ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಪೈಲಟ್ ಶವದೆದುರು ಕಲ್ಲಿನಂತೆ ನಿಂತ ಪತ್ನಿ, ಚಿತ್ರ ವೈರಲ್

|
Google Oneindia Kannada News

Recommended Video

Surgical Strike 2: ಹುತಾತ್ಮ ಪೈಲಟ್ ಶವದೆದುರು ಕಲ್ಲಿನಂತೆ ನಿಂತ ಪತ್ನಿ,

ಚಂಡಿಗಢ, ಮಾರ್ಚ್ 02: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನಲ್ಲಿ ಫೆ.27 ರಂದು ಹುತಾತ್ಮರಾದ ಭಾರತೀಯ ವಾಯುಸೇನೆಯ ಸ್ಕಾಂಡ್ರನ್ ಲೀಡರ್ ಸಿದ್ಧಾರ್ಥ ವಸಿಷ್ಠ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಅವರ ಪತ್ನಿ ಆರತಿ ಸಿಂಗ್ ಅವರು ಕಲ್ಲಿನಂತೆ ನಿಂತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!

 Photo of Wife of chopper pilot martyred in budgam crash becomes viral

ಸ್ಫೋಟ ನಡೆವಾಗಲೂ ಪತಿಯೊಂದಿಗೆ ಫೋನಿನಲ್ಲಿದ್ದ ಯೋಧನ ಪತ್ನಿಸ್ಫೋಟ ನಡೆವಾಗಲೂ ಪತಿಯೊಂದಿಗೆ ಫೋನಿನಲ್ಲಿದ್ದ ಯೋಧನ ಪತ್ನಿ

ಸಿದ್ಧಾರ್ಥ್ ತಮ್ಮ ಕುಟುಂಬದಿಂದ ಸೇನೆಗೆ ಸೇರಿದವರಲ್ಲಿ ನಾಲ್ಕನೇ ತಲೆಮಾರಿನವರು. ಫೆಬ್ರವರಿ 14 ರ ಪುಲ್ವಾಮಾ ದಾಳಿ ಮತ್ತು ಫೆ.26ರಲ್ಲಿ ಉಗ್ರನೆಲೆಯ ಮೇಲೆ ಭಾರತ ನಡೆಸಿದ ದಾಳಿಯ ನಂತರ ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ Mi-17 ವಿಮಾನಪತನಗೊಂಡು, ಪೈಲಟ್ ಸಿದ್ಧಾರ್ಥ್ ಹುತಾತ್ಮರಾದರು.

ಈ ಘಟನೆಯಲ್ಲಿ ಆರು ಐಎಎಫ್ ಅಧಿಕಾರಿಗಳು ಹುತಾತ್ಮರಾದರೆ, ಓರ್ವ ಪ್ರಜೆ ಹತರಾಗಿದ್ದರು

ಕಣ್ಣೀರುಕ್ಕಿಸುವ ಚಿತ್ರ

ಕಣ್ಣೀರುಕ್ಕಿಸುವ ಚಿತ್ರ

ಸ್ವತಃ ವಾಯುಸೇನೆಯ ಸ್ಕಾಂಡ್ರನ್ ಲೀಡರ್ ಆಗಿರುವ ಆರತಿ ಸಿಂಗ್, ಪತಿಯ ಅಕಾಲಿಕ ಮರಣದ ನಡುವೆಯೂ ಕಣ್ಣೀರು ಹಾಕದೆ ನಿರ್ಲಿಪ್ತವಾಗಿ ನಿಂತಿದ್ದ ಈ ದೃಶ್ಯಕ್ಕೆ ಕರುಳು ಕಿವುಚುತ್ತದೆ. ಚಂಡಿಗಢ ಮೂಲದವರಾದ ಸಿದ್ಧಾರ್ಥ್ ಅವರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು.

ಪತಿಯ ಶವದೆದುರು ನಿಂತರೂ ಹನಿ ನೀರಿಲ್ಲ!

ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಉಗ್ರ ಆದಿಲ್ ದಾರ್, ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಒಟ್ಟು 44 ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಪ್ರತೀಕಾರ ಎಂಬಂತೆ ಪುಲ್ವಾಮದಲ್ಲಿ ಸೋಮವಾರ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್ ದಾಳಿಯಲ್ಲಿ ಉತ್ತರಾಖಂಡದ ಡೆಹ್ರಾಡೂನ್ ನ ಮೇಜರ್ ವಿ ಎಸ್ ಧೌಂಡಿಯಾಳ್ ಹುತಾತ್ಮರಾಗಿದ್ದರು. ಅವರ ಶವದೆದುರು ಪತ್ನಿ ಹನಿ ಕಣ್ಣೀರು ಹಾಕದೆ ನಿರ್ಲಿಪ್ತವಾಗಿ ನಿಂತಿದ್ದ ಚಿತ್ರವೂ ಸಾವಿರ ಕತೆ ಹೇಳಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶವಪೆಟ್ಟಿಗೆಗೆ ಮುತ್ತಿಕ್ಕುತ್ತಿರುವ ಕಂದ!

ಫೆಬ್ರವರಿ 27 ರಂದು ಹೆಲಿಕಾಪ್ಟರ್ ಪತನಗೊಂಡು ಅಸುನೀಗಿದ ನಿನಾದ್ ಮಂದವ್ಗನೆ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ಅವರ ಪತ್ನಿ ವಿಜೇತಾ ಕಲ್ಲಿನಂತೆ ನಿಂತಿದ್ದರೆ, ಅವರ ಎರಡು ವರ್ಷದ ಪುಟ್ಟ ಮಗು ವಿದಿತಾ ತಂದೆಯ ಶವಪೆಟ್ಟಿಗೆಗೆ ಮುತ್ತಿಕ್ಕುತ್ತಿದ್ದ ದೃಶ್ಯವೂ ಮನಕಲಕುವಂತಿತ್ತು. ಮಹಾರಾಷ್ಟ್ರದ ನಾಸಿಕ ಮೂಲದವರಾದ ನಿನಾದ್ ಅವರ ಅಂತ್ಯಕ್ರಿಯೆಯೂ ಶುಕ್ರವಾರ ನಡೆಯಿತು.

ಈ ಎಲ್ಲಾ ದುರಂತದ ನಡುವಲ್ಲೊಂದು ಖುಷಿಯ ಸುದ್ದಿ!

ಈ ಎಲ್ಲಾ ದುರಂತದ ನಡುವಲ್ಲೊಂದು ಖುಷಿಯ ಸುದ್ದಿ!

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು. ಆದರೆ ಭಾರತ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅಭಿನಂದನ್ ಅವರನ್ನು ಶುಕ್ರವಾರ ರಾತ್ರಿ ಭಾರತಕ್ಕೆ ಹಸ್ತಾಂತರಿಸಿತು. ಯೋಧರ ಬದುಕಿನ ನೂರು ದುರಂತಗಳ ನಡುವಲ್ಲಿ ಇದೊಂದು ಖುಷಿಯ ವಿಚಾರವಾಗಿ ಬದುಕಿನ ಭರವಸೆ ಹೆಚ್ಚಿಸಿತು.

ಪತಿಯ ಕಳೇಬರಕ್ಕೆ ಸೆಲ್ಯೂಟ್ ಹೊಡೆದ ಕಲಾವತಿ

ಪತಿಯ ಕಳೇಬರಕ್ಕೆ ಸೆಲ್ಯೂಟ್ ಹೊಡೆದ ಕಲಾವತಿ

ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 44 ಯೋಧರು ಹುತಾತ್ಮರಾಗಿದ್ದರು. ಈ 44 ಯೋಧರಲ್ಲಿ ನಮ್ಮ ಕರುನಾಡಿನ, ಮಂಡ್ಯದ ಗುರು ಎಂಬುವವರೂ ಇದ್ದರು. ಅವರ ಅಂತಿಮ ಯಾತ್ರೆ ಮಂಡ್ಯದಲ್ಲೇ ನಡೆದಿತ್ತು. ಈ ಸಂದರ್ಭದಲ್ಲಿ ಪತಿಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಹೊಡೆದ ಗುರು ಅವರ ಪತ್ನಿ ಕಲಾವತಿ, "ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ" ಎಂದಿದ್ದರು.

English summary
Photographs of (IAF) Squadron Leader Aarti Singh, wife of Indian Air Force (IAF) Squadron Leader Siddharth Vashisht becomes viral on social media now. Siddharth Vashisht was piloting a Mi-17 chopper when it crashed in Jammu and Kashmir's Budgam district, was cremated with full military honours at Chandigarh Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X