ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಷ್ಯಕ್ಕೆ ಪ್ಲಸ್ ಆಗಬಹುದಾದ ಯೋಗದಿನ ಮಿಸ್ ಯಾಕೆ ಮಾಡ್ತೀರಿ?

|
Google Oneindia Kannada News

ಜೂನ್ 21ರಂದು ವಿಶ್ವ ಯೋಗ ದಿನದ ಆಚರಣೆಗೆ ಎಲ್ಲ ಕಡೆಯೂ ಸಿದ್ಧತೆ ನಡೆಯುತ್ತಿದೆ. ವಿಶ್ವದಾದ್ಯಂತ ನೂರೈವತ್ತಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆಗೆ ಆರ್ಟ್ ಆಫ್ ಲಿವಿಂಗ್ ಯೋಜನೆ ಮಾಡಿಟ್ಟುಕೊಂಡಿದೆ. ಈ ದಿನಕ್ಕೆ ಇಷ್ಟು ಮಹತ್ವ ನೀಡಿ, ಆಚರಣೆಗೊಂದು ಗಾಂಭೀರ್ಯ ತಂದುಕೊಟ್ಟಿರುವ ಸಂಗತಿ ಮೆಚ್ಚುಗೆ ಹಾಗೂ ಅಚ್ಚರಿಗೆ ಅರ್ಹವಾಗಿದೆ.

ಏಕೆಂದರೆ, ಬಹಳ ದಿನಾಚರಣೆಗಳು ನಿರ್ದಿಷ್ಠ ಸಮುದಾಯ- ವರ್ಗವನ್ನು ಮಾತ್ರ ಪ್ರತಿನಿಧಿಸುವುದರಿಂದ ಆಚರಣೆಯಲ್ಲಿ ನಿರುತ್ಸಾಹ ಇಣುಕುತ್ತದೆ. ಅಥವಾ ಒಂದು ನಿರ್ದಿಷ್ಟ ಸಿದ್ಧಾಂತವುಳ್ಳ ರಾಜಕೀಯ ಪಕ್ಷ ಅಧಿಕಾರ ಸ್ಥಾನದಿಂದ ಕದಲಿದ ನಂತರ ಆಚರಣೆ ಬಗೆಗಿನ ಆಸಕ್ತಿಯೂ ಅಷ್ಟೇ ವೇಗವಾಗಿ ಕರಗಿಹೋಗುತ್ತದೆ.

ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ

ಈ ವರ್ಷದ ಯೋಗ ದಿನಾಚರಣೆ ನಾಲ್ಕನೆಯದು. ಬೆಂಗಳೂರು, ಮುಂಬೈ, ಅಹ್ಮದಾಬಾದ್, ಮಧ್ಯಪ್ರದೇಶ್ ಹೀಗೆ ನಾನಾ ಕಡೆ ಯೋಗ ದಿನಾಚರಣೆ ಸಿದ್ಧತೆಗಳ ಫೋಟೋಗಳನ್ನು ಪಿಟಿಐ ಸುದ್ದಿ ಸಂಸ್ಥೆ ಸೊಗಸಾಗಿ ಸೆರೆ ಹಿಡಿದಿದೆ. ಅವುಗಳನ್ನು ನಿಮ್ಮೆದುರು ಕಟ್ಟಿಕೊಡುವ ಆಲೋಚನೆಯೇ ಈ ಚಿತ್ರ- ಸುದ್ದಿಯ ಮಾಲೆ. ಯೋಗ ದಿನಕ್ಕೂ ಮುನ್ನ ಅಭ್ಯಾಸ. ಆರೋಗ್ಯ- ಆಯುಷ್ಯಕ್ಕೆ ಪ್ಲಸ್ ಅನ್ನುವುದಾದರೆ ಯಾಕೆ ಮಿಸ್ ಮಾಡಬೇಕು?

