ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರೂ ನಮ್ಮನ್ನು ಒಪ್ಪಿಕೊಂಡಿದ್ದಾರೆ, ನೀವೂ ಒಪ್ಪಿಕೊಳ್ಳಿ: ಭಾರತಕ್ಕೆ ಫೈಜರ್ ಬೇಡಿಕೆ

|
Google Oneindia Kannada News

ನವದೆಹಲಿ, ಜನವರಿ 26: ಭಾರತವು ಎರಡು ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಫೈಜರ್ ಲಸಿಕೆ ಸಂಸ್ಥೆ ಕೂಡ ತನ್ನ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಭಾರತವನ್ನು ಕೋರಿದೆ.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲ ಲಸಿಕೆಗಳಿಗಿಂತ ಮೊದಲ ಬಾರಿಗೆ ಅಮೆರಿಕದಲ್ಲಿ ಅನುಮತಿ ಪಡೆಯುವ ಮೂಲಕ ಬಳಕೆಗೆ ಲಭ್ಯವಾಗಿದ್ದ ಫೈಜರ್, ಭಾರತದಲ್ಲಿಯೂ ತುರ್ತು ಬಳಕೆಗೆ ಅನುಮತಿ ಕೋರಿದ್ದ ಮೊದಲ ಸಂಸ್ಥೆಯಾಗಿತ್ತು. ಆದರೆ ದುಬಾರಿ ವೆಚ್ಚದ ಹಾಗೂ ನಿರ್ವಹಣೆಯ ಸವಾಲು ಹೆಚ್ಚಿರುವ ಫೈಜರ್ ಲಸಿಕೆಯ ಬಳಕೆಗೆ ಅನುಮೋದನೆ ನೀಡದ ಭಾರತ, ಅದಕ್ಕಿಂತ ಕಡಿಮೆ ವೆಚ್ಚ ಹಾಗೂ ಸುಗಮ ನಿರ್ವಹಣೆಯ ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳಿಗೆ ಅನುಮತಿ ನೀಡಿತ್ತು.

ಕೊರೊನಾ ಲಸಿಕೆ ತೆಗೆದುಕೊಳ್ಳಲು 60% ಮಂದಿ ಸಿದ್ಧರಿಲ್ಲ; ಕಾರಣ ಏನು?ಕೊರೊನಾ ಲಸಿಕೆ ತೆಗೆದುಕೊಳ್ಳಲು 60% ಮಂದಿ ಸಿದ್ಧರಿಲ್ಲ; ಕಾರಣ ಏನು?

ಕಂಪೆನಿಯು ಡಿಸೆಂಬರ್‌ ಆರಂಭದಲ್ಲಿ ಅರ್ಜಿ ಸಲ್ಲಿಸಿದ್ದರೂ ಅದರ ಅಧಿಕಾರಿಗಳು ಸಭೆಗೆ ಹಾಜರಾಗುವಲ್ಲಿ ವಿಫಲರಾಗಿದ್ದರು. ಲಸಿಕೆಯ ಸುರಕ್ಷತೆ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಸಣ್ಣ ಪ್ರಮಾಣದ ಪ್ರಯೋಗ ನಡೆಸದೆಯೇ ಮತ್ತು ಭಾರತೀಯರಲ್ಲಿ ಪ್ರತಿರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಯಾವ ಖಾತರಿಯೂ ಇಲ್ಲದೆ ಬಳಕೆಗೆ ಅನುಮತಿ ನೀಡಲು ಆಗುವುದಿಲ್ಲ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮನವಿಯನ್ನು ತಿರಸ್ಕರಿಸಿದೆ. ಮುಂದೆ ಓದಿ.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ, ನೀವೂ ಒಪ್ಪಿಕೊಳ್ಳಿ

ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ, ನೀವೂ ಒಪ್ಪಿಕೊಳ್ಳಿ

ತನ್ನ ಜಾಗತಿಕ ಅಧ್ಯಯನದ ದತ್ತಾಂಶದ ಆಧಾರದಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ. ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸುರಕ್ಷೆಯ ಸಮಸ್ಯೆಗಳಿಲ್ಲದೆ ಶೇ 95ರಷ್ಟು ಪರಿಣಾಮಕಾರಿ ಎಂದು ಒಟ್ಟಾರೆ ದಕ್ಷತೆಯ ಪ್ರಮಾಣವನ್ನು ಅದು ನೀಡಿದೆ. ಇದೇ ದತ್ತಾಂಶದ ಆಧಾರದಲ್ಲಿ ಬ್ರಿಟನ್, ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಕೆನಡಾಗಳಲ್ಲಿ ಲಸಿಕೆ ಬಳಸಲಾಗುತ್ತಿದೆ ಎಂದು ಫೈಜರ್ ವಾದ ಮುಂದಿಟ್ಟಿದೆ.

