ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕರೂಪದ ಪಠ್ಯಕ್ರಮ ಜಾರಿ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

|
Google Oneindia Kannada News

ನವದೆಹಲಿ, ಜುಲೈ 17: ದೇಶದೆಲ್ಲೆಡೆ one nation-one board ಎಂಬ ವ್ಯವಸ್ಥೆ ಜಾರಿಗೆ ತರಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರದಂದು ತಿರಸ್ಕರಿಸಿದೆ.

6 ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಏಕರೂಪದ ಶಿಕ್ಷಣ ನೀತಿ ಅಥವಾ ಏಕರೂಪದ ಪಠ್ಯಕ್ರಮ ಜಾರಿ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪುಸ್ತಕದ ಹೊರೆ ಹೊರೆಸಲು ಬಯಸದ ಸುಪ್ರೀಂಕೋರ್ಟ್ ಈ ತೀರ್ಪು ಪ್ರಕಟಿಸಿದೆ.

ಏಕರೂಪ ಶಿಕ್ಷಣದ ಬಗ್ಗೆ ಮೊದಲು ಚರ್ಚೆಯಾಗಲಿ8

ಈಗಾಗಲೇ ನಮ್ಮ ಮಕ್ಕಳು ಭಾರಿ ತೂಕದ ಬ್ಯಾಗ್ ಹೊರುತ್ತಿದ್ದಾರೆ. ಅವರ ಬೆನ್ನು ಬ್ಯಾಗ್ ಭಾರಕ್ಕೆ ಕುಸಿಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಇನ್ನೂ ಹೊರೆ ಹಾಕಲು ಯಾಕೆ ಬಯಸುತ್ತೀದ್ದೀರಿ? ಎಂದು ಅರ್ಜಿದಾರರಾದ ಬಿಜೆಪಿ ಪರ ವಕೀಲ ಅಶ್ವಿನಿ ಉಪಾಧ್ಯಾಯ ಅವರನ್ನು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಶ್ನಿಸಿದರು.

PIL on one nation-one board for students rejected by SC

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಭಾರತೀಯ ಪ್ರೌಢಶಿಕ್ಷಣ ಮಂಡಳಿಗಳನ್ನು (ಐಸಿಎಸ್‌ಇ) ವಿಲೀನಗೊಳಿಸಿ ಏಕರೂಪದ ಪಠ್ಯಕ್ರಮ ನೀತಿ ರೂಪಿಸಲು ಕೋರಿದ್ದರು.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಇದೆಲ್ಲವೂ ಸರ್ಕಾರ ನೀತಿ ನಿಯಮಕ್ಕೆ ಒಳಪಟ್ಟಿದ್ದು, ಇದು ನ್ಯಾಯಾಲಯದ ಕಾರ್ಯಗಳಲ್ಲ, ಏನು ವ್ಯಾಸಂಗ ಮಾಡಬೇಕು, ಏನು ಮಾಡಬಾರದು ಎಂಬುದನ್ನು ಕೋರ್ಟ್ ಹೇಳಲು ಬರುವುದಿಲ್ಲ. ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅರ್ಜಿದಾರರು ತಮ್ಮ ಸಮಸ್ಯೆಗಳಿಗೆ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

English summary
The Supreme Court on Friday refused to entertain a PIL on 'one nation-one board' for students, saying it would not want to burden children with more books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X