ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಹೆಚ್ಚಾಯ್ತು ಇನ್ನು ಒಂಟೆ ಸವಾರಿಯೇ ಗತಿ!

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಕಳೆದ 4 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿ, ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್ 75.82 ರೂ, ಡೀಸೆಲ್ 67.5 ರೂ. ಇದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 65.93 ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ, ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಬೆಲೆ ಸಮತೋಲನ ಕಾಯ್ದುಕೊಳ್ಳಲಾಗಿದೆ. ಒಟ್ಟಾರೆ, ಅರುಣ್ ಜೇಟ್ಲಿ ಅವರು ಕೇಂದ್ರ ವಿತ್ತ ಸಚಿವರಾದ ಬಳಿಕ 9 ಸಲ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.

ಒಂದು ಇಯರ್ ಫೋನ್‌ ನಿಂದ ಹೋಯ್ತು 13 ಮಕ್ಕಳ ಪ್ರಾಣ! ಒಂದು ಇಯರ್ ಫೋನ್‌ ನಿಂದ ಹೋಯ್ತು 13 ಮಕ್ಕಳ ಪ್ರಾಣ!

ಪ್ರತಿ ಲೀಟರ್ ಪೆಟ್ರೋಲ್ ಗೆ 2 ರೂ. ಅಬಕಾರಿ ಸುಂಕ ಕಡಿಮೆ ಮಾಡಿ, ವ್ಯಾಟ್ ಇಳಿಕೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿತ್ತು. ಆದರೆ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸುಂಕ ಇಳಿಕೆ ಮಾಡಿದ್ದರೂ, ಉಳಿದ ರಾಜ್ಯಗಳು ವ್ಯಾಟ್ ಇಳಿಕೆ ಮಾಡಲಿಲ್ಲ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಹಿಂದುಸ್ತಾನ್ ಕಾರ್ಪೊರೇಷನ್ ಸಂಸ್ಥೆಗಳು ಕಳೆದ ಜೂನ್ ತಿಂಗಳಿನಲ್ಲಿ 15 ವರ್ಷಗಳ ಪದ್ಧತಿಯನ್ನು ಕೈಬಿಡಲಾಯಿತು. ಪ್ರತಿ ತಿಂಗಳ ಮೊದಲ ದಿನ ಹಾಗೂ 16ನೇ ದಿನದಂದು ಬೆಲೆ ಏರಿಕೆ ಮಾಡುವುದನ್ನು ಬಿಟ್ಟು ಪ್ರತಿದಿನ ಬೆಲೆ ಏರಿಳಿತಕ್ಕೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ದೇಶದಲ್ಲಿ ಶುಕ್ರವಾರ ನಡೆದ ಪ್ರಮುಖ ಘಟನೆಗಳ ತುಣಕನ್ನು ಓದೋಣ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು, ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನದಲ್ಲಿ ಕುಳಿತು ಧ್ಯಾನ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಚೀನಾಕ್ಕೆ ಭೇಟಿ ನೀಡಿದ್ದಾರೆ, ಅಲ್ಲಿನ ಪ್ರಮುಖ ಸ್ಥಳಗಳಿಗೆ ತೆರಳಿ ಅಲ್ಲಿನ ವಿಶೇಷತೆಯ ಪರಿಚಯ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಉರಿಬೇಸಿಗೆ ಪ್ರಾರಂಭವಾಗಿದೆ. ಮನುಷ್ಯರ ಜತೆಗೆ ಪ್ರಾಣಿಗಳೂ ಕೂಡ ನೀರಿಲ್ಲದೆ ಕಂಗಾಲಾಗಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಕಳೆದ 4 ವರ್ಷದಲ್ಲಾದ ಏರಿಕೆಗಿಂತ ಈ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆ ಕಂಡಿವೆ, ಪ್ರತಿನಿತ್ಯ ವಾಹನಗಳನ್ನು ಬಳಸುವುದೇ ಕಷ್ಟಕರವಾಗಿದೆ ಎಂದು ಅಹಮದಾಬಾದಿನಲ್ಲಿ ಜನರು ಒಂಟೆಯ ಸವಾರಿ ಮಾಡುವ ಮೂಲಕ ಪ್ರತಿಭಟಿಸಿ ಗಮನ ಸೆಳೆದರು.

