ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಹುದ್ದೆ ಕೊಟ್ಟರೂ ಸೈ ಎಂದು ನಿರೂಪಿಸಿದ ಆಪತ್ಬಾಂಧವ ಪಿಯೂಶ್ ಗೋಯಲ್

|
Google Oneindia Kannada News

Recommended Video

Union Budget 2019 : ಮೋದಿ ಸರ್ಕಾರದ ಆಪತ್ಬಾಂಧವ ಎನಿಸಿಕೊಂಡ ಪಿಯೂಶ್ ಗೋಯಲ್ | Oneindia Kannada

ಹಾಲೀ ನರೇಂದ್ರ ಮೋದಿ ಸರಕಾರದ ಮಧ್ಯಂತರ ಬಜೆಟ್ -2019 ಅನ್ನು ಹೆಚ್ಚುವರಿ ಹಣಕಾಸು ಸಚಿವರಾಗಿರುವ, ಪಿಯೂಶ್ ಗೋಯಲ್ ಸಮರ್ಥವಾಗಿ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಆ ಮೂಲಕ, ಮೋದಿ ಸರಕಾರದ 'ಆಪತ್ಬಾಂಧವ' ಎನಿಸಿಕೊಂಡಿದ್ದಾರೆ.

ಪಿಯೂಶ್ ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದು ಇದೇನು ಹೊಸದಲ್ಲ. ಕಳೆದ ಸುಮಾರು ಐದು ವರ್ಷಗಳಲ್ಲಿ ಆಯಕಟ್ಟಿನ ಹಲವು ಖಾತೆಗಳನ್ನು ಪಿಯೂಶ್ ನಿಭಾಯಿಸಿ, ವಹಿಸಿದ ಎಲ್ಲಾ ಖಾತೆಗಳಲ್ಲಿ ತಮ್ಮ ಛಾಪನ್ನು ಮೂಡಿಸಿದವರು.

ಆದಾಯ ತೆರಿಗೆ ಮಿತಿ ಏರಿಕೆ: ಮಧ್ಯಮ ವರ್ಗ ಫುಲ್ ಜೋಶ್!ಆದಾಯ ತೆರಿಗೆ ಮಿತಿ ಏರಿಕೆ: ಮಧ್ಯಮ ವರ್ಗ ಫುಲ್ ಜೋಶ್!

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದ ವೇದಪ್ರಕಾಶ್ ಗೋಯಲ್ ಅವರ ಪುತ್ರರಾಗಿರುವ ಪಿಯೂಶ್, ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಇವರ ತಾಯಿ ಚಂದ್ರಕಾಂತ ಗೋಯಲ್ ಕೂಡಾ ಮೂರು ಬಾರಿ ಮಹಾರಾಷ್ಟ್ರ ಅಸೆಂಬ್ಲಿಯ ಸದಸ್ಯರಾಗಿದ್ದವರು.

ಬಜೆಟ್ 2019: ಐದು ವರ್ಷಗಳಲ್ಲಿ ಒಂದು ಲಕ್ಷ ಡಿಜಿಟಲ್ ಹಳ್ಳಿಗಳ ನಿರ್ಮಾಣ

ಚಾರ್ಟರ್ಡ್ ಅಕೌಂಟೆಂಟ್ ಪದವಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನ ಮತ್ತು ಮುಂಬೈ ವಿವಿಯ ಕಾನೂನು ವಿಭಾಗದಲ್ಲೂ ಎರಡನೇ ರ‍್ಯಾಂಕ್ ಪಡೆದ ಹಿರಿಮೆ ಪಿಯೂಶ್ ಗೋಯಲ್ ಅವರದ್ದು. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ನಲ್ಲೂ ಬೋರ್ಡ್ ಸದಸ್ಯರಾಗಿ ಪಿಯೂಶ್ ಕೆಲಸ ನಿರ್ವಹಿಸಿದ್ದರು.

