ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Phailin: ಮೀಡಿಯಾ ಹೈಪಾ ಅಥವಾ ಪ್ರಕೃತಿಯ ಸೋಲಾ?

By Srinath
|
Google Oneindia Kannada News

ಬೆಂಗಳೂರು, ಅ.15: ದೊಡ್ಡ ಪ್ರಮಾಣದ ಚಂಡಮಾರುತ ಬಂದ ದಾರಿಗೆ ಸುಂಕವಿಲ್ಲದೆ ವಾಪಸಾಗಿದೆ. ಪ್ರಕೃತಿ ವಿಕೃತಿ ಸೀಮಿತವಾಗಿದೆ. ಹೆಚ್ಚೇನೂ ಬಾಳು ಹಾಳಾಗಿಲ್ಲ ಸರಿ. ಆದರೆ ಬೆಳೆ ಹಾನಿಯಾಗಿದೆ. ಹಾಗಾದರೆ ಇದೇನು Media Hype ಅಥವಾ ಪ್ರಕೃತಿಯ ಸೋಲಾ? ಎಂದು ಕೇಳುವವರೂ ಇದ್ದಾರೆ.

ಮೊನ್ನೆ ಫೈಲಿನ್ ಚಂಡಮಾರುತದ ಅಬ್ಬರ ತಗ್ಗುತ್ತಿದ್ದಂತೆ ಅದರಿಂದ ಹೆಚ್ಚು ಸಂತ್ರಸ್ತಗೊಂಡಿದ್ದ ಒಡಿಶಾ ರಾಜ್ಯದ ಮುಖ್ಯಮಂತ್ರಿ ಮಾಧ್ಯಮಗಳಿಗೆ ದೊಡ್ಡ ಥ್ಯಾಂಕ್ಸ್ ಹೇಳಿದ್ದಾರೆ. ಮಾಧ್ಯಮಗಳೂ ಇಲ್ಲ ನಮ್ಮದೇನೂ ಘನಂದಾರಿ ಕೆಲಸ ಅಲ್ಲ. ನಿಮ್ಮ ಆಡಳಿತ ವರ್ಗ, ಹವಾಮಾನ ಇಲಾಖೆಯ ಸಕಾಲಿಕ ಮುನ್ಸೂಚನೆ, ಮುಂಜಾಗ್ರತೆಯನ್ನು prompt ಆಗಿ ನಾವು ಜನತೆಗೆ ತಲುಪಿಸಿದೆವು. ಅದರಲ್ಲೇನು ದೊಡ್ಡಸ್ತಿಕೆ ಎಂದು ವಿನಮ್ರವಾಗಿ ಹೇಳಿದೆ.

ಮುಂದಿದೆ ನಾಡ ಕಟ್ಟುವ ಕೆಲಸ: ಇಷ್ಟೆಲ್ಲಾ ಆದ ಮೇಲೆ ಮಾಧ್ಯಮಗಳು ಇಷ್ಟಕ್ಕೇ ತನ್ನ ಬೆನ್ನು ತಟ್ಟಿಕೊಳ್ಳುತ್ತಾ ಸುಮ್ಮನೆ ಕೂರುವ ಹಾಗಿಲ್ಲ. ಮುಂದಿದೆ ಮಾಧ್ಯಮದ ನಿಜವಾದ ಕೆಲಸ. ಹೇಗೆಂದರೆ ಸದ್ಯ ಬದುಕಿದೆಯಾ ಬಡಜೀವವೇ ಎಂದು ಸರಕಾರಿ ಆಡಳಿತ ಈಗ ಸ್ವಲ್ಪವೇ ಎಚ್ಚರ ತಪ್ಪಿದರೂ ಅಥವಾ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡರೂ ಮುಂದಿದೆ ಭಾರಿ ಆಪತ್ತು.

