ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯವಿಲ್ಲ: ಹರ್ಷವರ್ಧನ್

|
Google Oneindia Kannada News

ನವದೆಹಲಿ, ನವೆಂಬರ್ 24: ಭಾರತಕ್ಕೆ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ದೇಶದಲ್ಲಿರುವ ಇತರೆ ಕೊರೊನಾ ಲಸಿಕೆಗಳು ಭರವಸೆಯ ಫಲಿತಾಂಶವನ್ನು ನೀಡುತ್ತಿದೆ ಹೀಗಾಗಿ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯ ದೇಶಕ್ಕಿಲ್ಲ ಎಂದಿದ್ದಾರೆ.

ಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆ ಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆ

ವರದಿ ಪ್ರಕಾರ ಬಯೋ ಎನ್‌ ಟೆಕ್‌ನ ಈ ಪಿಫೈಜರ್ ಕೊರೊನಾ ಲಸಿಕೆಗೆ ಯುಎಸ್ ರೆಗ್ಯುಲೇಟರಿ ಅಥಾರಿಟಿ ಇನ್ನು ಕೂಡ ಒಪ್ಪಿಗೆ ನೀಡಿಲ್ಲ. ಹಾಗಿದ್ದಾಗ ಆ ಲಸಿಕೆಯನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಕನಿಷ್ಠ ಐದು ಕೊರೊನಾ ಲಸಿಕೆ ಅಭ್ಯರ್ಥಿಗಳಿದ್ದಾರೆ

ಭಾರತದಲ್ಲಿ ಕನಿಷ್ಠ ಐದು ಕೊರೊನಾ ಲಸಿಕೆ ಅಭ್ಯರ್ಥಿಗಳಿದ್ದಾರೆ

ಭಾರತದಲ್ಲಿ ಕನಿಷ್ಠ ಐದು ಕೊರೊನಾ ಲಸಿಕೆ ಅಭ್ಯರ್ಥಿಗಳಿದ್ದಾರೆ, ಸಾಕಷ್ಟು ಲಸಿಕೆಗಳು ಮಾನವ ಪ್ರಯೋಗದಲ್ಲಿದೆ. ಯಾವ ಕೊರೊನಾ ಲಸಿಕೆಗಳು ಎರಡು ಹಾಗೂ ಮೂರನೇ ಹಂತವನ್ನು ತಲುಪುತ್ತದೆಯೋ ಅದು ಬಳಕೆಗೆ ಯೋಗ್ಯವೆಂದು ಅರ್ಥ.

ಆಕ್ಸ್‌ಫರ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ

ಆಕ್ಸ್‌ಫರ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ

ಸೆರಂ ಇನ್‌ಸ್ಟಿಟ್ಯೂಟ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಆಸ್ಟ್ರಾಜೆನೆಕಾ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ. ಇನ್ನು ಭಾರತ್ ಬಯೋಟೆಕ್ ಹಾಗೂ ಐಸಿಎಂ ಆರ್ ಅಭ್ಯರ್ಥಿ ಕೋವ್ಯಾಕ್ಸಿನ್ ಪ್ರಯೋಗವು ಕೂಡ ನಡೆಯುತ್ತಿದೆ. ಯಾವುದೇ ಸಂದರ್ಭದಲ್ಲಾದರೂ ಎರಡನೇ ಹಂತದ ವರದಿ ಬರಬಹುದು.

ಸ್ಪುಟ್ನಿಕ್ V ಲಸಿಕೆ ಪ್ರಯೋಗ

ಸ್ಪುಟ್ನಿಕ್ V ಲಸಿಕೆ ಪ್ರಯೋಗ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಪ್ರಯೋಗವನ್ನು ಭಾರತದ ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ಆರಂಭಿಸಲಾಗುತ್ತಿದೆ. ಈ ಲಸಿಕೆಯು ಕೂಡ ಕೊರೊನಾ ವಿರುದ್ಧ ಹೋರಾಡಬಹುದು ಎಂಬ ಭರವಸೆಯನ್ನು ಮೂಡಿಸಿದೆ.

Recommended Video

Covidನಿಂದ ಸಂಪೂರ್ಣ ಗುಣಮುಖರಾದವರು ಎಷ್ಟು ಜನ ಗೊತ್ತಾ | Oneindia Kannada
ಆಸ್ಟ್ರಾಜೆನೆಕಾ ಲಸಿಕೆ ಶೇ.90ರಷ್ಟು ಸುರಕ್ಷಿತ

ಆಸ್ಟ್ರಾಜೆನೆಕಾ ಲಸಿಕೆ ಶೇ.90ರಷ್ಟು ಸುರಕ್ಷಿತ

ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದು ಸೆರಂ ಇನ್‌ಸ್ಟಿಟ್ಯೂಟ್ ಹೇಳಿದೆ.ಜೊತೆಗೆ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ ಎಂದು ಕಂಪನಿ ತಿಳಿಸಿದೆ. ಮೊದಲಿಗೆ ಒಂದು ಡೋಸ್‌ ನೀಡಿ ನಂತರ ಒಂದು ತಿಂಗಳ ಬಳಿಕ ಅರ್ಧ ಡೋಸ್‌ ನೀಡಿದಾಗ ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಲಸಿಕೆಯು ಶೇ. 90ರಷ್ಟು ಯಶಸ್ವಿಯಾಗಿದೆ.
ಲಸಿಕೆಯ ಮಾನವರ ಮೇಲಿನ ಪರೀಕ್ಷೆಯ ಮಧ್ಯಂತರ ದತ್ತಾಂಶಗಳನ್ನು ಸಂಸ್ಥೆಯ ಸೋಮವಾರ ಬಿಡುಗಡೆ ಮಾಡಿದೆ. ಬ್ರಿಟನ್‌ ಮತ್ತು ಬ್ರೆಜಿನ್‌ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಇದು ಋಜುವಾತಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಪರಿಣಾಮಗಳೂ ಕಾಣಿಸಿಕೊಂಡಿಲ್ಲ ಎಂದು ಹೇಳಿದೆ.
ಕೊರೊನಾದ ವಿರುದ್ಧ ಲಸಿಕೆಯು ತುಂಬಾ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆಸ್ಟ್ರಾಝೆನಿಕಾ ಸಿಇಒ ಪಾಸ್ಕಲ್‌ ಸಾರಿಯಟ್‌ ಹೇಳಿದ್ದಾರೆ.

English summary
Union health minister Harsh Vardhan has reiterated that India may not require Pfizer’s vaccine against coronavirus disease (Covid-19), with other vaccine candidates being tested in the country showing promising results in safety trials so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X