ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನ-ಮರಣದ ಹೋರಾಟ ನಡೆಸುತ್ತಿರುವ ಮೊಮ್ಮಗನನ್ನು ಉಳಿಸಿ

By Staff
|
Google Oneindia Kannada News

ಅದು 2017 ಡಿಸಂಬರ್ ತಿಂಗಳ 4ನೇ ತಾರೀಖು. ಎರಡು ದೂರವಾಣಿಯ ಕರೆಯಿಂದಾಗಿ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆ. ಅದೇ ದಿನ ಬಂದ ಮೂರನೇ ಕರೆಯು ಅನಿರೀಕ್ಷಿತವಾಗಿತ್ತು. ಏಕೆಂದರೆ ಅದು ಗರ್ಭಿಣಿಯಾಗಿದ್ದ ನನ್ನ ಮಗಳ ತುರ್ತುಪರಿಸ್ಥಿತಿ.

ಮಗಳು ಸುಪ್ತಾವಸ್ಥೆಯಲ್ಲಿದ್ದಾಳೆ ಎನ್ನುವುದನ್ನು ಕೇಳುತ್ತಿದ್ದಂತೆಯೇ ನನ್ನ ಕೈಗಳು ನಡುಗಲು ಪ್ರಾರಂಭಿಸಿದ್ದವು. ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಸಿ-ಸೆಕ್ಷನ್ ಹೆರಿಗೆ ಮಾಡಿಸಬೇಕು ಎಂದು ಹೇಳಿದರು. ಅದು ನನ್ನ ಮಗಳ ಚೊಚ್ಚಲ ಹೆರಿಗೆ. ಅಂತಹ ಸಮಯದಲ್ಲಿ ಮಗುವಿನ ಜೀವವು ಅತ್ಯಂತ ಅಪಾಯದ ಪರಿಸ್ಥಿತಿಯಲ್ಲಿದೆ ಎಂದು ಹೇಳಿದ ಮಾತು ಬಹಳ ಬೇಸರವನ್ನು ತಂದೊಡ್ಡಿತ್ತು.

real incident stroy

ನಿತ್ಯವು ನಾನು ತಾಳ್ಮೆಯ ಚಾಲನೆ ಮಾಡಿದ್ದೇನೆ. ಅದರಂತೆಯೇ ನನ್ನ ಬಳಿ ಎಷ್ಟು ಬೇಗ ಸಾಧ್ಯವಾಗುತ್ತದೆಯೋ ಅಷ್ಟು ಬೇಗ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿ, ಜೀವ ಉಳಿಸಿದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಈ ಪರಿಯನ್ನು ಕಂಡ ಅನೇಕರು ನನ್ನನ್ನು ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದವು ಇಂದು ನನ್ನ ಮೊಮ್ಮಗನನ್ನು ಉಳಿಸಿತು ಎಂದು ಭಾವಿಸುತ್ತೇನೆ.

ಇದೀಗ ನನ್ನ ಮೊಮ್ಮಗನನ್ನು ರೇನ್‍ಬೋ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಎನ್‍ಐಸಿಯು ಮತ್ತು ಆಮ್ಲಜನಕದ ಪೂರೈಕೆ ಮಾಡುವುದರ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಚಿಕಿತ್ಸೆಯ ವೆಚ್ಚವು 8.8 ಲಕ್ಷ ರೂ. ತಗಲುವುದು. ಅಷ್ಟೊಂದು ಹಣವನ್ನು ಪೂರೈಸುವಷ್ಟು ನನ್ನ ಆರ್ಥಿಕ ಸ್ಥಿತಿಯು ಉತ್ತಮವಾಗಿಲ್ಲ.

ದೇಣಿಗೆಯ ರೂಪದಲ್ಲಿ ನೀವು ಸಹಾಯವನ್ನು ಮಾಡಿದರೆ ನನ್ನ ಮೊಮ್ಮಗ ಜೀವನ-ಮರಣದ ಹೋರಾಟದಲ್ಲಿ ಜಯಗಳಿಸಬಹುದು.

real incident stroy

ನನ್ನ ಹೆಸರು ರಹೆಮಾನ್‍. ನಾನು ಈ ಮಗುವಿನ ಅಜ್ಜ. ಹೈದರಾಬಾದ್ ನ ಗ್ಲೋಬಲ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ 6000 ರೂ. ತಿಂಗಳ ಆದಾಯ. ಇದೀಗ ಮೂರು ಜನರನ್ನು ಹೊಂದಿರುವ ಕುಟುಂಬದ ಜವಾಬ್ದಾರಿ ಹೊರುವ ಭಾರ ನನ್ನ ಮೇಲಿದೆ.

ಮಗಳ ಮೊದಲ ಹೆರಿಗೆಯನ್ನು ತವರು ಮನೆಯಲ್ಲಿ ಮಾಡಿಸುವುದು ಒಂದು ಸಂಪ್ರದಾಯ. ಇದೀಗ ಸ್ನೇಹಿತರು, ಸಂಬಂಧಿಕರ ಸಹಾಯದಿಂದ 2.5 ಲಕ್ಷ ರೂಪಾಯಿಯನ್ನು ಹೊಂದಿಸಿದ್ದೇನೆ. ಇದಕ್ಕೆ ನನ್ನ ಅಳಿಯ ಹಾಗೂ ಅವರ ಮನೆಯವರು ಸಹ ಸಹಾಯ ಮಾಡಿದ್ದಾರೆ. ಎನ್‍ಐಸಿಯುನಲ್ಲಿ ಪ್ರತಿದಿನದ ವೆಚ್ಚ ರೂ. 10,000. ನನ್ನ ತಿಂಗಳ ಸಂಬಳಕ್ಕಿಂತ ಹೆಚ್ಚಿದೆ. ನಾನು ಪ್ರತಿ ತಿಂಗಳು ಬಾಡಿಗೆ ಮತ್ತು ಸಾಲದ ಇಎಮ್‍ಐಅನ್ನು ಸಹ ನೀಡಬೇಕಿದೆ.

