• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಂತೆ ಕಂತೆ ನೋಟಿನ ಮಧ್ಯೆ ಹೃದಯ ಹಿಂಡಿದ ಚಿತ್ರ

|

ವಿಭಿನ್ನ ಮನಸ್ಥಿತಿ, ಸನ್ನಿವೇಶ ಹಾಗೂ ಕಾರ್ಯಕ್ರಮಗಳು ನಿಮ್ಮೆದುರು ಚಿತ್ರಗಳಾಗಿವೆ. ಎಷ್ಟೂಂತ ಅದೇ ನೋಟು, ಬ್ಯಾಂಕು, ಎಟಿಎಂ ಅಂತ ಸುತ್ತಾಡಿದರೂ ದಿನದ ಕೊನೆಗೆ ನಮ್ಮ ಮನೆ ಎದುರಿನ, ರಸ್ತೆ ಕೊನೆ ಮನೆಯ ಸಂಗತಿಗಳೇ ಹೆಚ್ಚು ಆಪ್ಯಾಯಮಾನ ಅನ್ನಿಸಿ ಬಿಡುತ್ತದೆ ಅಲ್ಲವೇ?

ಇರಲಿ ಕಾಂಗ್ರೆಸ್ ನ ಶಶಿ ತರೂರ್ ತಮ್ಮ ಹೊಸ ಪುಸ್ತಕದ ಪ್ರತಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ. ಜಗತ್ತಿನ ಕುಬೇರ ಬಿಲ್ ಗೇಟ್ಸ್ ಬುಧವಾರ ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿಯಾಗಿ, ನೋಟು ರದ್ದು ನಿರ್ಧಾರ ಭೇಷ್ ಬಿಡ್ರಿ ಎಂದು ಹೊಗಳಿದ್ದಾರೆ. ನಟ ನಾನಾ ಪಾಟೇಕರ್ ಜಮ್ಮು-ಕಾಶ್ಮೀರಕ್ಕೆ ಹೋಗಿ ಹುತಾತ್ಮ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.[ಹಣ ವಿತ್ ಡ್ರಾ ನಿಯಮಗಳಲ್ಲಿ ರೈತರಿಗೆ ಸಡಿಲಿಕೆ]

ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೀಗೆ ಹಲವರು ಸುದ್ದಿಯಲ್ಲಿದ್ದಾರೆ. ಎಲ್ಲವನ್ನೂ ನಿಮ್ಮೆದುರು ಚಿತ್ರದಲ್ಲೇ ತರಬೇಕು ಎಂಬ ಇರಾದೆ ನಮ್ಮದು.

ಹುತಾತ್ಮ ಸಿಪಾಯಿ ಕುಟುಂಬಕ್ಕೆ ಸಾಂತ್ವನ

ಹುತಾತ್ಮ ಸಿಪಾಯಿ ಕುಟುಂಬಕ್ಕೆ ಸಾಂತ್ವನ

ಜಮ್ಮುವಿನ ಪಲೌರಾ ಕ್ಯಾಂಪ್ ಗೆ ಭೇಟಿ ನೀಡುವ ಸಂದರ್ಭದಲ್ಲಿ ಬುಧವಾರ ಸಿಪಾಯಿ ಗುರುನಾಮ್ ಸಿಂಗ್ ಹುತಾತ್ಮರಾದರು. ಅವರ ಕುಟುಂಬದವರಿಗೆ ಸಾಂತ್ವನ ನೀಡುವುದಕ್ಕೆ ಹಿಂದಿ ಚಿತ್ರ ನಟ ನಾನಾ ಪಾಟೇಕರ್ ತೆರಳಿದ್ದಾರೆ.

ಕಣ್ಣು ನೋಟ ಬದಲಿಸಿತೇ?

ಕಣ್ಣು ನೋಟ ಬದಲಿಸಿತೇ?

ಚೆನ್ನೈನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಶಾಖೆಯೊಂದರಲ್ಲಿ 500, 1000 ಮುಖಬೆಲೆಯ ನೋಟುಗಳನ್ನು ಇಟ್ಟುಕೊಂಡು ಎಣಿಕೆ ಮಾಡುತ್ತಿದ್ದ ಬ್ಯಾಂಕ್ ನೌಕರ ಕಂಡಿದ್ದು ಹೀಗೆ. ಕನಕಾಂಬರ ಬಣ್ಣದ ನೋಟೆಂದರೆ ಅರಳುತ್ತಿದ್ದ ಕಣ್ಣುಗಳೂ ನೋಟವನ್ನು ಬದಲಾಯಿಸಿಕೊಂಡಿವೆ ಅನ್ನಿಸೊಲ್ವಾ?

