ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಭಕ್ಷಕರಿಗೆ ಸರಿಯಾಗಿ ಚಾಟಿ ಬೀಸಿದ ಉಚ್ಚ ನ್ಯಾಯಾಲಯ

ಗೋಹತ್ಯೆ: ಸಾರ್ವಜನಿಕ ಹಿತಾಶಕ್ತಿ ಅರ್ಜಿಗೆ ರಾಜಸ್ಥಾನ ಮತ್ತು ಕೇರಳ ಉಚ್ಚ ನ್ಯಾಯಾಲಯ ನೀಡಿದ ತೀರ್ಪು.

|
Google Oneindia Kannada News

ಜೈಪುರ, ಮೇ 31: ನಾಡಿನ ಸಮಸ್ತ ಗೋಭಕ್ಷಕರಿಗೆ ಸರಿಯಾಗಿ ಚಾಟಿ ಬೀಸಿರುವ ರಾಜಸ್ಥಾನದ ಉಚ್ಚನ್ಯಾಯಾಲಯ, ಗೋಭಕ್ಷಕರಿಗೆ ಜೀವಾವದಿ ಶಿಕ್ಷೆ ವಿಧಿಸಬೇಕೆಂದು ಸಲಹೆ ನೀಡಿದೆ.

ಗೋವಿಗೆ ರಕ್ಷಣೆ ನೀಡುವ ಕೆಲಸ ಆಗಬೇಕು ಎನ್ನುವ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಸಲಹೆ ನೀಡಿದೆ. [ಗೋಕಿಂಕರರು ಬೀಫ್ ಫೆಸ್ಟ್ ತಡೆದದ್ದು ಹೀಗೆ]

ಇಂದೇ (ಮೇ 31) ಸೇವೆಯಿಂದ ನಿವೃತ್ತಿಯಾಗುತ್ತಿರುವ ಜಸ್ಟೀಸ್ ಮಹೇಶ್ ಚಂದ್ರ ಶರ್ಮಾ ಅವರ ನ್ಯಾಯಪೀಠ, ನೇಪಾಳ ಹಿಂದೂ ದೇಶ ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿದೆ ಎಂದು ನ್ಯಾ. ಶರ್ಮಾ ಹೇಳಿದ್ದಾರೆ.

pil on cow slaughter rajasthan kerala high court verdict

ತೀರ್ಪಿನ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನ್ಯಾ. ಶರ್ಮಾ, ನಮ್ಮ ಧಾರ್ಮಿಕ ಗ್ರಂಧಗಳಲ್ಲಿ ಗೋವಿಗೆ ಎಂಥಾ ಮಹತ್ವವಿದೆ ಎನ್ನುವುದನ್ನು ಸಾರಿದೆ. ಗೋಮೂತ್ರ ಕೂಡಾ ಉಪಯೋಗಕ್ಕೆ ಬರುವಂತದ್ದು ಎಂದು ತನ್ನ ತೀರ್ಪನ್ನು ಶರ್ಮಾ ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ ಕೇಂದ್ರದ ತೀರ್ಪನ್ನು ಪ್ರಶ್ನಿಸಿ ಕೇರಳ ಹೈಕೋರ್ಟಿನಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಟಿ ಎಸ್ ಸಾಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನವನೀತಿ ಪ್ರಸಾದ್ ನೇತೃತ್ವದ ವಿಭಾಗೀಯ ಪೀಠ, ಗೋವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬದಲು ಬೇರೆ ಎಲ್ಲಿಯಾದರೂ ಮಾರಾಟ ಮಾಡಿ ಎನ್ನುವ ಸಲಹೆ ನೀಡಿದೆ.

ಮಧುರೈ ಹೈಕೋರ್ಟ್ ನೀಡಿದ ತೀರ್ಪಿಗೆ ಆಶ್ಚರ್ಯ ವ್ಯಕ್ತಪಡಿಸಿದ ಕೇರಳ ಉಚ್ಚನ್ಯಾಯಾಲಯ, ಕೇಂದ್ರದ ತೀರ್ಪನ್ನು ಸರಿಯಾಗಿ ಅಧ್ಯಯನ ಮಾಡಿದ್ದರೆ ಯಾವುದೇ ಗೊಂದಲವಿರುತ್ತಿರಲಿಲ್ಲ.

ದನದ ಮಾಂಸ ಮಾರಾಟದ ಮೇಲೆ ಕೇಂದ್ರ ನಿಷೇಧ ಹೇರಿಲ್ಲ. ಹಾಗಾಗಿ ಕೇಂದ್ರದ ನಿರ್ಧಾರಕ್ಕೆ ತಡೆನೀಡಲು ಸಾಧ್ಯವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯ ಪಿಐಎಲ್ ವಜಾಗೊಳಿಸಿದೆ.

English summary
PIL on cow slaughter: Rajasthan High Court has suggested making cow the national animal of India and increasing punishment for cow slaughter to life imprisonment, while Kerala High Court asks, where is beef ban, and refuses to touch union govt rules on cattle market sale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X