ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರನ್ನು ಬೂಟುಗಾಲಲ್ಲಿ ತುಳಿದ ಬೆಂಗಳೂರು ವಿದ್ಯಾರ್ಥಿಗಳು

|
Google Oneindia Kannada News

ಪೇಶಾವರ, ಡಿ. 17: ಉಗ್ರರ ದಾಳಿಗೆ ಪಾಕಿಸ್ತಾನದಲ್ಲಿ ನೂರಾರು ಎಳೆ ಜೀವಗಳು ಬಲಿಯಾಗಿವೆ. ಪ್ರಪಂಚದಾದ್ಯಂತ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದ್ದು ಮಕ್ಕಳ ಆತ್ಮಕ್ಕೆ ಶೃದ್ಧಾಂಜಲಿ ಸೂಚಿಸಲಾಗುತ್ತಿದೆ.

ಭಾರತದ ಜೈಪುರ, ಚೆನ್ನೈ, ನವದೆಹಲಿ, ಅಮೃತಸರ ಮತ್ತಿತರ ಕಡೆ ಮೊಂಬತ್ತಿ ಉರಿಸಿ ಸಂತಾಪ ಸೂಚಿಸಲಾಯಿತು. ಪಾಕಿಸ್ತಾನದ ಇಸ್ಲಾಮಾಬಾದ್ , ಕಾರಾಚಿಯಲ್ಲೂ ಮಕ್ಕಳು ನಾಗರಿಕರು ಶೃದ್ಧಾಂಜಲಿ ಸಲ್ಲಿಸಿದರು.[ಪಾಕಿಸ್ತಾನದಲ್ಲಿ ಉಗ್ರರ ದಾಳಿಗೆ ನೂರಾರು ಮಕ್ಕಳು ಬಲಿ]

ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡುಬರುತ್ತಿಲ್ಲ. ಬುಧವಾರವೂ ಪೇಶಾವರದ ಸಮೀಪ ಉಗ್ರರು ದಾಳಿ ಮಾಡಿದ್ದಾರೆ. ಸುಮಾರು 140 ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿದ್ದ ಉಗ್ರರ ರಕ್ತ ದಾಹಕ್ಕೆ ಕೊನೆಯೆ ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ.{ಪಿಟಿಐ ಚಿತ್ರಗಳು)

ಬುಧವಾರ ನಡೆದ ಮಕ್ಕಳ ಅಂತ್ಯಕ್ರಿಯೆಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಒಂದೆರಡು ನಿಮಿಷ ಮೌನ ಆಚರಣೆ ಮಾಡಿ ಉಗ್ರರ ಕ್ರಮವನ್ನು ಖಂಡಿಸಲಾಯಿತು. ಶೃದ್ಧಾಂಜಲಿ ಸೂಚಿಸಿದ ಕೆಲ ಚಿತ್ರಗಳು....

ಭಯೋತ್ಪಾದಕರಿಗೆ ಬೂಟಿನ ಏಟು

ಭಯೋತ್ಪಾದಕರಿಗೆ ಬೂಟಿನ ಏಟು

ಉಗ್ರರ ಭಿತ್ತಿಪತ್ರದ ಮೇಲೆ ತಮ್ಮ ಬೂಟಿನ ಕಾಲಿಟ್ಟು ಆಕ್ರೋಶ ಹೊರಹಾಕಿದ ಬೆಂಗಳೂರು ವಿದ್ಯಾರ್ಥಿಗಳು.

ಮಕ್ಕಳಿಂದ ಶೃದ್ಧಾಂಜಲಿ.

ಮಕ್ಕಳಿಂದ ಶೃದ್ಧಾಂಜಲಿ.

ದೆಹಲಿಯ ವಿದ್ಯಾ ಬಾಲ ಭವನ ಶಾಲೆಯಲ್ಲಿ ಮಕ್ಕಳಿಂದ ಶೃದ್ಧಾಂಜಲಿ

ಅಮೃತಸರ

ಅಮೃತಸರ

ಭಿತ್ತಿ ಪತ್ರಗಳನ್ನು ಹಿಡಿದು ಮೊಂಬತ್ತಿ ಬೆಳಗಿ ಶೃದ್ಧಾಂಜಲಿ ಸಲ್ಲಿಕೆ.

ಮೌನಾಚರಣೆ

ಮೌನಾಚರಣೆ

ಜಾರ್ಖಂಡ್ ನ ಧನ್ ಬಾದ್ ದಲ್ಲಿ ಮೌನದ ಮೂಲಕ ಸಂತಾಪ ಸೂಚಿಸಿದ ಮಕ್ಕಳು.

ಮಕ್ಕಳ ಸ್ಥಿತಿ

ಮಕ್ಕಳ ಸ್ಥಿತಿ

ಉಗ್ರರ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಚಿತ್ರ.

ಕರಾಚಿ

ಕರಾಚಿ

ಜೀವ ಕಳೆದುಕೊಂಡ ಕಂದಮ್ಮಗಳನ್ನು ಸ್ಮರಿಸಿದ ಮಕ್ಕಳು.

ಅಂತಿಮ ಯಾತ್ರೆ

ಅಂತಿಮ ಯಾತ್ರೆ

ಪೇಶಾವರದಲ್ಲಿ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಮಕ್ಕಳ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಜನಸಮೂಹ.

ಇಸ್ಲಾಮಾಬಾದ್

ಇಸ್ಲಾಮಾಬಾದ್

ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪಾಕಿಸ್ತಾನ್ ಸಿವಿಲ್ ಸೊಸೈಟಿ ಸದಸ್ಯರು.

ಬೆಂಗಳೂರಲ್ಲಿ ಪ್ರತಿಭಟನೆ

ಬೆಂಗಳೂರಲ್ಲಿ ಪ್ರತಿಭಟನೆ

ಉಗ್ರರ ಅಟ್ಟಹಾಸ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ ಮಕ್ಕಳು.

English summary
In one of the worst terrorist attacks in Pakistan's history, militants belonging to the Pakistani Taliban on Tuesday launched a brazen attack on a military-run school in the city of Peshawar. Officials said the eight-hour siege left at least 141 people dead, most of them students. All over the World condolence children's death in pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X