ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಟ್ರಂಪ್ ಭೇಟಿ ವೇಳೆ ದಾಳಿಗೆ ಜೈಷ್ ಉಗ್ರರ ಸಂಚು

|
Google Oneindia Kannada News

ನವದೆಹಲಿ,ಫೆಬ್ರವರಿ 19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ದಾಳಿ ನಡೆಸಲು ಜೈಷ್ ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ಜೈಷ್-ಎ-ಮೊಹಮ್ಮದ್ , ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಉಗ್ರರು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುವ ವೇಳೆ ಉಗ್ರ ದಾಳಿ ನಡೆಸಲು ಹೊಂಚು ಹಾಕಿದ್ದವು. ಡೊನಾಲ್ಡ್ ಟ್ರಂಪ್ ಫೆಬ್ರವರಿ 23-24ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಅಹಮದಾಬಾದ್‌ನಲ್ಲಿ "ನಮಸ್ತೇ ಟ್ರಂಪ್" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೊಡ್ಡಣ್ಣ ಭೇಟಿ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್!ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್!

ಅಮೆರಿಕಾದ ಅಧ್ಯಕ್ಷರಾದ ಬಳಿಕ ಟ್ರಂಪ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು , ಟ್ರಂಪ್ ಭೇಟಿ ಉಭಯ ರಾಷ್ಟ್ರಗಳ ಜನರಿಗೆ ಅನುಕೂಲವಾಗಲಿದೆ ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಟ್ರಂಪ್ ಸಂಚರಿಸುವ ರಸ್ತೆಯ ಬದಿಯಲ್ಲಿರುವ ಸ್ಲಂಗೆ ಅಡ್ಡಲಾಗಿ ಗೋಡೆ ಕಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

Planning Mega Terror Attack During Donald Trumps India Trip

ಗುಜರಾತ್ ಹಾಗೂ ಅಹಮದಾಬಾದ್ ಸುಂದರವಾಗಿ ಕಾಣುವಂತೆ ಮಾಡಲು ಗುಜರಾತ್ ಸರ್ಕಾರ ಈಗಾಗಲೇ 100 ಕೋಟಿ ರೂ. ವ್ಯಯಿಸಿದೆ.

English summary
Amid the full-scale preparations for US President Donald Trump’s India trip, sources in the intelligence agencies have revealed that several terror groups are planning to attack the high-profile visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X