ನಲ್ಲಿಯಲ್ಲಿ ಬರುವ ಒಂದು ಹನಿ ನೀರಿಗಾಗಿ ಕಾದುಕುಳಿತಿರುವ ಕೋತಿ

ನಲ್ಲಿಯಲ್ಲಿ ಬರುವ ಒಂದು ಹನಿ ನೀರಿಗಾಗಿ ಕಾದುಕುಳಿತಿರುವ ಕೋತಿ

ದೇಶಾದ್ಯಂತ ನೀರಿಗಾಗಿ ಹಾಹಾಕಾರ ಶುರುವಾಗಿದೆ, ಕೆಲವು ರಾಜ್ಯಗಳಲ್ಲಿ ಮಾತ್ರ ನೀರಿಗೆ ಅಷ್ಟು ಸಮಸ್ಯೆ ಕಂಡುಬಂದಿಲ್ಲ, ಆದರೆ ರಾಜಸ್ತಾನ, ಅಲಹಾಬಾದ್‌ ಪ್ರದೇಶದಲ್ಲಿ ನೀರಿಗೆಗೆ ಹಾಹಾಕಾರ ಎದ್ದಿದೆ. ಮನುಷ್ಯರಿಗೆ ನೀರಿಲ್ಲದಿದ್ದಾಗ, ಪ್ರಾಣಿಗಳು ನೀರನ್ನು ಎಲ್ಲಿಂದ ಪಡೆಯಬೇಕು. ಕೋತಿಯೊಂದು ನಲ್ಲಿಯ ಬಳಿ ಕುಳಿತು ಅಲ್ಲಿಂದ ಬರುವ ಒಂದೊಂದೆ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ

ಅಪಘಾತದ ಬಳಿಕ ಕಾರಿಗೆ ಬೆಂಕಿ, ಸುಟ್ಟು ಭಸ್ಮ

ಅಪಘಾತದ ಬಳಿಕ ಕಾರಿಗೆ ಬೆಂಕಿ, ಸುಟ್ಟು ಭಸ್ಮ

ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್ ವೇ ಬಳಿ ಇರುವ ಶಂಕರ್ ಸೌಕ್ ಫ್ಲೈಓವರ್ ಬಳಿ ಕಾರು ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಕಾರಿಗೆ ಬೆಂಕಿ ತಗುಲಿದ್ದು, ಸ್ಥಳದಲ್ಲೇ ಕಾರು ಸುಟ್ಟು ಭಸ್ಮವಾಗಿದೆ.

ಪ್ರಧಾನಿ ಮೋದಿ ಚೀನಾ ಭೇಟಿ

ಪ್ರಧಾನಿ ಮೋದಿ ಚೀನಾ ಭೇಟಿ

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಎರಡು ದಿನಗಳ ಅನೌಪಚಾರಿಕ ಸರಣಿ ಮಾತುಕತೆ ನಡೆಸುವ ಸಲುವಾಗಿ ಚೀನಾದ ವುಹಾನ್ ನಗರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.ದೋಕಲಾ ಬಿಕ್ಕಟ್ಟಿನ ಬಳಿಕ ಉಭಯ ದೇಶಗಳ ನಾಯಕರು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಎರಡೂ ರಾಷ್ಟ್ರಗಳ ನಡುವಣ ಉದ್ವಿಗ್ನತೆಯನ್ನು ಶಮನ ಮಾಡಲು ಈ ಸಭೆ ನೆರವಾಗಲಿದೆ ಎಂಬ ಭರವಸೆ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರದು ಇದು ಚೀನಾಕ್ಕೆ ಎರಡನೆಯ ಭೇಟಿ. ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಚೀನಾಕ್ಕೆ ಎರಡು ಬಾರಿ ಭೇಟಿ ನೀಡುತ್ತಿರುವುದು ಇದೇ ಮೊದಲು.

ಸಾಂಪ್ರದಾಯಿಗ ಉಡುಗೆಯೊಂದಿಗೆ ರಾಹುಲ್ ಗಾಂಧಿ

ಸಾಂಪ್ರದಾಯಿಗ ಉಡುಗೆಯೊಂದಿಗೆ ರಾಹುಲ್ ಗಾಂಧಿ

ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥನ ದರ್ಶನ ಪಡೆದರು. ಬಳಿಕ ಕೆಲ ನಿಮಿಷಗಳ ಧ್ಯಾನವನ್ನೂ ಮಾಡಿದರು.

English summary
Many protestors go on camel ride in Ahmadabad on Friday, agitating drastic hike in petrol price in last four years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X