ನೋಟು ರದ್ದು ನಿರ್ಧಾರಕ್ಕೆ ಬಿಲ್ ಗೇಟ್ಸ್ ಮೆಚ್ಚುಗೆ

ನೋಟು ರದ್ದು ನಿರ್ಧಾರಕ್ಕೆ ಬಿಲ್ ಗೇಟ್ಸ್ ಮೆಚ್ಚುಗೆ

ಬಿಲ್ ಮತ್ತು ಮೆಲಿಂಡಾ ಗೇಟ್ಸ್ ನ ಸಹ ಅಧ್ಯಕ್ಷ, ಜಗತ್ತಿನ ಅತಿ ಶ್ರೀಮಂತ ಬಿಲ್ ಗೇಟ್ಸ್ ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಚಿತ್ರವಿದು. ನೋಟು ರದ್ದು ವಿಚಾರ ಬಿಲ್ ಗೇಟ್ಸ್ ಗೂ ಖುಷಿ ತಂದಿದೆ. ಸರಕಾರದ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ ಬಿಲ್ ಗೇಟ್ಸ್.

ವಿಪಕ್ಷಗಳು ಕಿಡಿಕಿಡಿ

ವಿಪಕ್ಷಗಳು ಕಿಡಿಕಿಡಿ

ವಿರೋಧ ಪಕ್ಷಗಳೆಲ್ಲ ನೋಟು ರದ್ದು ವಿಚಾರವಾಗಿ ಬೆಂಕಿಯಾಗಿವೆ. ಈ ಸನ್ನಿವೇಶವನ್ನು ಸರಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದು ಅವುಗಳ ತಕರಾರು. ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎಎಪಿಯ ಸಂಸದ ಭಾಗ್ವತ್ ಮನ್ ರ ನಿಯೋಗ ರಾಷ್ಟ್ರಪತಿಗಳಿಗೊಂದು ಮನವಿ ನೀಡಿದೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ನವದೆಹಲಿಯಲ್ಲಿ ಬಿಸಿಬಿಸಿ ವಾತಾವರಣ

ಪ್ರಧಾನಿಗೆ ಪುಸ್ತಕ

ಪ್ರಧಾನಿಗೆ ಪುಸ್ತಕ

ಕಾಂಗ್ರೆಸ್ ನ ಸಂಸದ ಶಶಿ ತರೂರ್ ಹೊಸ ಪುಸ್ತಕ ಬರೆದಿದ್ದಾರೆ. ಅದರ ಹೆಸರು: 'ಆನ್ ಎರಾ ಆಫ್ ಡಾರ್ಕ್ ನೆಸ್: ದ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ'. ಆ ಪುಸ್ತಕದ ಪ್ರತಿಯೊಂದನ್ನು ಪ್ರಧಾನಿ ನರೇಂದ್ರ ಮೋದ್ಯವರಿಗೆ ಬುಧವಾರ ನೀಡಿದ್ದಾರೆ ಶಶಿ ತರೂರ್.

ಈ ಕೇಸ್ ಏನಾದ್ರೂ ಸರಿ, ನಾವಿದೀವಿ

ಈ ಕೇಸ್ ಏನಾದ್ರೂ ಸರಿ, ನಾವಿದೀವಿ

ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಹಾಗೆ ಭಿವಂಡಿಯ ಕೋರ್ಟ್ ಗೆ ಹಾಜರಾಗಿದ್ದ ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಬೆಂಬಲಿಗರ ಜತೆಗೆ ಮಾತನಾಡುವಾಗ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ಸುವರ್ಣ ಸಂಭ್ರಮ

ಸುವರ್ಣ ಸಂಭ್ರಮ

ನವದೆಹಲಿಯಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸುವರ್ಣಾ ಮಹೋತ್ಸವ ಸಂಭ್ರಮದಲ್ಲಿ ಮಾಃಇತಿ ಹಾಗೂ ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ವ್ಯಂಗ್ಯಚಿತ್ರಕಾರ ಹರೀಶ್ ಚಂದ್ರ ಶುಕ್ಲಾ ಅವರನ್ನು ಗೌರವಿಸಿದ ಕ್ಷಣ.

English summary
Various events in India represented through photos from PTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X