28ವರ್ಷದ ಸುದೀರ್ಘ ರಾಜಕೀಯ ಜೀವನ

28ವರ್ಷದ ಸುದೀರ್ಘ ರಾಜಕೀಯ ಜೀವನ

ತಮ್ಮ 28ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ, ಬರೀ ಸಚಿವರಾಗಿಯೇ ಅಲ್ಲದೇ, ಬಿಜೆಪಿಯ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಪಿಯೂಶ್ ಅವರನ್ನು ನದಿಜೋಡಣೆಯ ವಿಚಾರದ ಟಾಸ್ಕ್ ಫೋರ್ಸ್ ತಂಡದಲ್ಲೂ ನೇಮಕ ಮಾಡಲಾಗಿತ್ತು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿಯಾಗಿಯೂ ಇವರು ಕೆಲಸ ನಿರ್ವಹಿಸಿದ್ದರು.

ವಿದ್ಯುತ್ ಖಾತೆಯಲ್ಲಿ ಗಮನಾರ್ಹ ಬದಲಾವಣೆ

ವಿದ್ಯುತ್ ಖಾತೆಯಲ್ಲಿ ಗಮನಾರ್ಹ ಬದಲಾವಣೆ

2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಮೊದಲಿಗೆ ವಿದ್ಯುತ್ ಖಾತೆಯ ಸಚಿವರಾಗಿದ್ದ ಪಿಯೂಶ್, ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದು ಹಳ್ಳಿಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಹತ್ತರ ಕ್ರಮಗಳನ್ನು ತೆಗೆದುಕೊಂಡಿದ್ದರು. ಕಗ್ಗತ್ತಿನಲ್ಲಿದ್ದ ಸುಮಾರು ಹದಿನೆಂಟು ಸಾವಿರಕ್ಕೂ ಹೆಚ್ಚಿನ ಹಳ್ಳಿಗಳಿಗೆ ಇವರ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.

ಲೋಕಸಭಾ ಚುನಾವಣೆಯ ದಿಕ್ಕು ಬದಲಿಸುವ ಬಜೆಟ್ ನ 5 ಘೋಷಣೆಗಳು

ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ

ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ

ಫಾಸ್ಟ್ ಟ್ರ್ಯಾಂಕಿಂಗ್ ಸಿಸ್ಟಂ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಬಹುತೇಕ ಯಶಸ್ವಿಯಾಗಿತ್ತು. ಪ್ರಮುಖವಾಗಿ ದೇಶದ ವಿದ್ಯುತ್ ಸ್ಥಾವರಗಳಿಗೆ ಶಾಸ್ವತವಾಗಿ ಕಲ್ಲಿದ್ದಲು ಕೊರತೆ ಬರದಂತೆ ಸೂಕ್ರ ಕ್ರಮವನ್ನೂ ಪಿಯೂಶ್ ತೆಗೆದುಕೊಂಡಿದ್ದರು. ಉದಯ್ (ಉಜ್ವಲ್ ಡಿಸ್ಕಾಂ ಅಶೂರೆನ್ಸ್ ಯೋಜನೆ) ಮತ್ತು ಕಡಿಮೆ ಬೆಲೆಯ, ಉತ್ತಮ ಬಾಳಿಕೆ ಬರುವ ಉಜಾಲ ಸ್ಕೀಂ ಅನ್ನು ಆಯಾಯ ರಾಜ್ಯಗಳ ಸಹಯೋಗದೊಂದಿಗೆ ಪಿಯೂಶ್ ಜಾರಿಗೆ ತಂದರು.