ನಿಯಮಕ್ಕೆ ಅನುಗುಣವಾಗಿವೆ

ನಿಯಮಕ್ಕೆ ಅನುಗುಣವಾಗಿವೆ

'ಫೈಜರ್ ಸಂಗ್ರಹಿಸಿದ ದತ್ತಾಂಶಗಳನ್ನು ಅನೇಕ ಔಷಧ ನಿಯಂತ್ರಣ ಸಂಸ್ಥೆಗಳು ಅನುಮೋದಿಸಿವೆ. ಅವು ಈ ದತ್ತಾಂಶಗಳ ಆಧಾರದಲ್ಲಿ ತುರ್ತು ಬಳಕೆಗೂ ಅನುಮತಿ ನೀಡಿವೆ. ಸರ್ಕಾರದ ಪೂರೈಕೆಗೆ ನಮ್ಮ ವಿಶಿಷ್ಟ ಆದ್ಯತೆಯೊಂದಿಗೆ ನಾವು ಜಗತ್ತಿನ ಇತರೆ ಕಡೆಗಳಲ್ಲಿ ಮಾಡಿರುವಂತೆ ನಿಯಮ ಪ್ರಕ್ರಿಯೆಗಳನ್ನು ನಡೆಸುತ್ತೇವೆ' ಎಂದು ಫೈಜರ್ ಸಂಸ್ಥೆಯು ಸ್ಥಳೀಯ ಪ್ರಯೋಗದ ಬೇಡಿಕೆ ಸೇರಿದಂತೆ ಭಾರತದ ಪ್ರಶ್ನೆಗಳಿಗೆ ಇ-ಮೇಲ್ ಉತ್ತರ ನೀಡಿದೆ.

ಭಾರತದಲ್ಲಿ 19.5 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ 19.5 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ

ಯುರೋಪಿಯನ್ ದೇಶಗಳ ಆರೋಪ

ಯುರೋಪಿಯನ್ ದೇಶಗಳ ಆರೋಪ

ಕಳೆದ ವಾರ ಯುರೋಪಿಯನ್ ಒಕ್ಕೂಟದ ಕೆಲವು ದೇಶಗಳಲ್ಲಿ ಫೈಜರ್ ತನ್ನ ಲಸಿಕೆ ಪೂರೈಕೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಕೆಲವು ದೇಶಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಲಸಿಕೆ ಖರೀದಿಸಲು ಒತ್ತಾಯ

ಲಸಿಕೆ ಖರೀದಿಸಲು ಒತ್ತಾಯ

ಭಾರತವು ಫೈಜರ್ ಮತ್ತು ಮಾಡೆರ್ನಾ ಲಸಿಕೆಗಳ ಸಂಸ್ಥೆಗಳೊಂದಿಗೆ ಈ ಹಿಂದೆ ಮಾತುಕತೆ ನಡೆಸಿತ್ತು. ಹೀಗಾಗಿ ಭಾರತವು ತನ್ನ ಲಸಿಕೆಯನ್ನು ಬಳಸಲು ಆಸಕ್ತಿ ಹೊಂದಿದ್ದರೆ, ಲಸಿಕೆಯನ್ನು ಖರೀದಿಸುವಂತೆ ಫೈಜರ್ ಬೇಡಿಕೆ ಇರಿಸಿದೆ. ಒಂದು ವೇಳೆ ದೇಶದಲ್ಲಿ ಲಸಿಕೆ ಪ್ರಯೋಗ ನಡೆಸದೆ ಹಾಗೆಯೇ ಅದನ್ನು ಖರೀದಿಸಿ ಬಳಕೆಗೆ ಶುರುಮಾಡುವುದು ಅಪಾಯಕಾರಿ ಎಂದು ಭಾರತ ಅಭಿಪ್ರಾಯಪಟ್ಟಿದೆ.

English summary
Pfizer Inc wants to request India to approve its Covid-19 vaccine for emergency use without local trails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X