮಕ್ಕಳ- 4,500 ರೂ.

ಒಂದು ತರಗತಿಯ ವಿದ್ಯಾರ್ಥಿಗಳಿಗೆ (30 ಮಕ್ಕಳಿಗೆ)- 13,500 ರೂ.

ಮೂರು ತರಗತಿಯ ವಿದ್ಯಾರ್ಥಿಗಳಿಗೆ(90 ಮಕ್ಕಳಿಗೆ) - 40,500 ರೂ.

ಒಂದು ಪ್ರಾಥಮಿಕ ಶಾಲೆ (100 ಮಕ್ಕಳು) - 45,000 ರೂ.

ಎರಡು ಪ್ರಾಥಮಿಕ ಶಾಲೆ (200 ಮಕ್ಕಳು) - 90,000 ರೂ.

ಒಂದು ಸರ್ಕಾರಿ ಶಾಲೆ - 2,50,000 ರೂ.

ಕೊಡುಗೆ ನೀಡಿ:

ಅನ್ನಾಮೃತದ ಕುರಿತು:

ಅನ್ನಾಮೃತ ಯೋಜನೆಯು "ಶಿಕ್ಷಣ ಹಾಗೂ ಅನಿಯಮಿತ ಆಹಾರವನ್ನು ನೀಡುವುದು" ಹೆಚ್ಚೆಚ್ಚು ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುವುದು. ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಭಾರತದ ಉದ್ದಗಲಕ್ಕೂ ಹಸಿವು ಮತ್ತು ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ.

ಈ ನಿಟ್ಟಿನಲ್ಲಿಯೇ ಅನ್ನಾಮೃತ ಯೋಜನೆ ಅಥವಾ ಕಾರ್ಯಕ್ರಮವು ಆರೋಗ್ಯಕರವಾದ ಪೌಷ್ಟಿಕಾಂಶ ಮತ್ತು ಶುದ್ಧ ಆಹಾರವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಆರೋಗ್ಯಕರ ಊಟಕ್ಕಾಗಿ ಮಗು ಶಾಲೆಗೆ ಹಾಜರಾಗುತ್ತದೆ. ಇದರೊಟ್ಟಿಗೆ ಉತ್ತಮ ಶಿಕ್ಷಣ ಪಡೆದುಕೊಳ್ಳುತ್ತದೆ. ಅಂಥ ಮಗು ಭವಿಷ್ಯದಲ್ಲಿ ದೇಶದ ಆಸ್ತಿಯಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X