real incident stroy

ಹಣದ ಅವಶ್ಯಕತೆಯನ್ನು ಸರಿದೂಗಿಸಲು ಕೆಲಸದ ಅವಧಿಗಿಂತ ಹೆಚ್ಚು ಸಮಯಗಳ ಕಾಲ, ಅಂದರೆ ಒಟ್ಟು 12 ಗಂಟೆಗಳ ಕಾಲ ದುಡಿಯುತ್ತಿದ್ದೇನೆ. ಎರಡು ದಿನ ನಿರಂತರವಾಗಿ ದುಡಿದಿದ್ದೇನೆ. ಇದೀಗ ಮೊಮ್ಮಗುವನ್ನು ದಾಖಲಿಸಿರುವ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗದಿಂದ ಕರೆಗಳು ಬರುತ್ತಿವೆ. ಆದರೆ ಅವರಿಗೆ ನಾನು ಸೂಕ್ತ ರೀತಿಯಲ್ಲಿ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ರಾತ್ರಿಯೆಲ್ಲಾ ಈ ವಿಚಾರಗಳು ನನ್ನ ತಲೆಯಲ್ಲಿ ಸುತ್ತುತ್ತಿರುತ್ತವೆ. ಕೆಲವೊಮ್ಮೆ ರಾತ್ರಿ ನಾನು ಅಳುತ್ತಿರುತ್ತೇನೆ.

ರಹೆಮಾನ್‍ ತನ್ನ ಮೊಮ್ಮಗುವಿನ ಚಿಕಿತ್ಸೆಗಾಗಿ ಹೆಣಗಾಡುತ್ತಿದ್ದಾರೆ. ಅವರ ಕಷ್ಟಕ್ಕೆ ನೀವು ದೇಣಿಗೆ ನೀಡುವುದರ ಮೂಲಕ ಸಹಾಯ ಮಾಡಬಹುದು.

real incident stroy

ಆಸ್ಪತ್ರೆಯಲ್ಲಿ ನನ್ನ ಸಹೋದ್ಯೋಗಿಗಳನ್ನು ಹೊರತು ಪಡಿಸಿದರೆ ನನ್ನ ಕಷ್ಟಗಳನ್ನು ಹೇಳಿಕೊಳ್ಳಲು ಯಾರೂ ಇಲ್ಲ. ನನ್ನ ಮಗಳು ತಾಯಿಯಾಗಿ ಮೊಮ್ಮಗನ ಆರೈಕೆ ಮಾಡುತ್ತಿದ್ದಾಳೆ ಅವಳ ಬಳಿಯೂ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತೆಯೇ ನನ್ನ ಹೆಂಡತಿಯೂ ಕಣ್ಣೀರಿಡುತ್ತಾಳೆ. ಆ ಕಾರಣಕ್ಕೆ ಅವಳಲ್ಲೂ ಹೇಳಿಕೊಳ್ಳಲು ಆಗುತ್ತಿಲ್ಲ. ಅವರ ಮುಂದೆ ಹೋಗುವಾಗ ನಾನು ನಗು ಮುಖದಿಂದಲೇ ಹೋಗುತ್ತೇನೆ.

real incident stroy

ನಿತ್ಯವೂ ನನ್ನ ಕೆಲಸ ಮುಗಿದ ನಂತರ ಮಗಳು ಹಾಗೂ ಮೊಮ್ಮಗುವನ್ನು ನೋಡಲು ಹೋಗುತ್ತೇನೆ. ಜೊತೆಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಇದೀಗ ನನ್ನ ಮೊಮ್ಮಗು 1 ಕೆ.ಜಿ. ತೂಕವಿದೆ. ಅದೀಗ ಬಹಳ ದುರ್ಬಲವಾಗಿದೆ. ಹಾಗಾಗಿ ವೈದ್ಯರು ಎನ್‍ಐಸಿಯು ಅಲ್ಲಿ 4-5 ವಾರಗಳ ಕಾಲ ಇಡಬೇಕು ಎಂದು ಹೇಳಿದ್ದಾರೆ.

ನನ್ನ ಮೊಮ್ಮಗುವಿನ ಕಷ್ಟವನ್ನು ಪರಿಹರಿಸು ಮತ್ತು ಉಜ್ವಲ ಭವಿಷ್ಯ ನೀಡೆಂದು ಆ ಭಗವಂತನಾದ ಅಲ್ಲಾನಿಗೆ ಪ್ರಾರ್ಥಿಸುತ್ತೇನೆ. ಇನ್ನೂ ಈ ಮಗುವಿಗೆ ಹೆಸರನ್ನು ಇಟ್ಟಿಲ್ಲ. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಆದ ಮೇಲೆ, ಸಹಾಯಕ ಜನರ ಆಧಾರದ ಮೇಲೆ ಹೆಸರಿಡುತ್ತೇನೆ. ಈ ಒಂದು ಮುಗ್ಧ ಆತ್ಮವನ್ನು ಉಳಿಸಲು ನನಗೆ ಸಹಾಯ ಮಾಡಿ.

ಕೆಟ್ಟೋ (Ketto) ನಿಧಿಗೆ ದಾನ ಮಾಡುವುದರ ಮೂಲಕ ರಹೆಮಾನ್‍ಗೆ ಸಹಾಯ ಮಾಡಬಹುದು.

English summary
After Saving Many Lives, This Ambulance Driver Struggles To Save His Own Grandson
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X