ಮೋದಿ ಸರಕಾರದ ದೊಡ್ಡ ಸಾಧನೆ ಇಂಧನ ಇಲಾಖೆಯದ್ದು

ಮೋದಿ ಸರಕಾರದ ದೊಡ್ಡ ಸಾಧನೆ ಇಂಧನ ಇಲಾಖೆಯದ್ದು

ಬಿಜೆಪಿ ಹೇಳುವಂತೆ, ಮೋದಿ ಸರಕಾರದ ದೊಡ್ಡ ಸಾಧನೆ ಇಂಧನ ಇಲಾಖೆಯದ್ದು. ಇದೆಲ್ಲಾ ಸಾಧ್ಯವಾದದ್ದು ನನ್ನ ಸಹದ್ಯೋಗಿ ಪಿಯೂಶ್ ಅವರಿಂದ ಎಂದು ಮೋದಿ ಹಲವಾರು ಬಾರಿ ಹೇಳಿದ್ದರು. ಕಲ್ಲಿದ್ದಲು ಬ್ಲಾಕ್ ಮಾರಾಟವನ್ನು ಪಾರದರ್ಶಕವಾಗಿ ಇ-ಆಕ್ಷನ್ ಮೂಲಕ ಜಾರಿಗೆ ತರುವ ಕೆಲಸವನ್ನೂ ಪಿಯೂಶ್ ಮಾಡಿದ್ದರು.

ಭಾರತದ ಭವ್ಯ ಭವಿಷ್ಯತ್ತಿಗೆ 10 ಪ್ರಮುಖ ಅಂಶಗಳ 'ವಿಷನ್ 2030'

ರೈಲ್ವೇ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತಂದ ಖ್ಯಾತಿ

ರೈಲ್ವೇ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತಂದ ಖ್ಯಾತಿ

ಜುಲೈ 2016ರಲ್ಲಿ ಮೋದಿ ಸರಕಾರದ ಕ್ಯಾಬಿನೆಟ್ ವಿಸ್ತರಣೆಯಾದಾಗ ಪಿಯೂಶ್ ಗೋಯಲ್ ಅವರನ್ನು ಗಣಿಖಾತೆಯ ಸಚಿವರನ್ನಾಗಿ ನೇಮಕ ಮಾಡಲಾಯಿತು, ನರೇಂದ್ರ ತೋಮರ್ ಈ ಖಾತೆಯನ್ನು ನಿರ್ವಹಿಸುತ್ತಿದ್ದರು. ಇದಾದ ನಂತರ ಪಿಯೂಶ್ ಕೇಂದ್ರ ರೈಲ್ವೇ ಸಚಿವರಾಗಿ ಸೆಪ್ಟಂಬರ್ 2017ರಂದು ಅಧಿಕಾರ ಸ್ವೀಕರಿಸಿಕೊಂಡರು. ರೈಲ್ವೇ ಇಲಾಖೆಯಲ್ಲೂ ಮಹತ್ವದ ಬದಲಾವಣೆ ತಂದ ಖ್ಯಾತಿಯೂ ಪಿಯೂಶ್ ಅವರದ್ದು.

ಮೋದಿ ಸರಕಾರಕ್ಕೆ ಪಿಯೂಶ್ ಆಪತ್ಬಾಂಧವ

ಮೋದಿ ಸರಕಾರಕ್ಕೆ ಪಿಯೂಶ್ ಆಪತ್ಬಾಂಧವ

ಈಗ ವಿತ್ತಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಅನಾರೋಗ್ಯದಿಂದಾಗಿ ಹೆಚ್ಚುವರಿ ಹಣಕಾಸು ಖಾತೆಯನ್ನೂ ಪಿಯೂಶ್ ಗೋಯಲ್ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಕೊನೆಯ ಹಣಕಾಸು ಮತ್ತು ರೈಲ್ವೇ ಬಜೆಟ್ ಅನ್ನು ಪಿಯೂಶ್ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಲೋಕಸಭೆಯಲ್ಲಿನ ಹಲವು ಅಡಚಣೆಯ ನಡೆವೆಯೂ, ದೇಶದ ಗಮನವೆಲ್ಲಾ ಕೇಂದ್ರೀಕೃತವಾಗುವ ಬಜೆಟ್ ಅನ್ನೂ ಮಂಡಿಸಿ, ಮೋದಿ ಸರಕಾರಕ್ಕೆ ಪಿಯೂಶ್ ಆಪತ್ಬಾಂಧವರಾಗಿದ್ದಾರೆ.

English summary
Piyush Goyal from Energy minister to Mines, Railways and now Finance Minister. Piyush successfully to presented the interim budget - 2019 on Feb 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X