ಯೋಗ ದಿನಕ್ಕೆ ಆಸಕ್ತರ ಯೋಗಾ'ಭ್ಯಾಸ'

ಯೋಗ ದಿನಕ್ಕೆ ಆಸಕ್ತರ ಯೋಗಾ'ಭ್ಯಾಸ'

ಯೋಗದಲ್ಲಿ ಆಸಕ್ತಿ ಇರುವಂಥವರು ಈ ಬಾರಿಯ ವಿಶ್ವ ಯೋಗ ದಿನದ ಮುಂಚೆ ಅಭ್ಯಾಸದಲ್ಲಿ ತೊಡಗಿದ್ದ ದೃಶ್ಯವಿದು. ಅಂದ ಹಾಗೆ ಈ ದೃಶ್ಯವನ್ನು ಬೆಂಗಳೂರಿನಲ್ಲಿ ಸೆರೆ ಹಿಡಿದವರು ಪಿಟಿಐ ಸುದ್ದಿ ಸಂಸ್ಥೆಯ ಫೋಟೋಗ್ರಾಫರ್ ಶೈಲೇಂದ್ರ ಭೋಜಕ್.

ಯೋಗ ದಿನದಲ್ಲಿ ಭಾಗವಹಿಸುವವರು ಯಾರು?

ಯೋಗ ದಿನದಲ್ಲಿ ಭಾಗವಹಿಸುವವರು ಯಾರು?

ನೀವು ಯಾರೆಲ್ಲ ಯೋಗ ದಿನದಲ್ಲಿ ಭಾಗವಹಿಸುತ್ತೀರಿ, ಕೈ ಎತ್ತಿ ಎಂದು ಕೇಳಿದಾಗ, ನಾವು- ನಾವು ಎಂದು ಎರಡೂ ಕೈ ಎತ್ತಿ ಹೇಳುತ್ತಿರುವಂತಿದೆ ಈ ಬೆಂಗಳೂರಿಗರು. ಇದು ಬುಧವಾರದಂದು ನಗರದಲ್ಲಿ ಕಂಡ ದೃಶ್ಯ.

'ಗರ್ಬಾ ನೃತ್ಯ'ದ ಅಭ್ಯಾಸ

'ಗರ್ಬಾ ನೃತ್ಯ'ದ ಅಭ್ಯಾಸ

ವಿಶ್ವ ಯೋಗ ದಿನಾಚರಣೆ ಮುಂಚಿತವಾಗಿ ಅಹ್ಮದಾಬಾದ್ ನಲ್ಲಿ ಮಹಿಳೆಯರು 'ಗರ್ಬಾ ನೃತ್ಯ'ದ ಅಭ್ಯಾಸದಲ್ಲಿ ತೊಡಗಿದ್ದಾಗ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಅಭ್ಯಾಸ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಅಭ್ಯಾಸ

ಮಧ್ಯಪ್ರದೇಶದ ಭೋಪಾಲ್ ನಲ್ಲಿರುವ ಲಾಲ್ ಪರೇಡ್ ಮೈದಾನದಲ್ಲಿ ಬುಧವಾರ ಯೋಗ ದಿನಕ್ಕೆ ಪೂರ್ವಭಾವಿಯಾವಿ ಅಭ್ಯಾಸದಲ್ಲಿ ತೊಡಗಿದ್ದ ಕ್ಷಣ.

ಲೈಂಗಿಕ ಕಾರ್ಯನಿರತರಿಂದ ಯೋಗಾಭ್ಯಾಸ

ಲೈಂಗಿಕ ಕಾರ್ಯನಿರತರಿಂದ ಯೋಗಾಭ್ಯಾಸ

ಮುಂಬೈನಲ್ಲಿ ಲೈಂಗಿಕ ವೃತ್ತಿನಿರತರು ಯೋಗ ದಿನಾಚರಣೆಗೆ ಮುನ್ನ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಗಂಗಾ ನದಿಯ ಮೇಲೆ ಯೋಗಾಸನ

ಗಂಗಾ ನದಿಯ ಮೇಲೆ ಯೋಗಾಸನ

ಮಿರ್ಜಾಪುರದಲ್ಲಿ ಗಂಗಾ ನದಿಯಲ್ಲಿ ದೋಣಿಗಳ ಮೇಲೆ ಯೋಗಾಸನದ ಅಭ್ಯಾಸ ಮಾಡಿದ ಆಸಕ್ತರು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಸಿಕ್ಕಿದ್ದು ಹೀಗೆ.

ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ

ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ

ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಬೆಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ ಮಾಡಿದ ಆಸನದ ಭಂಗಿ ಇದು.

English summary
International Yoga Day on June 21st, Thursday. Here is the preparation pictures around India. PTI photos representing this preparation by enthusiasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X