ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ತೆಂಡೂಲ್ಕರ್ ಕೈತಪ್ಪಲಿದೆಯೆ 'ಭಾರತ ರತ್ನ'?

By Mahesh
|
Google Oneindia Kannada News

ಭೋಪಾಲ್, ಜೂ.20: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೆ ಕಹಿ ಸುದ್ದಿ ಇಲ್ಲಿದೆ. ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಪ್ರಶಸ್ತಿಯನ್ನು ಸಚಿನ್ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದಿದೆ. ಈ ಕುರಿತ ಅರ್ಜಿಯೊಂದನ್ನು ಇಲ್ಲಿನ ನ್ಯಾಯಾಲಯ ಪುರಸ್ಕರಿಸಿದೆ.

ವಾಣಿಜ್ಯ ಉದ್ದೇಶಿತ ಜಾಹೀರಾತುಗಳಲ್ಲಿ ಸಚಿನ್ ತೆಂಡೂಲ್ಕರ್ ಅವರು ಭಾರತ ರತ್ನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ಪ್ರಶಸ್ತಿ, ಗೌರವಗಳನ್ನು ವಾಣಿಜ್ಯ ಉದ್ದೇಶಿತ ಜಾಹೀರಾತುಗಳನ್ನು ಬಳಸುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನವನ್ನು ಪರಿಗಣಿಸಿ ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸಾಲಿಸಿಟರ್ ಜನರಲ್ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

Plea to revoke Sachin’s Bharat Ratna admitted

ಮುಖ್ಯ ನ್ಯಾ. ಎಎಂ ಖಾನ್ವಿಲ್ಕರ್ ಹಾಗೂ ಜಸ್ಟೀಸ್ ಕೆಕೆ ತ್ರಿವೇದಿ ಅವರಿದ್ದ ಪೀಠ ಈ ನಿರ್ದೇಶನ ಗುರುವಾರ ಸಂಜೆಯೇ ನೀಡಿದೆ. ಈ ಬಗ್ಗೆ ಪೀಟಿಷನರ್ ಭೋಪಾಲ್ ಮೂಲದ ವಿಕೆ ನಾಶ್ವಾ ಮಾತನಾಡಿ, ಇದರಲ್ಲಿ ನನ್ನ ಸ್ವಹಿತಾಸಕ್ತಿ ಏನು ಇಲ್ಲ.

ಭಾರತ ರತ್ನ ದಂಥ ಗೌರವವನ್ನು ಪಡೆದವರು ಟಿವಿ ಜಾಹೀರಾತುಗಳಲ್ಲಿ ದೇಶದ ಉನ್ನತ ಪ್ರಶಸ್ತಿಗೆ ಅಗೌರವ ತೋರಿಸಿರುವುದು ಸರಿಯಲ್ಲ ಎಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಮೇಲೂ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ ಸಾಲಿಸಿಟರ್ ಜನರಲ್ ಅವರು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಂದು ವಾರದೊಳಗೆ ಈ ಬಗ್ಗೆ ವರದಿ ಸಲ್ಲಿಸಬೇಕಿದೆ.

ಫೆ.4, 2014ರಂದು ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಅವರು ಕರ್ನಾಟಕ ಮೂಲದ ವಿಜ್ಞಾನಿ ಸಿಎನ್ ಆರ್ ರಾವ್ ಹಾಗೂ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ನೀಡಿ ಗೌರವಿಸಿದ್ದರು. (ಪಿಟಿಐ)

English summary
The Madhya Pradesh High Court has admitted a petition to revoke the Bharat Ratna awarded to cricket icon Sachin Tendulkar for allegedly using the “fame” the honour has brought him in “earning money by endorsing commercial products”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X