ಹಾಗಾಗಿ ಮಾಧ್ಯಮದ ಕ್ಯಾಮರಾಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸರಕಾರಿ ಆಡಳಿತದ ಬೆನ್ನು ಹತ್ತಬೇಕಿದೆ. ಎಲ್ಲಿಗೆ ಬಂತು ಪರಿಹಾರ ಕಾರ್ಯಗಳು ಎಂದು ಅನುಕ್ಷಣವೂ ಆಡಳಿತವನ್ನು ಕಾಡಬೇಕಾಗುತ್ತದೆ. ಸಂತ್ರಸ್ತಗೊಂಡ ಕೊನೆಯ ಪ್ರಜೆಗೆ ಪುನರ್ವಸತಿ ದಕ್ಕುವವರೆಗೂ ಮಾಧ್ಯಮ ಮೈಮರೆಯುವಂತಿಲ್ಲ. ಜನಜೀವನ ಸಹಜ ಸ್ಥಿತಿಗೆ ಬರಲು ಅನೇಕ ದಿನಗಳೇ ಬೇಕಾಗಬಹುದು. ಆದರೆ ಪರಿಹಾರ ಕಾರ್ಯಾಚರಣೆ ಚುರುಕಾಗಿ ನಡೆಯಬೇಕಿದೆ.

Cyclone Phailin- ಮುಂಜಾಗ್ರತೆ ಇಲ್ಲದೇ ಇದ್ದಿದ್ದರೆ ಗತಿಯೇನು?

Cyclone Phailin- ಮುಂಜಾಗ್ರತೆ ಇಲ್ಲದೇ ಇದ್ದಿದ್ದರೆ ಗತಿಯೇನು?

ಆದರೆ ಯೋಚಿಸಿ ನೋಡಿ. ದಢಾರನೆ/ ದಿಢೀರನೆ ಈ ಪಾಟಿಯ ಫಿಲೈನ್ ಚಂಡಮಾರುತ ನಟ್ಟನಡು ರಾತ್ರಿ ಅಪ್ಪಳಿಸಿದ್ದರೆ ಗತಿಯೇನು ಎಂಬುದನ್ನು?. ಸುಮಾರು ಮೂರ್ನಾಲ್ಕು ಲಕ್ಷ ಮನೆಗಳೇ ಬಿದ್ದುಹೋಗಿವೆ. ಹಾಗಾದರೆ ಮುಂಜಾಗ್ರತೆ ಇಲ್ಲದೇ ಇದ್ದಿದ್ದರೆ/ ಅವರೆಲ್ಲಾ ಸ್ಥಳಾಂತರವಾಗದೇ ಇದ್ದಿದ್ದರೆ ಮನೆಯಲ್ಲಿದ್ದ ಗತಿಯೇನಾಗಬೇಕಿತ್ತು.

Cyclone Phailin-ಹಿಂದಿನ ದುರಂಗಳನ್ನು ನೆನಪಿಸಿಕೊಂಡರೆ

Cyclone Phailin-ಹಿಂದಿನ ದುರಂಗಳನ್ನು ನೆನಪಿಸಿಕೊಂಡರೆ

ಈ ಹಿಂದೆ 1999ರಲ್ಲಿ ಇದೇ ಪ್ರಮಾಣದ ಚಂಡಮಾರುತ ಬಡಿದಾಗ ಕನಿಷ್ಠ 10,000 ಮಂದು ಅಸುನೀಗಿದ್ದರು. ಆಗಿನ ದುರಂತವನ್ನು ನೆನಪಿಸಿಕೊಂಡರೇನೇ ಸಾಕು. ಇನ್ನು, ಅಮೆರಿಕದಂತಹ ಅಮೆರಿಕವೇ 2005ರಲ್ಲಿ ಕತ್ರಿನಾ ಚಂಡಮಾರುತಕ್ಕೆ ಸಿಕ್ಕಿ ಪತರಗುಟ್ಟಿತ್ತು. ಅಂತಹುದರಲ್ಲಿ ಭಾರತ ಈ ಬಾರಿ ಪ್ರಕೃತಿಗೆ ಸಡ್ಡು ಹೊಡೆದಿದ್ದು ದಿಟವೇ ಸರಿ.

ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ

ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ

ಹಾಗೆ ನೋಡಿದರೆ ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ದೊಡ್ಡ ಪ್ರಾಕೃತಿಕ ವಿಕೋಪವನ್ನು ಯಶಸ್ವಿಯಾಗಿ ಹಿಮ್ಮೆಟ್ಟಲಾಗಿದೆ. ಮುಂಜಾಗ್ರತೆ ಕ್ರಮವಾಗಿ 90 ಪಟ್ಟಣಗಳು, 35,000 ಗ್ರಾಮಗಳಿಂದ 9 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಾಗಾಗಿ ಸಾವಿನ ಸಂಖ್ಯೆ ನಗಣ್ಯವೆನ್ನಬಹುದಾದ 30ರ ಆಸುಪಾಸಿಗೆ ತೃಪ್ತಿಪಡಬೇಕಾಯಿತು.

National Disaster Managaement Authority ಷಹಬ್ಬಾಸ್

National Disaster Managaement Authority ಷಹಬ್ಬಾಸ್

ಆರು ತಿಂಗಳ ಹಿಂದೆ ಕೇದಾರನಾಥದಲ್ಲಿ ಶಿವ ತಾಂಡವ ನೃತ್ಯ ನಡೆದಾಗ ದಯನೀಯ ಸೋಲು ಕಂಡಿದ್ದ National Disaster Managaement Authority ಈ ಬಾರಿ ಷಹಬ್ಬಾಸ್ ಗಿರಿಗೆ ಪಾತ್ರವಾಗಿದೆ. ಸಕಾಲದಲ್ಲಿ ಸಂತ್ರಸ್ತರ ಕೈಹಿಡಿದೆ. ವಾಯುಪಡೆ, ನೌಕಾಪಡೆಗಳು ಸೈ ಎನಿಸಿಕೊಂಡಿವೆ.

ಹವಾಮಾನ ಇಲಾಖೆಗಳಿಗೆ ಒಂದು ದೊಡ್ಡ ಥ್ಯಾಂಕ್ಸ್

ಹವಾಮಾನ ಇಲಾಖೆಗಳಿಗೆ ಒಂದು ದೊಡ್ಡ ಥ್ಯಾಂಕ್ಸ್

ಎಲ್ಲಕ್ಕಿಂತ ಹೆಚ್ಚಾಗಿ ಸಕಾಲದಲ್ಲಿ ಎಚ್ಚರಿಸಿದ ಭಾರತದ ಹವಾಮಾನ ಇಲಾಖೆ ಸೇರಿದಂತೆ ಅಮೆರಿಕ ಮತ್ತು ಬ್ರಿಟನ್ ಹವಾಮಾನ ಇಲಾಖೆಗಳಿಗೂ ಒಂದು ದೊಡ್ಡ ಥ್ಯಾಂಕ್ಸ್ ಹೇಳಬೇಕಿದೆ. ನಿಜಕ್ಕೂ ಮೂರು ದಿನಕ್ಕೆ ಮುಂಚೆಯೆ ಗಂಡಾಂತರದ ಬಗ್ಗೆ ಇನ್ನಿಲ್ಲದ ಎಚ್ಚರಿಕೆ ರವಾನಿಸಿ, ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ.

ವಿನಾಶಕಾರಿ Phailinಗೆ ಬ್ರೇಕ್ ಹಾಕಿದವರು ಯಾರು?:

ವಿನಾಶಕಾರಿ Phailinಗೆ ಬ್ರೇಕ್ ಹಾಕಿದವರು ಯಾರು?:

ಇವುಗಳ ಮಧ್ಯೆ ನಿಜಕ್ಕೂ ಗಣನೀಯ ಕೆಲಸ ಮಾಡಿದವರು ಒಬ್ಬ ಹಿರಿಯ ಸಂಶೋಧಕ. ಅವರ ಬಗ್ಗೆ ಮುಂದಿನ ಲೇಖನದಲ್ಲಿ ಸವಿವರ ಪ್ರಕಟವಾಗಲಿದೆ. ಮಿಸ್ ಮಾಡಿಕೊಳ್ಳದೆ ಲೇಖನದಲ್ಲಿ ಅವರನ್ನು ಮೀಟ್ ಮಾಡಿ.

English summary
Cyclone Phailin was it Media Hype or Timely precaution mitigated natural disaster. Whatever it may be these lakhs of people were saved by commendable pre-emptive measures by administration in states of Andra Pradesh and Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X