ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರವೇ ಭಾರತಕ್ಕೆ ಫೈಜರ್ ಲಸಿಕೆ; ಅಂತಿಮ ಹಂತದಲ್ಲಿ ಅನುಮೋದನೆ ಪ್ರಕ್ರಿಯೆ

|
Google Oneindia Kannada News

ನವದೆಹಲಿ, ಜೂನ್ 23: ಅಮೆರಿಕ ಮೂಲದ ಫೈಜರ್ ಕೊರೊನಾ ಲಸಿಕೆಯು ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಫೈಜರ್ ಲಸಿಕೆಯ ಅನುಮೋದನೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿರುವುದಾಗಿ ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಮಾಹಿತಿ ನೀಡಿದೆ.

"ಭಾರತದಲ್ಲಿ ಫೈಜರ್ ಲಸಿಕೆ ಅನುಮೋದನೆ ಪಡೆಯುವ ಅಂತಿಮ ಹಂತದಲ್ಲಿದೆ. ಶೀಘ್ರವೇ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ" ಎಂದು ಸಂಸ್ಥೆಯ ಸಿಇಒ ಆಲ್ಬರ್ಟ್ ಬೌರ್ಲಾ ಭರವಸೆ ವ್ಯಕ್ತಪಡಿಸಿದ್ದಾರೆ.

ಕೋವಿಡ್ 19: 12-15 ವರ್ಷದವರೆಗೆ ಫೈಜರ್ ಲಸಿಕೆ ಬಳಕೆಗೆ ಅಮೆರಿಕ ಅನುಮತಿಕೋವಿಡ್ 19: 12-15 ವರ್ಷದವರೆಗೆ ಫೈಜರ್ ಲಸಿಕೆ ಬಳಕೆಗೆ ಅಮೆರಿಕ ಅನುಮತಿ

ಜರ್ಮನಿಯ ಬಯೋಂಟೆಕ್ ಜೊತೆಗೂಡಿ ಅಮೆರಿಕ ಸಂಸ್ಥೆ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕೊರೊನಾ ಸೋಂಕಿನ ವಿರುದ್ಧ ಈ ಲಸಿಕೆ 90% ಪರಿಣಾಮಕಾರಿ ಎಂದು ವರದಿಗಳು ತಿಳಿಸಿವೆ.

 Pfizer Corona Vaccine Soon Be Available In India

ಕಳೆದ ವಾರವಷ್ಟೆ, ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳ ಅನುಮೋದನೆಯ ಪ್ರಕ್ರಿಯೆ ನಡೆಯುತ್ತಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಹೇಳಿದ್ದರು.

ಇತರೆ ಅಂತರರಾಷ್ಟ್ರೀಯ ನಿಯಂತ್ರಕ ಸಂಸ್ಥೆಗಳಿಂದ ಅನುಮೋದನೆ ಪಡೆದುಕೊಂಡ ಕೊರೊನಾ ಲಸಿಕೆಗಳ ಪ್ರಯೋಗಗಳನ್ನು ಮತ್ತೆ ಇಲ್ಲಿ ನಡೆಸುವ ಅವಶ್ಯಕತೆಯಿಲ್ಲ ಎಂದು ಡಿಸಿಜಿಐ ಹೇಳಿತ್ತು. ಇದು ದೇಶದ ತುರ್ತು ಪರಿಸ್ಥಿತಿ ಎದುರಿಸಲು ಫೈಜರ್ ಮಾಡೆರ್ನಾದಂಥ ವಿದೇಶಿ ಲಸಿಕೆಗಳಿಗೆ ದಾರಿ ಮಾಡಿಕೊಡುವ ದೊಡ್ಡ ಕ್ರಮ ಎಂದು ಪರಿಗಣಿಸಲಾಗಿತ್ತು.

ಸದ್ಯಕ್ಕೆ ಭಾರತದಲ್ಲಿ ಭಾರತ್ ಬಯೋಟೆಕ್‌ನ ಕೋವಾಕ್ಸಿನ್, ಆಸ್ಟ್ರಾಜೆನೆಕಾ, ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಹಾಗೂ ರಷ್ಯಾದ ಸ್ಫುಟ್ನಿಕ್ ವಿ ಲಸಿಕೆಗಳನ್ನು ನೀಡಲಾಗುತ್ತಿದೆ. ಶೀಘ್ರವೇ ಫೈಜರ್ ಕೂಡ ಭಾರತಕ್ಕೆ ಬರುವ ನಿರೀಕ್ಷೆಯಿದೆ.

English summary
Pfizer's Covid vaccine may soon be available in India as the process of its approval is in the "final stages", the US pharmaceutical giant has said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X